Fact Check: ಜಪಾನಿನಲ್ಲಿದೆ ಫಿಂಗರ್‌ ಪ್ರಿಂಟ್‌ ಶೇಪ್‌ನ ಹಳ್ಳಿ!

ಫಿಂಗರ್‌ ಪ್ರಿಂಟ್‌ನಂತೆ ಕಾಣುವ ಹಳ್ಳಿಯೊಂದರ ಗೂಗಲ್‌ ಲೊಕೇಶನ್‌ನ ಏರಿಯಲ್‌ ವ್ಯೂ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ಫಿಂಗರ್‌ ಪ್ರಿಂಟ್‌ ಶೇಪ್‌ ಇರುವ ಹಳ್ಳಿಯೊಂದು ಜಪಾನಿನಲ್ಲಿ ಇದೆ, ಅದರೆ ಹೆಸರು ಎರ್ಬಿಲ್‌ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact check of German village shaped like a fingerprint

ಫಿಂಗರ್‌ ಪ್ರಿಂಟ್‌ನಂತೆ ಕಾಣುವ ಹಳ್ಳಿಯೊಂದರ ಗೂಗಲ್‌ ಲೊಕೇಶನ್‌ನ ಏರಿಯಲ್‌ ವ್ಯೂ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ಫಿಂಗರ್‌ ಪ್ರಿಂಟ್‌ ಶೇಪ್‌ ಇರುವ ಹಳ್ಳಿಯೊಂದು ಜಪಾನಿನಲ್ಲಿ ಇದೆ, ಅದರೆ ಹೆಸರು ಎರ್ಬಿಲ್‌ ಎಂದು ಹೇಳಲಾಗಿದೆ.

ದ ರಿಫ್ಲೆಕ್ಷನ್‌ ಎನ್ನುವ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಈ ಫೋಟೋವನ್ನು ಪೋಸ್ಟ್‌ ಮಾಡಿತ್ತು. ಇದನ್ನೇ ನಂಬಿ ಹಲವಾರು ನೆಟ್ಟಿಗರು ಅಚ್ಚರಿಯ ವಿಷಯ ಎಂದು ಶೇರ್‌ ಮಾಡಿದ್ದಾರೆ. ಅದೀಗ ವೈರಲ್‌ ಆಗಿದೆ.

Fact check of German village shaped like a fingerprint

ಆದರೆ ನಿಜಕ್ಕೂ ಜಪಾನಿನಲ್ಲಿ ಇಂಥದ್ದೊಂದು ಹಳ್ಳಿ ಇದೆಯೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ. ಆರ್ಟ್‌ ವರ್ಕ್ ಫೋಟೋವನ್ನು ನಿಜಕ್ಕೂ ಅಸ್ತಿತ್ವದಲ್ಲಿರುವ ಹಳ್ಳಿಯೆಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ನೆಟ್ಟಿಗರನ್ನು ದಾರಿ ತಪ್ಪಿಸಲಾಗಿದೆ ಎನ್ನುವ ವಾಸ್ತವ ಬಯಲಾಗಿದೆ.

Fact Check| ದೆಹಲಿಯ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ್ರಾ?

ಜಾಕೋಬ್‌ ಎನ್ನುವ ಜಪಾನಿನ ಕಲೆಗಾರ ಈ ಡಿಜಿಟಲ್‌ ಆರ್ಟ್‌ ಬಿಡಿಸಿದ್ದರು. ಅದು ಎಂಒಡಿಯುಎಸ್‌ ಎನ್ನುವ ಮ್ಯಾಗಜೀನ್‌ನ ಕವರ್‌ ಪೇಜ್‌ನಲ್ಲಿ 2015ರಲ್ಲಿ ಪ್ರಕಟಗೊಂಡಿತ್ತು.

ಇದೇ ರೀತಿಯ ಇನ್ನೂ ಕೆಲವು ಫೋಟೋಗಳನ್ನು ಆರ್ಟಿಸ್ಟ್‌ ತಮ್ಮ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮಿನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ಅಲ್ಲದೆ ಜಪಾನಿನಲ್ಲಿ ಎರ್ಬಿಲ್‌ ಹೆಸರಿನ ಹಳ್ಳಿ ಇದೆಯೇ ಎಂದು ಪರಿಶೀಲಿಸಿದಾಗಲೂ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ. ಹಾಗಾಗಿ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟ.

-Fact Check 

Latest Videos
Follow Us:
Download App:
  • android
  • ios