ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಹೇರಿದ್ದ ಲಾಕ್‌ಡೌನ್‌ ಅನ್ನು ಹಂತಹಂತವಾಗಿ ಸಡಿಲಿಸಲಾಗುತ್ತಿದೆ. ಮೆಟ್ರೋ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಸಿನಿಮಾ ಮಂದಿರಗಳ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

fact Check: ಲಡಾಖ್ ಬಳಿ ಭಾರತದ ಯುದ್ಧ ವಿಮಾನ ಪತನಗೊಂಡಿತೆ?

ಈ ಕುರಿತ ಪೂರ್ಣ ಸಂದೇಶ ಹೀಗಿದೆ; ‘ಸಿನಿಮಾ ಕ್ಷೇತ್ರದವರಿಗೆ ಸಿಹಿ ಸುದ್ದಿ. ಅಕ್ಟೋಬರ್‌ 1 ರಿಂದ ಸಿನಿಮಾ ಥಿಯೇಟರ್‌ಗಳನ್ನು ತೆರೆಯಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಸಿರು ನಿಶಾನೆ ತೋರಿದ್ದಾರೆ. ಇದೇ ವಾರ ಈ ಸಂಬಂಧ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ’ ಎಂದು ಹೇಳಲಾಗಿದೆ. ಜೊತೆಗೆ ಈ ಕುರಿತ ವರದಿಯೊಂದರ ಲಿಂಕ್‌ ಅನ್ನೂ ಲಗತ್ತಿಸಲಾಗಿದೆ. ಇದೀಗ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

 

ಆದರೆ  ಈ ಸುದ್ದಿಯ ಸತ್ಯಾಸತ್ಯವನ್ನು ಬಯಲಿಗೆಳೆದು ಇದು ಸುಳ್ಳುಸುದ್ದಿ ಎನ್ನುವುದನ್ನು ಖಚಿತಪಡಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಅನ್‌ಲಾಕ್‌-4 ಮಾರ್ಗಸೂಚಿಯಲ್ಲಿ ಸಿನಿಮಾ ಮಂದಿರಗಳು ಇನ್ನೂ ಮುಚ್ಚಿರಲಿವೆ ಎಂದು ಹೇಳಿದೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ ಅಥವಾ ಪಿಐಬಿ ಸಹ ಸ್ಪಷ್ಟನೆ ನೀಡಿ, ‘ಅಕ್ಟೋಬರ್‌ 1 ರಿಂದ ಸಿನಿಮಾ ಥಿಯೇಟರ್‌ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂಬುದು ಸುಳ್ಳುಸುದ್ದಿ’ ಎಂದು ಹೇಳಿದೆ. ಕೊರೋನಾ ಲಾಕ್‌ಡೌನ್‌ ಆರಂಭವಾದಾಗಿನಿಂದಲೂ ಥಿಯೇಟರ್‌ಗಳು ಮುಚ್ಚಿವೆ. ಸಿನಿಮಾ ಮಂದಿರ ಆರಂಭಿಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

- ವೈರಲ್ ಚೆಕ್