Fact Check: ಬಳಕೆದಾರರೇ ಗಮನಿಸಿ, ರಾತ್ರಿ 11.30 ರಿಂದ ವಾಟ್ಸ್‌ಆ್ಯಪ್ ಆಫ್!
ರಾತ್ರಿ 11.30 ರಿಂದ ಮುಂಜಾನೆ 6 ಗಂಟೆಯ ವರೆಗೆ ವಾಟ್ಸ್‌ಆ್ಯಪ್ ಕಾರ‍್ಯ ನಿರ್ವಹಿಸುವುದಿಲ್ಲ ಎಂದು ಸುದ್ದಿಮಾಧ್ಯಮವೊಂದು ವರದಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜವಾಗಿಯೂ ವಾಟ್ಸ್‌ಆ್ಯಪ್ ಆಫ್ ಅಗುತ್ತಾ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ..!
ರಾತ್ರಿ 11.30 ರಿಂದ ಮುಂಜಾನೆ 6 ಗಂಟೆಯ ವರೆಗೆ ವಾಟ್ಸ್‌ಆ್ಯಪ್ ಕಾರ‍್ಯ ನಿರ್ವಹಿಸುವುದಿಲ್ಲ ಎಂದು ಸುದ್ದಿಮಾಧ್ಯಮವೊಂದು ವರದಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಂಡಿಯಾ ಟಿವಿ ಹೆಸರಿನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಆದರೆ ನಿಜಕ್ಕೂ ಕೇಂದ್ರ ಸರ್ಕಾರ ರಾತ್ರಿ11:30 ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ವಾಟ್ಸ್‌ಆ್ಯಪನ್ನು ನಿರ್ಬಂಧಿಸಿದೆಯೇ ಎಂದು ಪರಿಶೀಲಿಸಿದಾಗ ವೈರಲ್ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ.
Fact Check: ಲಾಕ್‌ಡೌನ್ ಸಂಕಷ್ಟಕ್ಕೊಳಗಾದ ಪ್ರತಿಯೊಬ್ಬರಿಗೂ 2 ಸಾವಿರ ಪರಿಹಾರ ಧನ?
‘ವಾಟ್ಸ್‌ಆ್ಯಪ್ ಇಂಡಿಯಾ ಟಿವಿ’ ಎಂದು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇಂಡಿಯಾ ಟಿವಿ ಸೆಪ್ಟೆಂಬರ್ 17, 2019ರಂದು ಪ್ರಸಾರ ಮಾಡಿದ ಬುಲೆಟಿನ್‌ವೊಂದು ಪತ್ತೆಯಾಗಿದೆ. ಅದರಲ್ಲಿ ಕಳೆದ ವರ್ಷ ವೈರಲ್ ಆಗಿದ್ದ ‘ಯಾರು ತಿಂಗಳ ಶುಲ್ಕವನ್ನು ಪಾವತಿಸುತ್ತಾರೋ ಅವರು ಮಾತ್ರ ವಾಟ್ಸ್‌ಆ್ಯಪ್ ಬಳಕೆ ಮಾಡಬಹುದು. ಇಲ್ಲದಿದ್ದರೆ ರಾತ್ರಿಯಿಂದ ಬೆಳಗಿನ ವರೆಗೆ ವಾಟ್ಸ್‌ಆ್ಯಪ್ ಕಾರ‍್ಯನಿರ್ವಹಿಸುವುದಿಲ್ಲ’ ಎಂಬ ಸಂದೇಶ ಸುಳ್ಳು ಎಂದು ತಿಳಿದು ಬಂದಿತ್ತು.
ಇಂಡಿಯಾ ಟಿವಿ ಕಳೆದ ವರ್ಷ ಪ್ರಸಾರ ಮಾಡಿದ ಈ ವಿಡಿಯೋದ ಅರ್ಧ ಭಾಗವನ್ನು ಕತ್ತರಿಸಿ ಈ ಬಾರಿ ಮತ್ತದೇ ರೀತಿಯ ಸುಳ್ಳು ಸುದ್ದಿ ಹರಡಲಾಗಿದೆ. ಅಲ್ಲದೆ ವಾಟ್ಸ್‌ಆ್ಯಪ್ ವಕ್ತಾರರೂ ಈ ಬಗ್ಗೆ ಪ್ರತಿಕ್ರಿಯಿಸಿ, ‘ಇದು ಸುಳ್ಳು ಸುದ್ದಿ’ ಎಂದು ಸ್ಪಷ್ಟನೆ ನೀಡಿದ್ದಾರೆ.
- ವೈರಲ್ ಚೆಕ್