ಬೆಂಗಳೂರು (ಫೆ. 02): ಇದುವರೆಗೆ ಹೈಸ್ಪೀಡ್‌ ಬಸ್ಸುಗಳು, ರೈಲುಗಳನ್ನು ನೋಡಿರುತ್ತೀರಿ. ಆದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಅಧಿಪತ್ಯ ಹೊಂದಿರುವ ಚೀನಾ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಚೀನಾದಲ್ಲಿ ಹಾರುವ, ಹೈಸ್ಪೀಡ್‌ ರೈಲುಗಳ ಸಂಚಾರ ಆರಂಭವಾಗಿದೆ.

Fact Check : ಓವೈಸಿಗೆ ಅಮಿತ್ ಶಾ ಕೃತಜ್ಞತೆ ಸಲ್ಲಿಸಿದ್ರಂತೆ, ಯಾಕಾಗಿ.?

ಚಕ್ರಗಳ ಬದಲಾಗಿ ಇವುಗಳಲ್ಲಿ ಪೆಟ್ಟಿಗೆಗಟ್ಟಲೆ ಆಯಸ್ಕಾಂತ ಇರಲಿದೆ. ಈ ಮೂಲಕವಾಗಿ ರೈಲುಗಳು ಸಂಚರಿಸಲಿವೆ. ಇವು ಗಂಟೆಗೆ 620 ಕಿ.ಮೀ ವೇಗದಲ್ಲಿ ಚಲಿಸಲಿವೆ’ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಉದ್ದದ ರೈಲು ಗಾಳಿಯಲ್ಲಿ ಹಾರಿ ಬರುತ್ತಿರುವ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ವಿಡಿಯೋದಲ್ಲಿ ಅತಿ ಉದ್ದದ ರೈಲು ಗುಡ್ಡಗಾಡಿನ ಮೂಲಕ ಹಾವಿನಂತೆ ಹಾರಿ ಬಂದು ನಂತರ ಭೂಮಿಯಲ್ಲಿ ನಿರ್ಮಿತವಾಗಿರುವ ಟ್ರ್ಯಾಕ್‌ ಮೇಲೆ ಸಾಗುವ ದೃಶ್ಯವಿದೆ. ಇದು ವೈರಲ್‌ ಆಗಿದ್ದು, ನೆಟ್ಟಿಗರು ವಿಡಿಯೋವನ್ನು ಪೋಸ್ಟ್‌ಮಾಡಿ ‘ಅತ್ಯದ್ಭುತ’ ಎಂದು ಬಣ್ಣಿಸಿದ್ದಾರೆ.

 

ಆದರೆ ನಿಜಕ್ಕೂ ಚೀನಾ ಹಾರುವ ರೈಲುಗಳನ್ನು ಅಭಿವೃದ್ಧಿಪಡಿಸಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಯುಟ್ಯೂಬ್‌ನಲ್ಲಿ ಲಭ್ಯವಿರುವ ವಿಡಿಯೋ ಗೇಮ್‌ನ ತುಣುಕನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ವೈರಲ್‌ ವಿಡಿಯೋ ‘ದಂಡಿ ಕೊಮರಾ ಟ್ರೈನ್ಸ್‌ ಫ್ಯಾನ್ಸ್‌ ’ ಹೆಸರಿನ ಯುಟ್ಯೂಬ್‌ ಚಾನೆಲ್‌ ಅಭಿವೃದ್ಧಿಪಡಿಸಿರುವ ರೈಲುಗಳ ಸ್ಟಂಟ್‌ ವಿಡಿಯೋ. ಅದರಲ್ಲಿ ಅದೊಂದು ವಿಡಿಯೋ ಗೇಮ್‌ ಎಂದು ತಿಳಿಸಿದ್ದಾರೆ. ಹಾಗಾಗಿ ವೈರಲ್‌ ಸುದ್ದಿ ಸುಳ್ಳು.

-- ವೈರಲ್ ಚೆಕ್