ಕೊರೋನಾ ವೈರಸ್‌ ಭೀತಿ ದಿನ​ದಿಂದ ದಿನಕ್ಕೆ ಹೆಚ್ಚು​ತ್ತಲೇ ಇದೆ. ಈ ನಡುವೆ ಮಾಂಸಾ​ಹಾರ ಅಥವಾ ಚಿಕನ್‌ ಸೇವಿ​ಸಿ​ದರೆ ಕೊರೋನಾ ಸೋಂಕು ತಗು​ಲು​ತ್ತದೆ ಎಂಬ ವದಂತಿ​ಯಿಂದಾಗಿ ಕುಕ್ಕು​ಟೋ​ದ್ಯಮ ನಷ್ಟಅನು​ಭ​ವಿ​ಸು​ತ್ತಿದೆ.

ಇತ್ತ ಕೊರೋನಾ ಸಾಂಕ್ರಾ​ಮಿಕ ರೋಗವು ಮಾಂಸಾ​ಹಾ​ರ​ದಿಂದ ಹರ​ಡು​ತ್ತದೆ. ಬರೀ ಶಾಲೆ, ಕಾಲೇಜು ಮಾಲ್‌​ಗ​ಳನ್ನು ಮಾತ್ರ ರದ್ದು ಮಾಡಿ​ದ್ದೇಕೆ? ಎಲ್ಲಾ ಮಾಂಸದಂಗ​ಡಿ​ಗ​ಳ​ನ್ನೂ ಬಂದ್‌ ಮಾಡಿ’ ಎಂದು ಕ್ರಿಕೆಟ್‌ ದೇ​ವರು ಎಂದೇ ಕರೆ​ಯ​ಲಾ​ಗುವ ಸಚಿನ್‌ ತೆಂಡು​ಲ್ಕರ್‌ ಕರೆ​ಕೊ​ಟ್ಟಿ​ದ್ದಾರೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿದೆ.

ಆದರೆ ಬೂಮ್‌ ಲೈವ್‌ ಈ ಸುದ್ದಿಯ ಸತ್ಯಾ​ಸತ್ಯ ಪರಿ​ಶೀ​ಲಿ​ಸಿ​ದಾಗ ಇದು ಸುಳ್ಳು​ಸುದ್ದಿ ಎಂಬುದು ಸ್ಪಷ್ಟ​ವಾ​ಗಿದೆ. ಬೂಮ್‌, ಕ್ರಿಕೆಟ್‌ ಆಟ​ಗಾರ ಸಚಿನ್‌ ತೆಂಡು​ಲ್ಕರ್‌ ಅವರ ಸೋಷಿ​ಯಲ್‌ ಮೀಡಿಯಾ ಹ್ಯಾಂಡಲ್‌ ಮಾಡು​ವವರ ಬಳಿ ಸ್ಪಷ್ಟನೆ ಪಡೆ​ದಾಗ ಸಚಿನ್‌ ಎಲ್ಲೂ ಈ ರಿತಿಯ ಹೇಳಿಕೆ ನೀಡಿಲ್ಲ ಎಂಬ ಖಚಿತ ಮಾಹಿತಿ ಲಭ್ಯ​ವಾ​ಗಿದೆ. ಸಚಿನ್‌ ತೆಂಡು​ಲ್ಕರ್‌ ಟ್ವೀಟ್ಟರ್‌​ನಲ್ಲಿ ಹಲವು ಟ್ವೀಟ್‌ ಮೂಲಕ ಕೊರೋನಾ ಬಗ್ಗೆ ಜಾಗೃತಿ ಮೂಡಿ​ಸಿ​ದ್ದಾ​ರೆ. ಆದರೆ ಎಲ್ಲೂ ಈ ಬಗ್ಗೆ ಹೇಳಿ​ಲ್ಲ. ಸುದ್ದಿಯ ವಿಶ್ವಾ​ಸಾ​ರ್ಹ​ತೆ​ಯನ್ನು ಗಳಿ​ಸುವ ಉದ್ದೇ​ಶ​ದಿಂದ ಸಚಿನ್‌ ತೆಂಡು​ಲ್ಕರ್‌ ಹೆಸ​ರನ್ನು ಬಳ​ಸಿ​ಕೊ​ಳ್ಳ​ಲಾ​ಗಿದೆ. ಅಲ್ಲಿಗೆ ತೆಂಡು​ಲ್ಕರ್‌ ಹೆಸ​ರಲ್ಲಿ ವೈರಲ್‌ ಆಗಿ​ರುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

ಕೊರೋನಾ ವೈರಸ್‌ಚೀನಾ​ದಲ್ಲಿ ಪತ್ತೆಯಾದಾ​ಗಿ​ನಿಂದ ಮಾಂಸಾ​ಹಾರ ಕುರಿತ ವದಂತಿ​ಗಳು ಸೋಷಿ​ಯಲ್‌ ಮೀಡಿ​ಯಾ​ದಲ್ಲಿ ಹರಿ​ದಾ​ಡು​ತ್ತಿವೆ. ಆದರೆ ಮಾಂಸಾ​ಹಾ​ರ​ದಿಂದ ಕೊರೋನಾ ವೈರಸ್‌ ಹರ​ಡು​ವು​ದಿಲ್ಲ. ಸರಿ​ಯಾಗಿ ಬೇಯಿ​ಸಿದ ಆಹಾರ ಸೇವಿ​ಸು​ವು​ದ​ರಿಂದ ಸೋಂಕು ಹರ​ಡು​ವು​ದಿಲ್ಲ ಎಂದು ವಿಜ್ಞಾ​ನಿ​ಗಳು ದೃಢ​ಪ​ಡಿ​ಸಿ​ದ್ದರೂ ಇಂಥ ವದಂತಿ​ಗಳು ಹರಿ​ದಾ​ಡು​ತ್ತಿವೆ.

Close