ನವದೆಹಲಿ (ಜ. 08): ಔಷಧಗಳನ್ನು ಮಾರಾಟ ಮಾಡುವ ಫಾರ್ಮಾಸಿಸ್ಟ್‌ಗಳೂ ಕ್ಲಿನಿಕ್‌ಗಳನ್ನು ತೆರೆಯಲು ಮತ್ತು ರೋಗಿಗಳಿಗೆ ಔಷಧಗಳನ್ನು ನೀಡಲು ಭಾರತ ಸರ್ಕಾರ ಅನುಮತಿ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ದೈನಿಕ್‌ ಜನವಾಣಿ ಹೆಸರಿನ ಹಿಂದಿ ದಿನಪತ್ರಿಕೆಯೊಂದರ ತುಣುಕನ್ನು ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

Fact Check: ಪೈಝರ್ ಲಸಿಕೆ ಪಡೆದ ನರ್ಸ್ ಸಾವನ್ನಪ್ಪಿ ಬಿಟ್ರಾ..?

ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಕ್ಲಿನಿಕ್‌ಗಳು ಹೆಚ್ಚುತ್ತಿದ್ದರೂ ಬೇಡಿಕೆ ತಗ್ಗಿಲ್ಲ. ಹೀಗಾಗಿ ಫಾರ್ಮಾಸಿಸ್ಟ್‌ಗಳೂ ಆಸ್ಪತ್ರೆ ತೆರೆದು ರೋಗಿಗಳನ್ನು ಪರೀಕ್ಷಿಸಿ ಔಷಧ ನೀಡಬಹುದು. ಅವರೂ ವೈದ್ಯರಂತೆ ಕಾರ‍್ಯ ನಿರ್ವಹಿಸಬಹುದುಎ ಎಂದು ಸ್ವತಃ ಸರ್ಕಾರವೇ ಅನುಮತಿ ನೀಡಿದೆ ಎಂದು ಹೇಳಲಾಗಿದೆ.

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಭಾರತದ ಫಾರ್ಮಸಿ ಕೌನ್ಸಿಲ್‌ ಈ ಸುದ್ದಿಯನ್ನು ಅಲ್ಲಗಳೆದು ಸ್ಪಷ್ಟೀಕರಣ ನೀಡಿದೆ. ಫಾರ್ಮಸಿ ಕಾಯ್ದೆ ಮತ್ತು ಫಾರ್ಮಸಿ ಪ್ರಾಕ್ಟೀಸ್‌ ಕಾನೂನಿನ ಅಡಿಯಲ್ಲಿ ಫಾರ್ಮಾಸಿಸ್ಟ್‌ಗಳಿಗೆ ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶವಿಲ್ಲ. ಸರ್ಕಾರ ಇಂಥ ಯಾವುದೇ ಆದೇಶವನ್ನೂ ಹೊರಡಿಸಿಲ್ಲ ಎಂದು ಅದು ಹೇಳಿದೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೇ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆಯಾಗಿರುವ ಪಿಐಬಿ ಸಹ,‘ವೈರಲ್‌ ಸುದ್ದಿ ಸುಳ್ಳು’ ಎಂದು ಹೇಳಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಆರ್ಯುವೇದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೈದ್ಯರಿಗೆ 58 ಪ್ರಕಾರದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅನುಮತಿ ನೀಡಿದೆ.

-ವೈರಲ್ ಚೆಕ್