ಬೆಂಗಳೂರು (ಜು. 07):  ಚಂದನ ವಾಹಿನಿಯಲ್ಲಿ ಸೋಮವಾರ ಬೆಳಗ್ಗೆ 9.30 ರಿಂದ ಶಾಲಾ ಮಕ್ಕಳಿಗೆ ಬೋಧನೆ ಆರಂಭವಾಗಲಿದೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ‘ಸುಳ್ಳು ಮಾಹಿತಿ’ ನಂಬಿದ್ದವರಿಗೆ ನಿರಾಸೆಯಾಗಿದೆ.

‘ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕದ ಬೋಧನೆ ಕಾರ್ಯಕ್ರಮ ರೂಪಿಸಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಪ್ರಸಾರ ಮಾಡಿದ್ದ ಪುನರ್‌ ಮನನ ಕಾರ್ಯಕ್ರಮಗಳಂತೆ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಬೆಳಗ್ಗೆ 9.30 ರಿಂದ 10 ಗಂಟೆಯವರೆಗೆ ಗಣಿತ, 10 ರಿಂದ ಆಂಗ್ಲಭಾಷೆ, 10.30 ರಿಂದ ವಿಜ್ಙಾನ ಹೀಗೆ ಸಂಜೆ 5 ಗಂಟೆಯವರೆಗೂ ವಿವಿಧ ವಿಷಯಗಳ ಬೋಧನೆಯ ತರಗತಿ ಆರಂಭವಾಗಲಿದೆ’ ಎಂದು ಸಾವåಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡಿತ್ತು.

ಆನ್‌ಲೈನ್‌ ಶಿಕ್ಷಣ ಕುರಿತು ಇಂದು ಹೈಕೋರ್ಟ್‌ ತೀರ್ಪು

ಇದನ್ನೇ ನಿಜವೆಂದು ನಂಬಿದ ವಿದ್ಯಾರ್ಥಿಗಳು ಟಿವಿ ಮುಂದೆ ಹಾಜರಾಗಿದ್ದರು. ಆದರೆ, ಕಾರ್ಯಕ್ರಮ ಪ್ರಸಾರವಾಗದಿದ್ದಾಗ ನಿರಾಸೆಗೊಂಡಿದ್ದಾರೆ. ಇದೇ ಕಾರಣಕ್ಕಾಗಿ ಸಂಜೆ 5 ಗಂಟೆಯವರೆಗೂ ಸಾಕಷ್ಟುಜನರು ಚಂದನ ವಾಹಿನಿಗೆ ಕರೆ ಮಾಡಿ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದು ಸುಳ್ಳು ಮಾಹಿತಿ:

ಈ ಕುರಿತು ಪ್ರತಿಕ್ರಿಯಿಸಿದ ಡಿಎಸ್‌ಇಆರ್‌ಟಿ ನಿರ್ದೇಶಕ ಎಂ.ಆರ್‌. ವåಾರುತಿ, ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈ ಸಂಬಂಧ ತಾತ್ಕಾಲಿಕ ವೇಳಾಪಟ್ಟಿರಚಿಸಲಾಗಿದೆ. ಆದರೆ, ಈ ವೇಳಾಪಟ್ಟಿಅಂತಿಮಗೊಳಿಸಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಿದಾಡಿ ಗೊಂದಲ ಸೃಷ್ಟಿಸಿದೆ ಎಂದರು. ಅಲ್ಲದೆ, ವೇಳಾಪಟ್ಟಿಅಧಿಕೃತವಾದ ಬಳಿಕ ಡಿಎಸ್‌ಇಆರ್‌ಟಿಯೇ ವåಾಧ್ಯಮಗಳಿಗೆ ಪ್ರಕಟಣೆ ನೀಡಲಿದೆ. ಈ ಬಗ್ಗೆ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.