ಕಳೆದ ವರ್ಷ ಅಮೆಜಾನ್‌ ಕಾಡುಗಳಲ್ಲಿ ಬೆಂಕಿ ಆವರಿಸಿದಂತೆ ಸದ್ಯ ಉತ್ತರಾಖಂಡ ಕಾಡಿನಲ್ಲಿ ವ್ಯಾಪಕವಾಗಿ ಕಾಳ್ಗಿಚ್ಚು ಹರಡುತ್ತಿದೆ. ಸಾವಿರಾರು ಜೀವಿಗಳು ಬೆಂಕಿಗೆ ಆಹುತಿಯಾಗುತ್ತಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

ಕಳೆದ ವರ್ಷ ಅಮೆಜಾನ್‌ ಕಾಡುಗಳಲ್ಲಿ ಬೆಂಕಿ ಆವರಿಸಿದಂತೆ ಸದ್ಯ ಉತ್ತರಾಖಂಡ ಕಾಡಿನಲ್ಲಿ ವ್ಯಾಪಕವಾಗಿ ಕಾಳ್ಗಿಚ್ಚು ಹರಡುತ್ತಿದೆ. ಸಾವಿರಾರು ಜೀವಿಗಳು ಬೆಂಕಿಗೆ ಆಹುತಿಯಾಗುತ್ತಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಬೆಂಕಿಯ ಕೆನ್ನಾಲಿಗೆ ಕಾಡಿನುದ್ದಕ್ಕೂ ಆವರಿಸಿರುವ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ಕೆಲವರು ‘ಉತ್ತರಾಖಂಡ ಕಳೆದ 4 ದಿನಗಳಿಂದ ಹೊತ್ತಿ ಉರಿಯುತ್ತಿದೆ. ನಾವು ದೂರದ ಆಸ್ಪ್ರೇಲಿಯಾ, ಅಮೆಜಾನ್‌ ಕಾಡುಗಳಿಗೆ ಬೆಂಕಿ ಬಿದ್ದಾಗ ಪ್ರಾರ್ಥಿಸುತ್ತೇವೆ. ಆದರೆ ನಮ್ಮ ಭೂಮಿಗೇ ಬೆಂಕಿಗೆ ಆವರಿಸಿರುವಾಗ ಯಾರಾದರೂ ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರಾ?’ ಎಂದು ಬರೆದುಕೊಂಡಿದ್ದಾರೆ.

Scroll to load tweet…

ಆದರೆ ನಿಜಕ್ಕೂ ಉತ್ತರಾಖಂಡ ಅರಣ್ಯಕ್ಕೆ ಬೆಂಕಿಬಿದ್ದಿದೆಯೇ ಎಂದು ಪರಿಶೀಲಿಸಿದಾಗ ಈ ಹಿಂದೆ ಕಾಳ್ಗಿಚ್ಚು ಆವರಿಸಿದ್ದ ಫೋಟೋಗಳನ್ನೇ ಪೋಸ್ಟ್‌ ಮಾಡಿ ಉತ್ತರಾಖಂಡಲ್ಲಿ ಕಾಳ್ಗಿಚ್ಚು ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ.

Fact Check: ಭಾರತ ಸೇನೆಯ 75 ಯೋಧರನ್ನು ಕೊಂದು ಹಾಕಿತಾ ಚೀನಾ?

ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ವೈರಲ್‌ ಆಗಿರುವ 7 ಫೋಟೋಗಳ ಪೈಕಿ ಮೂರು ಫೋಟೋಗಳು ಹಳೆಯವು ಎಂಬುದು ಖಚಿತವಾಗಿದೆ. ಅದರಲ್ಲಿ ಒಂದು 8 ವರ್ಷ ಹಳೆಯ ಶಿಮ್ಲಾ ಕಾಳ್ಗಿಚ್ಚಿನದ್ದು, ಇನ್ನೊಂದು 2016ರ ಉತ್ತರಾಖಂಡ ಕಾಳ್ಗಿಚ್ಚಿನದ್ದು, ಇನ್ನೊಂದು 2012ರ ರಾಜ್‌ಘರ್‌ ಪರ್ವತದ ಕಾಳ್ಗಿಚ್ಚಿನದ್ದು. ಅಲ್ಲದೆ ಉತ್ತರಾಖಂಡ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಮಧುಕರ್‌ ಧಾಕಟೆ ಈ ಬಗ್ಗೆ ಪ್ರತಿಕ್ರಿಯಿಸಿ, ‘ಉತ್ತರಾಖಂಡ ಅರಣ್ಯ ಇಲಾಖೆ ಸ್ಯಾಟಲೈಟ್‌ ಮಾಹಿತಿಯಾಧರಿಸಿ ಬೆಂಕಿ ಬಿದ್ದ ಕಡೆಗಳಲ್ಲೆಲ್ಲಾ ಕಾರಾರ‍ಯಚರಣೆ ನಡೆಸಿ ನಂದಿಸಿದೆ. ಕಾಳ್ಗಿಚ್ಚು ಅಥವಾ ತೀವ್ರ ಹಾನಿಯಾದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ’ ಎಂದು ತಿಳಿಸಿದ್ದಾರೆ.

- ವೈರಲ್ ಚೆಕ್