ನವದೆಹಲಿ(ಮೇ.31): ಯೋಗ ಮಾಡುತ್ತಿರುವ ವ್ಯಕ್ತಿಯೊಬ್ಬರ ಬ್ಲ್ಯಾಕ್‌ ಆಂಡ್‌ ವೈಟ್‌, ಹಳೇ ಕಾಲದ ವಿಡಿಯೋ ಒಂದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೇ ಈ ವಿಡಿಯೋ ಪ್ರಧಾನಿ ನರೇಂದ್ರ ಮೋದಿ ಯುವಕರಾಗಿದ್ದಾಗಿನ ವಿಡಿಯೋ ಎನ್ನಲಾಗಿದೆ. ಆದರೆ ಇದು ನಿಜಾನಾ? ಈ ವಿಡಿಯೋದಲಲಿರುವ ವ್ಯಕ್ತಿ ಪಿಎಂ ನರೇಂದ್ರ ಮೋದಿನಾ?

ಸದ್ಯ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಈ ವಿಡಿಯೋದಲ್ಲಿರುವ ತಪಸ್ವಿಯನ್ನು ಗುರುತಿಸಿ, ಇವರೇ ಈಗ ದೇಶದ ಪ್ರಧಾನಿಯಾಗಿದ್ದಾರೆ. ಇದೊಂದು ಅದ್ಭುತ ಹಾಘೂ ಅಪರೂಪದ ವಿಡಿಯೋ ಆಗಿದೆ. ನೀವೂ ಅಚ್ಚರಿಗೀಡಾಗುತ್ತೀರಿ ಎಂಬ ಸಂದೇಶವೂ ಇದರೊಂದಿಗೆ ಶೇರ್ ಮಾಡಲಾಗಿದೆ. ಫೇಸ್‌ಬುಕ್ ಹಾಗೂ ಟ್ವಿಟರ್‌ ಎರಡೂ ಪ್ಲಾಟ್‌ಫಾರಂಗಳಲ್ಲಿ ಇದು ಭಾರೀ ರಿದಾಡುತ್ತಿದೆ.

ಅದರಲ್ಲೂ ವಿಶೇಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಮಾನಿಗಳು ಹಾಗೂ ಕಂಗನಾ ರಣಾವತ್ ಅಭಿಮಾನಿ ಬಳಗದ ಪೇಜ್‌ನಲ್ಲೂ ಇದು ಹರಿದಾಡುತ್ತಿದೆ. ಅಲ್ಲದೇ ಒಪ್ರಧಾನ ಮೋದಿಯವರ ಯಶಸ್ಸಿನ ಹಿಂದಿನ ರಹಸ್ಯ ಯೋಗ. ಪಿಎಂ ಮೋದಿ 35 ವರ್ಷದವರಿದ್ದಾಗ ತೆಗೆದ ವಿಡಿಯೋ ಇದಾಗಿದ್ದು, ಇದಾದ ಬಳಿಕ ಅವರು ಅಪಾಯ ಯಶಸ್ಸು ಗಳಿಸಿದ್ದಾರೆ ಎಂದೂ ಅನೇಕ ಮಂದಿ ಬರೆದಿದ್ದಾರೆ. 

ಆದರೆ ಈ ಪರಿಯಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಯಾರದ್ದು?

ಈ ವಿಡಿಯೋದಲ್ಲಿರುವುದು ಪಿಎಂ ಮೋದಿನಾ ಎಂದು ಹುಡುಕಾಡುವಾಗ ಬೇರೆಯೇ ವಿಚಾರ ಬೆಳಕಿಗೆ ಬಂದಿದೆ. ಹೌದು ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಡಿದಾಗ ಮೇ 31, 2009ಲ್ಲಿ ಅಪ್ಲೋಡ್‌ ಮಾಡಿರುವ ವಿಡಿಯೋವೊಂದು ಕಾಣಿಸಿಕೊಂಡಿದೆ. ಇದರಲ್ಲಿ ವಿಡಿಯೋದಲ್ಲಿರುವ ವ್ಯಕ್ತಿ ಬೆಳ್ಳೂರ್ ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್ ಹಾಗೂ ತಿರುಮಲೈ ಕೃಷ್ಣಮಾಚಾರ್ಯ ಎಂದು ಹೇಳಲಾಗಿದೆ. ಇನ್ನು ವಿಡಿಯೋದಲ್ಲಿರುವ ವಿವರಣೆ ಅನ್ವಯ ಇದು 1938 ಇಸವಿಯದ್ದಾಗಿದೆ. ಇನ್ನು ಪ್ರಧಾನಿ ಮೋದಿ ಜನಿಸಿದ್ದೇ 1950ರ ಸೆಪ್ಟೆಂಬರ್ 17ರಂದು. ಹೀಗಿರುವಾಗ ಈ ವಿಡಿಯೋfದಲ್ಲಿರುವ ವ್ಯಕ್ತಿ ಪ್ರಧಾನಿ ಮೋದಿ ಎಂಬುವುದು ಸತ್ಯಕ್ಕೆ ದೂರವಾದ ಮಾತಾಗಿದೆ. 

ಇದೇ ವೇಳೆ ಮೇ 12, 2006ರಂದು ಅಪ್ಲೋಡ್‌ ಮಾಡಲಾದ ಮತ್ತೊಂದು ವಿಡಿಯೋ ಕೂಡಾ ಲಭಿಸಿದೆ. ಇನ್ನು ಈ ವಿಡಿಯೋ ವಿವರಣೆಯಲ್ಲೂ ಯೋಗ ಮಾಡುತ್ತಿರುವ ವ್ಯಕ್ತಿ ಬಿಕೆಎಸ್‌ ಐಯ್ಯಂಗಾರ್‌ ಎನ್ನಲಾಗಿದೆ. ಪ್ರಸಿದ್ಧ ಯೋಗ ಗುರುಗಳಾಗಿದ್ದ ಅವರು ಐಯ್ಯಂಗಾರ್‌ ಯೋಗ ಶೈಲಿಯ ಜನಕರೆಂದೂ ಹೆಸರುವಾಸಿಯಾಗಿದ್ದಾರೆ. ಇನ್ನು ಅವರ ಹಳೇ ಫೋಟೋ ಹಾಗೂ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಹೋಲಿಸಿದಾಗ ಹಲವಾರು ಸಾಮ್ಯತೆಗಳು ಕಂಡು ಬಂದಿವೆ.

ಹೀಗಾಗಿ ಎಲ್ಲಾ ವಿಚಾರವನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ವೈರಲ್ ಸಂದೇಶ ಸುಳ್ಳಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಪಿಎಂ ಮೋದಿಯಲ್ಲ ಎಂಬುವುದು ಸತ್ಯ.