Fact Check: ಭಾರತೀಯ ರೈಲ್ವೇಯ ಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿ 2022 ನೋಟೀಸ್ ನಕಲಿ!
ಭಾರತೀಯ ರೈಲ್ವೇ ಸಂರಕ್ಷಣಾ ಪಡೆ ಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿ 2022 ನೇಮಕಾತಿ ಕುರಿತ ವೈರಲ್ ಸುದ್ದಿಗಳು ನಕಲಿಯಾಗಿದ್ದು, ಅಂತಹ ಯಾವುದೇ ಅಧಿಸೂಚನೆಯನ್ನು ಸಂಸ್ಥೆ ಹೊರಡಿಸಿಲ್ಲ ಎಂದು ಭಾರತೀಯ ರೈಲ್ವೇ ಸೋಮವಾರ (ಜನವರಿ 10) ಹೇಳಿದೆ.
Fact Check: ಸಾಮಾಜಿಕ ಜಾಲತಾಣ ಹಾಗೂ ಇಂಟರ್‌ನೆಟ್ ಫೋರ್ಟ್‌ಲ್‌ಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿರುವ ಉದ್ಯೋಗ ಅವಕಾಶಗಳ (Job Opportunities) ಬಗ್ಗೆ ಸಾಕಷ್ಟು ಲಿಂಕ್ಸ್ ಹಾಗೂ ಸುದ್ದಿಗಳು ಹರಿದಾಡುತ್ತವೆ. ಈ ಲಕ್ಷಾಂತರ ಲಿಂಕ್‌ಗಳ ಮಧ್ಯೆ ಅಸಲಿ ಮತ್ತು ನಕಲಿ ನೇಮಕಾತಿಗಳ ಗುರುತಿಸುವುದೇ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಚಾಲೆಂಜ್. ಉದ್ಯೋಗ ಹುಡುಕುವವರನ್ನು ದಾರಿ ತಪ್ಪಿಸಲೆಂದೇ ಹಲವು ವೆಬ್‌ಸೈಟ್‌ಗಳನ್ನು ತಯಾರಿಸಲಾಗಿರುತ್ತದೆ. ಹೀಗೆ ಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿ 2022ರ ಹೆಸರಿನಲ್ಲಿ ಸಂದೇಶವೊಂದು ಸಾಮಾಜಿಕ ಜಾಲತಾಣ ಹಾಗೂ ಕೆಲವು ವೆಬ್ ಸೈಟ್‌ಗಳಲ್ಲಿ ಹರಿದಾಡುತ್ತಿದೆ.
ಆದರೆ ಭಾರತೀಯ ರೈಲ್ವೇ ಸಂರಕ್ಷಣಾ ಪಡೆ (RPF Recruitment) ಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿ 2022 ನೇಮಕಾತಿ ಕುರಿತ ವೈರಲ್ ಸುದ್ದಿಗಳು ನಕಲಿಯಾಗಿದ್ದು, ಅಂತಹ ಯಾವುದೇ ಅಧಿಸೂಚನೆಯನ್ನು ಸಂಸ್ಥೆ ಹೊರಡಿಸಿಲ್ಲ ಎಂದು ಭಾರತೀಯ ರೈಲ್ವೇ ಸೋಮವಾರ (ಜನವರಿ 10) ಹೇಳಿದೆ. ಈ ಸುದ್ದಿಯ ಬಗ್ಗೆ ಸ್ಪಷ್ಟೀಕರಣವನ್ನು ನೀಡಿರುವ ಭಾರತೀಯ ರೈಲ್ವೇ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ (Indian Railways Twitter) ಈ ನೇಮಕಾತಿ ಹಿಂದಿನ ಸತ್ಯವನ್ನು ಸ್ಪಷ್ಟಪಡಿಸಿದೆ.
“ಕೆಲವು ವೆಬ್‌ಸೈಟ್‌ಗಳು ಭಾರತೀಯ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿ 2022 ಪರೀಕ್ಷೆಯ ಮೂಲಕ ನೇಮಕಾತಿ ನಡೆಸುತ್ತಿದೆ ಎಂದು ಹೇಳಿಕೊಳ್ಳುವ ಸೂಚನೆಯನ್ನು ಪ್ರಕಟಿಸಿವೆ. ಅಂತಹ ಯಾವುದೇ ನೇಮಕಾತಿ ಪ್ರಕಟಣೆಯನ್ನು ಆರ್‌ಪಿಎಫ್: ಭಾರತೀಯ ರೈಲ್ವೇಸ್ ಪ್ರಕಟಿಸಿಲ್ಲ, ”ಎಂದು ಟ್ವೀಟ್ ಮಾಡಿದೆ.
ಕಳೆದ ಕೆಲವು ದಿನಗಳಿಂದ, ಭಾರತೀಯ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (ಆರ್‌ಪಿಎಸ್‌ಎಫ್) ಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿ 2022 ಪರೀಕ್ಷೆಯ ಮೂಲಕ ಪುರುಷ ಮತ್ತು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂಬ ಸೂಚನೆ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆರ್‌ಪಿಎಫ್‌ನಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ನಕಲಿ ನೋಟಿಸ್‌ನಲ್ಲಿ ಹೇಳಲಾಗಿದೆ. ಆದರೆ ಇದನ್ನು ನಕಲಿ ಎಂದು ಕರೆದ ರೈಲ್ವೇ ಸಂಸ್ಥೆ, ಅಂತಹ ಯಾವುದೇ ಪರೀಕ್ಷೆ ಅಥವಾ ನೇಮಕಾತಿ ಡ್ರೈವ್ ಅನ್ನು ನಡೆಸುತ್ತಿಲ್ಲ ಮತ್ತು ನೋಟಿಸ್ ಅನ್ನು ನಂಬಬೇಡಿ ಎಂದು ಅಭ್ಯರ್ಥಿಗಳನ್ನು ಒತ್ತಾಯಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ನೋಡಲ್ ಸಂಸ್ಥೆ ಪಿಬಿಐ (PBI) ಕೂಡ ಫ್ಯಾಕ್ಟ್ ಚೆಕ್ ಮಾಡಿದ್ದು ಇದನ್ನು ಫೇಕ್̈ (Fake) ಎಂದು ಹೇಳಿದೆ.
Railway Protection Force
ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ರೈಲ್ವೇ ಪ್ರಯಾಣಿಕರು ಮತ್ತು ಆಸ್ತಿಯ ರಕ್ಷಣೆಗಾಗಿ ರೈಲ್ವೇ ಸಚಿವಾಲಯವು ಸ್ಥಾಪಿಸಿದ ವಿಶೇಷ ರಕ್ಷಣಾ ಪಡೆ. 1957 ರಲ್ಲಿ ಸ್ಥಾಪಿತವಾದ ಆರ್‌ಪಿಎಫ್ ಭಾರತೀಯ ರಾಷ್ಟ್ರೀಯ ಅರೆಸೇನಾ ಪಡೆಯ ಭಾಗವಾಗಿದೆ.ಇಂಡಿಯನ್ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ತನ್ನ ಕೊನೆಯ ನೇಮಕಾತಿ ಡ್ರೈವನ್ನು (Recruitment Drive) 2018 ರಲ್ಲಿ ನಡೆಸಿತ್ತು.