Asianet Suvarna News Asianet Suvarna News

Fact Check: ನೀರು ಕುಡಿಯುತ್ತಾ ಫೋನಲ್ಲಿ ಮಾತಾಡಬೇಡಿ, ಸ್ಪೋಟಗೊಂಡೀತು ಜೋಕೆ!

ಮೊಬೈಲ್‌ ಫೋನಿನಲ್ಲಿ (Mobile Phone) ಮಾತನಾಡುತ್ತಾ ನೀರು ಕುಡಿಯುವುದು (Drinking Water) ಅಪಾಯಕಾರಿ. ಈ ವೇಳೆ ಫೋನ್‌ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check of Man Being electrocuted while Using his phone hls
Author
Bengaluru, First Published Dec 31, 2021, 5:14 PM IST

ಮೊಬೈಲ್‌ ಫೋನಿನಲ್ಲಿ (Mobile Phone) ಮಾತನಾಡುತ್ತಾ ನೀರು ಕುಡಿಯುವುದು (drinking Water) ಅಪಾಯಕಾರಿ. ಈ ವೇಳೆ ಫೋನ್‌ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಸಿಸಿಟೀವಿ ದೃಶ್ಯವೊಂದನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

ವಿಡಿಯೋದಲ್ಲಿ ಒಬ್ಬ ವ್ಯಕ್ತಿ ನೀರು ಗುಡುಕಿಸುತ್ತಾ ಚಾರ್ಜಿಗೆ ಹಾಕಿದ್ದ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಈ ವೇಳೆ ಫೋನ್‌ ಕಿವಿಯಲ್ಲಿ ಸ್ಫೋಟಗೊಂಡು ವ್ಯಕ್ತಿ ಪ್ರಜ್ಞೆ ತಪ್ಪಿ ಬೀಳುತ್ತಾರೆ. ನೆಟ್ಟಿಗರು ಈ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ಇದು ಅಪಾಯಕಾರಿ. ಪ್ರತಿಯೊಬ್ಬರೂ ಕಾಳಜಿ ವಹಿಸಿ. ದಯವಿಟ್ಟು ಮೊಬೈಲ್‌ ಚಾರ್ಜಿಗೆ ಹಾಕಿ, ನೀರು ಕುಡಿಯುತ್ತಾ ಫೋನಲ್ಲಿ ಮಾತಾಡಬೇಡಿ’ ಎಂಬ ಒಕ್ಕಣೆ ಬರೆದು ಮನವಿ ಮಾಡಿದ್ದಾರೆ.

Fact Check: ಜೀಜಾಬಾಯಿ ಭೋಸಲೆ ಮೃಗಾಲಯದ ಹೆಸರು ಹಜರತ್ ಬಾಬಾ ಎಂದು ಮರುನಾಮಕರಣ?

ಆದರೆ ಈ ವಿಡಿಯೋದ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ.ಇದು ನಿಜ ಘಟನೆಯಲ್ಲ, ಚಾಜ್‌ರ್‍ ಹಾಕಿ ಮೊಬೈಲ್‌ ಬಳಸದಂತೆ ಸಂದೇಶ ಸಾರುವ ಸಲುವಾಗಿ ನಿರ್ಮಿಸಿದ ಸ್ಕಿ್ರಪ್ಟೆಡ್‌ ವಿಡಿಯೋ ಎಂದು ತಿಳಿದುಬಂದಿದೆ. ವೈರಲ್‌ ವಿಡಿಯೋದ ಪೂರ್ಣ ದೃಶ್ಯವನ್ನು ಬ್ಯಾಡ್ಮಿಂಟನ್‌ ಆಟಗಾರ ಜ್ವಾಲಾ ಗುಟ್ಟಾಅವರು ಹಂಚಿಕೊಂಡಿದ್ದಾರೆ. ಜೊತೆಗೆ, ‘ವಿಡಿಯೋ ವೀಕ್ಷಿಸಿದ್ದಕ್ಕೆ ಧನ್ಯವಾದ. ಈ ಪೇಜಿನಲ್ಲಿ ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶದ ಮಾಹಿತಿಪೂರ್ಣ ಕಿರುಚಿತ್ರಗಳನ್ನು ಹಂಚಿಕೊಳ್ಳಲಾಗುತ್ತದೆ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದೇ ವಿಡಿಯೋವನ್ನು ನಿಜವಾದ ಘಟನೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿದೆ.

- ವೈರಲ್ ಚೆಕ್

 

Follow Us:
Download App:
  • android
  • ios