ಕೊರೋನಾ ನಿಗ್ರಹಕ್ಕಾಗಿ ಘೋಷಿಸಿರುವ ಲಾಕ್‌ಡೌನ್‌ ನಿರ್ಬಂಧಗಳ ಸಡಿಲಿಕೆಗೆ ತಲಾ ಮೂರು ವಾರಗಳ 5 ಹಂತದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಮೊದಲ ಹಂತ ಮೇ 18ರಿಂದ ಆರಂಭವಾಗಲಿದೆ. ಎರಡನೇ ಹಂತ ಜೂನ್‌ 8ರಿಂದ ಆರಂಭವಾಗುತ್ತದೆ.

ಮೂರನೇ ಹಂತ ಜೂನ್‌ 29ರಿಂದ, ನಾಲ್ಕನೇ ಹಂತ ಜುಲೈ 20 ರಿಂದ ಮತ್ತು 5 ನೇ ಹಂತ ಆಗಸ್ಟ್‌ 10ರಿಂದ ಆರಂಭವಾಗುತ್ತದೆ. ಈ ಹಂತಗಳಲ್ಲಿ ಒಂದು ವೇಳೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದರೆ ಪುನಃ ಮೊದಲಿನ ನಿರ್ಬಂಧಗಳು ಪ್ರಾರಂಭವಾಗಲಿವೆ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ಹೇಳಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಕೇಂದ್ರ ಸರ್ಕಾರ ಇಂಥದ್ದೊಂದು ಮಾರ್ಗಸೂಚಿ ಪ್ರಕಟಿಸಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಕೇಂದ್ರ ಸರ್ಕಾರ ನಿರ್ಬಂಧ ಸಡಿಲಿಕೆ ಕುರಿತಾಗಿ ಯಾವುದೇ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿಲ್ಲ

Fact Check| ಕೊರೋನಾ ನಿಗ್ರಹಕ್ಕೆ ಐಎಂಸಿಆರ್‌ ಸಲಹೆ!

ಈ ಬಗ್ಗೆ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿ ಕೂಡ ಇದು ಸುಳ್ಳುಸುದ್ದಿ ಎಂದು ಸ್ಪಷ್ಟಪಡಿಸಿದೆ. ಹಾಗೆಯೇ  ವೈರಲ್‌ ಸಂದೇಶದ ಜಾಡು ಹಿಡಿದು ಪರಿಶೀಲಿಸಿದಾಗ ವೈರಲ್‌ ಸಂದೇಶದಲ್ಲಿರುವ ಮಾರ್ಗಸೂಚಿಗಳು ಭಾರತದ್ದಲ್ಲ ಐರ್ಲೆಂಡ್‌ ದೇಶದ್ದು ಎಂಬುದು ಖಚಿತವಾಗಿದೆ. ಐರ್ಲೆಂಡ್‌ ಇತ್ತೀಚೆಗೆ 5 ಹಂತಗಳಲ್ಲಿ ಲಾಕ್‌ಡೌನ್‌ ಸಡಿಲಿಸುವ ಬಗ್ಗೆ ಮಾರ್ಗಸುಚಿಯನ್ನು ಪ್ರಕಟಿಸಿತ್ತು. ಅದೇ ಸಂದೇಶವನ್ನು ಭಾರತದ್ದು ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್