Fact Check: ವಿವೇಕಾನಂದರು ಕ್ರಿಕೆಟ್ ಆಡಿದ್ದ ಫೋಟೋನಾ ಇದು.?
ಆಧುನಿಕ ಯುಗದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಕ್ರಿಕೆಟ್ ಮೈದಾನದಲ್ಲಿ ಬೌಲಿಂಗ್ ಮಾಡಿರುವ ದೃಶ್ಯ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ..?
ಆಧುನಿಕ ಯುಗದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಕ್ರಿಕೆಟ್ ಮೈದಾನದಲ್ಲಿ ಬೌಲಿಂಗ್ ಮಾಡಿರುವ ದೃಶ್ಯ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
‘ಈ ಪೋಟೋ ತೆಗೆದಿದ್ದು 1884ರಲ್ಲಿ ಕೋಲ್ಕತಾದ ಈಡೆನ್ ಗಾರ್ಡನ್ ಮೈದಾನದಲ್ಲಿ. ಕೋಲ್ಕತಾ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಕೋಲ್ಕತಾ ಗ್ರೌಂಡ್ ಮತ್ತು ಟೌನ್ ಕ್ಲಬ್ ನಡುವಿನ ಪಂದ್ಯಾವಳಿಯಲ್ಲಿ ಈಗ ಸ್ವಾಮಿ ವಿವೇಕಾನಂದ ಎಂದು ಆರಾದಿಸುವ ನರೇಂದ್ರನಾಥ ದತ್ತ ಟೌನ ಕ್ಲಬ್ ಆಫ್ ಕೋಲ್ಕತಾದಿಂದ ಪ್ರತಿನಿಧಿಸಿ 7 ವಿಕೆಟ್ ಪಡೆದಿದ್ದರು’ ಎಂದು ಫೋಟೋದೊಂದಿಗೆ ಒಕ್ಕಣೆ ಬರೆಯಲಾಗಿದೆ. ವೈರಲ್ ಫೋಟೋ ಫೇಸ್‌ಬುಕ್, ಟ್ವೀಟರ್‌ನಲ್ಲಿ ವೈರಲ್ ಆಗಿದೆ. ಬಂಗಾಳದಲ್ಲಿ ‘ಅಪರೂಪದ ಚಿತ್ರ’ ಎಂಬ ಶೀರ್ಷಿಕೆಯಡಿ ವೈರಲ್ ಅಗಿದೆ.
Fact Check: ನೆಹರು ಪ್ರತಿಮೆಗೆ ನಮಿಸಿದ ಮೋದಿ!
ಆದರೆ ನಿಜಕ್ಕೂ ಫೋಟೋದಲ್ಲಿ ಇರುವವರು ಸ್ವಾಮಿ ವಿವೇಕಾನಂದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಉತ್ತರ ಇಂಗ್ಲೆಂಡಿನ ಕ್ರಿಕೆಟರ್ ಹೆಡ್ಲಿ ವೆರಿಟಿ ಅವರ ಕ್ರಿಕೆಟ್ ಆಟದ ಭಂಗಿ ಎಂದಿದೆ. ಇದೇ ಫೋಟೋವನ್ನು ತೆಗೆದುಕೊಂಡು ಫೋಟೋಶಾಪ್ ಮೂಲಕ ಎಡಿಟ್ ಮಾಡಿ ಸುಳ್ಳುಸುದ್ದಿ ಹರಡಲಾಗಿದೆ. ಆದರೆ ವಿವೇಕಾನಂದರ ಕ್ರಿಕೆಟ್ ಆಸಕ್ತಿ ಬಗ್ಗೆ ಹೆಚ್ಚು ಮಾಹಿತಿ ಇಲ್ಲ.
- ವೈರಲ್ ಚೆಕ್