fact Check: ಸಸ್ಯಾಹಾರಿಗಳಿಂದ ಕೊರೋನಾ ದೂರವಾಗುತ್ತಾ?

ಕೊರೋನಾ ವೈರಸ್‌ ದಿನೇ ದಿನೇ ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡುತ್ತಿದೆ. ಈ ನಡುವೆ ‘ಜಗತ್ತಿನಲ್ಲಿ ಯಾವ ಸಸ್ಯಾಹಾರಿಯೂ ಕೊರೋನಾ ವೈರಸ್‌ ತಗುಲಿ ಮೃತಪಟ್ಟಿಲ್ಲ. ಮಾನವ ಶರೀರದೊಳಗೆ ಕೊರೋನಾ ವೈರಾಣು ಜೀವಂತವಾಗಿರಲು ಪ್ರಾಣಿಗಳ ಪ್ರೊಟೀನ್‌ ಅಗತ್ಯ. ಆದ್ದರಿಂದಲೇ ಮಾಂಸಾಹಾರಿಗಳಿಗೆ ಮಾತ್ರ ಕೊರೋನಾ ಸೋಂಕು ತಗುಲಿದೆ. ಇದನ್ನು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದೃಢಪಡಿಸಿದೆ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

Fact check of no vegetarian has contracted covid 19 according to WHO report

ಕೊರೋನಾ ವೈರಸ್‌ ದಿನೇ ದಿನೇ ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡುತ್ತಿದೆ. ಈ ನಡುವೆ ‘ಜಗತ್ತಿನಲ್ಲಿ ಯಾವ ಸಸ್ಯಾಹಾರಿಯೂ ಕೊರೋನಾ ವೈರಸ್‌ ತಗುಲಿ ಮೃತಪಟ್ಟಿಲ್ಲ. ಮಾನವ ಶರೀರದೊಳಗೆ ಕೊರೋನಾ ವೈರಾಣು ಜೀವಂತವಾಗಿರಲು ಪ್ರಾಣಿಗಳ ಪ್ರೊಟೀನ್‌ ಅಗತ್ಯ. ಆದ್ದರಿಂದಲೇ ಮಾಂಸಾಹಾರಿಗಳಿಗೆ ಮಾತ್ರ ಕೊರೋನಾ ಸೋಂಕು ತಗುಲಿದೆ. ಇದನ್ನು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದೃಢಪಡಿಸಿದೆ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಹಿಂದಿ ಭಾಷೆಯಲ್ಲೂ ಇದೇ ಸಂದೇಶ ಹರಿದಾಡುತ್ತಿದೆ.

Fact check of no vegetarian has contracted covid 19 according to WHO report

ಆದರೆ ಈ ಸುದ್ದಿ ನಿಜವೇ ಎಂದು  ಪರಿಶೀಲಿಸಿದಾಗ, ಸಸ್ಯಾಹಾರಿಗಳಿಗೆ ಕೊರೋನಾ ಸೋಂಕು ತಗುಲುವುದಿಲ್ಲ ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಕೊರೋನಾ ವೈರಸ್‌ ಮಾನವ ದೇಹದೊಳಗೆ ಬದುಕುಳಿಯಲು ಪ್ರಾಣಿಗಳ ಪ್ರೊಟೀನ್‌ ಬೇಕು. ಹಾಗಾಗಿ ಸಸ್ಯಾಹಾರಿಗಳಿಗೆ ಕೊರೋನಾ ಸೋಂಕು ತಗುಲಿಲ್ಲ ಎಂ ಡಬ್ಲ್ಯುಎಚ್‌ಒ ಎಲ್ಲೂ ಹೇಳಿಲ್ಲ. ಇದೊಂದು ಕಟ್ಟು ಕತೆ ಎಂದು ತಿಳಿದುಬಂದಿದೆ. ಅಲ್ಲದೆ ಚೀನಾದ ಮಾಂಸ ಮಾರಾಟ ಕೇಂದ್ರದಲ್ಲೇ ವೈರಾಣು ಮೊದಲು ಕಂಡುಬಂದ ಕಾರಣ ಈ ರೀತಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

ವಾಸ್ತವವಾಗಿ ಕೊರೋನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾಂಸಾಹಾರ ಸೇವಿಸಿ ಎಂದು ಜಾಗತಿಕ ಆರೋಗ್ಯ ಸಂಘಟನೆಗಳು ಯುವಜನತೆಗೆ ಶಿಫಾರಸು ಮಾಡುತ್ತಿವೆ. ಹಾಗಾಗಿ ಸಸ್ಯಾಹಾರಿಗಳಿಗೆ ಕೊರೋನಾ ತಗುಲಲ್ಲ ಎಂಬ ಸುದ್ದಿ ಸುಳ್ಳು.

- ವೈರಲ್ ಚೆಕ್ 

Latest Videos
Follow Us:
Download App:
  • android
  • ios