ಕೊರೋನಾ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಜೇಜ್‌ ಘೋಷಿಸಿದೆ. ಈ ನಡುವೆ 1990-2020ರ ಅವಧಿಯಲ್ಲಿ ದುಡಿದ ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ 1,20,000 ರು.ವನ್ನು ನೀಡುತ್ತಿದೆ ಎಂದು ಹೇಳಲಾದ ಸಂದೇಶ ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್‌ ಆಗುತ್ತಿದೆ. ಲಿಂಕ್‌ವೊಂದನ್ನು ಲಗತ್ತಿಸಿ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಪರೀಕ್ಷಿಸಿ ಎಂದೂ ಹೇಳಲಾಗಿದೆ.

 

Fact Check: ವರ್ಕ್ ಫ್ರಂ ಹೋಂ ಮಾಡುವವರ ಸ್ಮಾರ್ಟ್‌ ‌ಫೋನ್‌ಗಳಿಗೆ ಫ್ರೀ ಇಂಟರ್‌ನೆಟ್‌?

ಆದರೆ ಈ ಸಂದೇಶ ವೈರಲ್‌ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿ, ‘ಕೇಂದ್ರ ಕಾರ್ಮಿಕ ಇಲಾಖೆ ಇಂಥ ಯಾವ ಪ್ರಸ್ತಾಪವನ್ನೂ ಪ್ರಕಟಿಸಿಲ್ಲ. 1990-2020ರ ಸಾಲಿನಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ 1,20,000 ನೆರವು ನೀಡಲಾಗುತ್ತಿದೆ ಎಂಬುದು ಸುಳ್ಳುಸುದ್ದಿ. ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆಯಿಂದಿರಿ’ ಎಂದು ಸ್ಪಷ್ಟನೆ ನೀಡಿದೆ.

ಹಾಗೆಯೇ ಈ ವೈರಲ್‌ ಸುದ್ದಿ ಸುಳ್ಳು ಮತ್ತು ಅಲ್ಲಿ ಲಗತ್ತಿಸಲಾಗಿರುವ ಲಿಂಕ್‌ ಕೂಡ ನಕಲಿ ಎನ್ನುವುದನ್ನು ಸಾಬೀತಾಗಿದೆ. ಹಾಗೆಯೇ ಇಂಥದ್ದೇ ಸಂದೇಶಗಳು 2019ರಲ್ಲಿ ಸಿಂಗಾಪುರ, ಮಲೇಷಿಯಾ ಮತ್ತು ಕೆನಡಾ ಹೆಸರಿನಲ್ಲಿ ವೈರಲ್‌ ಆಗಿದ್ದವು. ಆಗ ಅಲ್ಲಿನ ಸರ್ಕಾರ ಅವುಗಳನ್ನು ಅಲ್ಲಗಳೆದು ಅದು ಸುಳ್ಳುಸುದ್ದಿ ಎಂದು ಸ್ಪಷ್ಟನೆ ನೀಡಿತ್ತು. ಸದ್ಯ ಅದೇ ಸಂದೇಶವನ್ನು ಭಾರತದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.

- ವೈರಲ್ ಚೆಕ್