Fact Check: ಬ್ರೆಡ್ ಮೇಲೆ ಎಂಜಲು ಹಚ್ಚುತ್ತಾರಾ?
ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಮಾವೇಶ ನಡೆದ ಬಳಿಕ ಮುಸ್ಲಿಂ ಸಮುದಾಯ ಭಾರತದಲ್ಲಿ ಉದ್ದೇಶಪೂರ್ವಕವಾಗಿ ಕೊರೋನಾ ವೈರಸ್ ಹಬ್ಬಿಸಲು ಪ್ರಯತ್ನಿಸುತ್ತಿದೆ ಎಂಬರ್ಥದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದೇ ರೀತಿ ಸದ್ಯ ವ್ಯಕ್ತಿಯೊಬ್ಬ ಬ್ರೆಡ್ ಪ್ಯಾಕೆಟ್ ಮೇಲೆ ಎಂಜಲು ಹಚ್ಚುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

Fact Check| ಮಾಧ್ಯಮಗಳ ಎಡವಟ್ಟಿಂದ ಮುಸ್ಲಿಂಗೆ ಥಳಿತ!
ಕೆಲವರು ಈ ವಿಡಿಯೋವನ್ನು ಪೋಸ್ಟ್ ಮಾಡಿ, ‘ಭಾರತೀಯರೇ, ನೀವು ಕೊಂಡುಕೊಂಡ ಬ್ರೆಡ್ ಪ್ಯಾಕೆಟ್ ಮೇಲ್ಮೈಯನ್ನು ನೀರಿನಿಂದ ಚೆನ್ನಾಗಿ ತೊಳೆದು ಅನಂತರ ಬಳಸಿ. ಯಾರು ಇದರ ಮೇಲೆ ಉಗುಳಿರುತ್ತಾರೋ ಯಾರಿಗೆ ಗೊತ್ತು’ ಎಂದು ಒಕ್ಕಣೆ ಬರೆದಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ಈ ವಿಡಿಯೋ ಹಿಂದಿನ ಸತ್ಯಾಸತ್ಯ ಬಯಲು ಮಾಡಿದಾಗ, ವೈರಲ್ ವಿಡಿಯೋ ಭಾರತದ್ದೂ ಅಲ್ಲ, ಕೊರೋನಾ ವೈರಸ್ಸಿಗೂ ಈ ವಿಡಿಯೋಗೂ ಸಂಬಂಧವೂ ಇಲ್ಲ ಎಂಬ ವಾಸ್ತವ ಬಯಲಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಫಿಲಿಪ್ಪೀನ್ಸ್ ಮೂಲದ ಹಲವಾರು ವೆಬ್‌ಸೈಟ್‌ಗಳು ಈ ಕುರಿತ ವರದಿ ಮಾಡಿದ್ದು ಪತ್ತೆಯಾಗಿದೆ.
ಸೆಪ್ಟೆಂಬರ್ 20, 2019ರಂದು ಈ ವರದಿಗಳು ಪ್ರಟಕವಾಗಿದ್ದು, ಅವುಗಳಲ್ಲಿ ಡೆಲಿವರಿ ಬಾಯ್, ಗ್ರಾಹಕರಿಗೆ ಕೊಂಡೊಯ್ಯುತ್ತಿದ್ದ ಬ್ರೆಡ್ ಪ್ಯಾಕೆಟ್‌ಗಳಲ್ಲಿ ಕೆಲವೊಂದನ್ನು ತೆಗೆದು ವೈಯಕ್ತಿಕವಾಗಿ ಬಳಕೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದ ಎಂದಿದೆ. ಫಿಲಿಪ್ಪೀನ್ಸ್ ಮೂಲದ ಬೇಕರಿ ಕಂಪನಿ ಕಳೆದ ವರ್ಷವೇ ಈ ಬಗ್ಗೆ ಫೇಸ್‌ಬುಕ್ ಮೂಲಕ ಸ್ಪಷ್ಟನೆ ನೀಡಿತ್ತು. ಹಾಗಾಗಿ ಕೊರೋನಾ ವೈರಸ್ ಹರಡಲು ಬ್ರೆಡ್ ಮೇಲೆ ಎಂಜಲು ಹಚ್ಚುತ್ತಿದ್ದಾರೆ ಎಂಬುದು ಸುಳ್ಳುಸುದ್ದಿ.
- ವೈರಲ್ ಚೆಕ್