Fact Check : ಭಾರತೀಯ ಸೇನೆಯ 158 ಯೋಧರನ್ನು ಹತ್ಯೆಗೈತಾ ಚೀನಾ?
ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಸಂದರ್ಭದಲ್ಲಿ ಚೀನಾ ಭಾರತದೊಂದಿಗೆ ಗಡಿ ವಿಚಾರಕ್ಕೆ ಜಗಳಕ್ಕೆ ನಿಂತಿದæ. ಈ ವಿಚಾರವಾಗಿ ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ರಾಕೆಟ್ ದಾಳಿ ನಡೆಸಿರುವ ಚೀನಾ, ಭಾರತ ಸೇನೆಯ 158 ಯೋಧರನ್ನು ಹತ್ಯೆಗೈದಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಸಂದರ್ಭದಲ್ಲಿ ಚೀನಾ ಭಾರತದೊಂದಿಗೆ ಗಡಿ ವಿಚಾರಕ್ಕೆ ಜಗಳಕ್ಕೆ ನಿಂತಿದæ. ಈ ವಿಚಾರವಾಗಿ ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ.
Fact Check: ಭಾರತ ಸೇನೆಯ 75 ಯೋಧರನ್ನು ಕೊಂದು ಹಾಕಿತಾ ಚೀನಾ?
ಈ ನಡುವೆ ರಾಕೆಟ್ ದಾಳಿ ನಡೆಸಿರುವ ಚೀನಾ, ಭಾರತ ಸೇನೆಯ 158 ಯೋಧರನ್ನು ಹತ್ಯೆಗೈದಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವಾರು ಫೇಸ್‌ಬುಕ್ ಬಳಕೆದಾರರು ಸೇನಾ ವಾಹನಗಳಿಗೆ ಬೆಂಕಿ ಹೊತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ ‘ಉತ್ತರ ಸಿಕ್ಕಿಂ ಭಾರತದಲ್ಲಿ ಭಾರತ-ಚೀನೀ ಸೈನಿಕರ ಸಂಘರ್ಷ ತಾರಕಕ್ಕೇರಿದೆ. ರಾಕೆಟ್ ದಾಳಿ ನಡೆಸಿ ಚೀನಾ, ಭಾರತದ 158 ಯೋಧರನ್ನು ಹತ್ಯೆಗೈದಿದೆ’ ಎಂದು ಬರೆದುಕೊಂಡಿದ್ದಾರೆ. ಇದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಇಲ್ಲಿ ಪೋಸ್ಟ್ ಮಾಡಲಾದ ಫೋಟೋ 3 ವರ್ಷ ಹಳೆಯದ್ದು ಎಂದು ಖಚಿತಪಡಿಸಿದೆ. 2017ರಲ್ಲಿ ಅರುಣಾಚಲ ಪ್ರದೇಶ ಸೇನಾ ಕ್ಯಾಂಪ್‌ನಲ್ಲಿ ಆಕಸ್ಮಿಕವಾಗಿ ಮೋರ್ಟರ್ ಶೆಲ್ ಸ್ಫೋಟಗೊಂಡು ಸೈನಿಕನೋರ್ವ ಮೃತಪಟ್ಟು, 6 ಜನರು ಗಾಯಗೊಂಡಿದ್ದರು.
ಈ ಘಟನೆಯ ಫೋಟೋವನ್ನು ಬಳಸಿಕೊಂಡು ಕಳೆದ 3 ವರ್ಷಗಳಿಂದಲೂ ಸುಳ್ಳುಸುದ್ದಿ ಹರಡಲಾಗುತ್ತಿದೆ. 2017ರಲ್ಲಿ ಭಾರತ-ಚೀನಾ ನಡುವೆ ಡೊಕ್ಲಾಂ ವಿಚಾರವಾಗಿ ವಿವಾದ ಏರ್ಪಟ್ಟಾಗಲೂ ಇದೇ ಫೋಟೋ ಬಳಸಿ ಸುಳ್ಳುಸುದ್ದಿ ಹರಡಲಾಗಿತ್ತು.
- ವೈರಲ್ ಚೆಕ್