ಪವಿತ್ರ ಗಂಗಾ ನದಿಯಲ್ಲಿ ಅಪರಿಚಿತ ಹೆಣಗಳು ತೇಲಾಡುವುದು ಹೊಸತೇನಲ್ಲ. ಆದರೆ ಇತ್ತೀಚೆಗೆ ದೇಶದಲ್ಲಿನ ಕೊರೋನಾ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಕೊರೋನಾ ಸೋಂಕಿತ ಮೃತ ದೇಹಗಳಲ್ಲಿ ಪಟನಾದಲ್ಲಿ ಗಂಗಾ ನದಿಯಲ್ಲಿ ತೇಲಿ ಬಿಡಲಾಗುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಭಾರತದ ಯೋಧರಿಗೆ ಚೀನಾ ಮತ್ತೆ ಹಿಂಸೆ ನೀಡಿತಾ?

ಸುತ್ತಿಟ್ಟ ಮೃತ ದೇಹವನ್ನು ದೋಣಿಯಲ್ಲಿ ಬಂದ ಮೂವರು ನೀರಿಗೆ ಎಸೆಯುವ ದೃಶ್ಯವಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ಕೊರೋನಾ ಸೋಂಕು ತಗುಲಿ ಮೃತಪಟ್ಟಿರುವವರನ್ನು ಪಟನಾದಲ್ಲಿ ಗಂಗಾ ನದಿಗೆ ಎಸೆಯುತ್ತಿರುವ ದೃಶ್ಯವಿದು. ಸೋಂಕಿತರ ಸಾವನ್ನು ಮುಚ್ಚಿಡುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ. ಇದರ ಬಗ್ಗೆ ಬಿಜೆಪಿ-ಜೆಡಿಯು ಆಡಳಿತವಿರುವ ಬಿಹಾರದಲ್ಲಿ ಪ್ರೈಮ್‌ ಟೈಮ್‌ ಡಿಬೇಟ್‌ ನಡೆಯುವುದಿಲ್ಲ’ ಎಂದು ಒಕ್ಕಣೆ ಬರೆಯಲಾಗಿದೆ. ಇದೀಗ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಕೋವಿಡ್‌ ಸೋಂಕಿತರ ಶವಗಳನ್ನು ನದಿಗೆ ಎಸೆಯಲಾಗುತ್ತಿದೆಯೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ವೈರಸ್‌ ಸುದ್ದಿ ಅರ್ಧ ಸತ್ಯ ಎಂಬ ವಾಸ್ತವ ತಿಳಿದುಬಂದಿದೆ. ಈ ಬಗ್ಗೆ ಹುಡುಕಹೊರಟಾಗ ಸುದ್ದಿಸಂಸ್ಥೆಯೊಂದರಲ್ಲಿ ವೈರಲ್‌ ವಿಡಿಯೋಗೆ ಸಾಮ್ಯತೆ ಇರುವ ಫೋಟೋವನ್ನು ಪ್ರಕಟಿಸಿ ವರದಿ ಮಾಡಿರುವುದು ಕಂಡುಬಂದಿದೆ. ಅದರಲ್ಲಿ ‘ಪಟನಾ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿ ಕಾಲಿ ಘಾಟ್‌ ಬಳಿಯ ಗಂಗಾನದಿಯಲ್ಲಿ ಅನಾಮಿಕ ಹೆಣವೊಂದನ್ನು ವಿಲೇವಾರಿ ಮಾಡಿದರು’ ಎಂದು ಒಕ್ಕಣೆ ಬರೆಯಲಾಗಿದೆ. ಆದರೆ ಆ ವ್ಯಕ್ತಿ ಕೊರೋನಾ ಸೋಂಕಿತರೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಬೋಟ್‌ನಲ್ಲಿ ಒಂದೇ ಶವ ಇತ್ತು ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.

- ವೈರಲ್ ಚೆಕ್