Asianet Suvarna News Asianet Suvarna News

Fact Check: ಎನ್‌ಆರ್‌ಸಿಗೆ ಸಹಿ ಹಾಕುವವರೆಗೂ ಎಟಿಎಂ ಶಟ್‌ಡೌನ್‌?

ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರಲು ಕೇಂದ್ರ ಸರ್ಕಾರ  ಉತ್ತರ ಪ್ರದೇಶ, ಬಿಹಾರ ಮಣಿಪುರದಲ್ಲಿ ಏಕಾಏಕಿ ಎಲ್ಲರ ಬ್ಯಾಂಕ್‌ ಖಾತೆಗಳು ಮತ್ತು ಎಟಿಎಂಗಳು ಸ್ಥಗಿತಗೊಳಿಸಿದೆ ಎನ್ನಲಾಗುತ್ತಿದೆ. ನಿಜನಾ ಈ ಸುದ್ದಿ? 

Fact Check of Bank accounts ATM to be shut without NRC
Author
Bengaluru, First Published Oct 3, 2020, 9:33 AM IST

ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರಲು ಕೇಂದ್ರ ಸರ್ಕಾರ ಭಯಾನಕ ಹಾದಿ ಹಿಡಿದಿದೆ. ಉತ್ತರ ಪ್ರದೇಶ, ಬಿಹಾರ ಮಣಿಪುರದಲ್ಲಿ ಏಕಾಏಕಿ ಎಲ್ಲರ ಬ್ಯಾಂಕ್‌ ಖಾತೆಗಳು ಮತ್ತು ಎಟಿಎಂಗಳು ಸ್ಥಗಿತಗೊಂಡಿವೆ. ಎನ್‌ಆರ್‌ಸಿಗೆ ಸಹಿ ಹಾಕುವ ವರೆಗೆ ಇವು ತೆರೆಯುವುದಿಲ್ಲ ಎಂದು ಹೇಳಲಾಗುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಜೊತೆಗೆ ‘ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳ ಮತ್ತಿತರ ರಾಜ್ಯಗಳಲ್ಲಿ ಬ್ಯಾಂಕ್‌ ಖಾತೆಗಳು ಮತ್ತು ಎಟಿಎಂ ಇನ್ನೂ ಸ್ಥಗಿತಗೊಂಡಿಲ್ಲ. ಹಾಗಾಗಿ ಬೇಗನೆ ನಿಮ್ಮ ಹಣವನ್ನು ಹಿಂಪಡೆದುಕೊಳ್ಳಿ. ಇಲ್ಲದಿದ್ದರೆ ಸಾಕಷ್ಟುತೊಂದರೆ ಎದುರಿಸಬೇಕಾಗುತ್ತದೆ. ಯಾವ ಪ್ರತಿಕೆ, ಸುದ್ದಿವಾಹಿನಿಗಳೂ ಈ ಬಗ್ಗೆ ವರದಿ ಮಾಡಿಲ್ಲ. ದಯವಿಟ್ಟು ಈ ಸುದ್ದಿಯನ್ನು ಆದಷ್ಟುಶೇರ್‌ ಮಾಡಿ. ಈ ಸುದ್ದಿ ಸತ್ಯ’ ಎಂದು ಹೇಳಲಾಗಿದೆ.

Fact Check: ದೇಶವನ್ನೇ ಬೆಚ್ಚಿ ಬೀಳಿಸಿರುವ ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಈಕೆನಾ?

ಆದರೆ ನಿಜಕ್ಕೂ ಎನ್‌ಆರ್‌ಸಿ ಜಾರಿ ಮಾಡುವ ವರೆಗೆ ಬ್ಯಾಂಕ್‌ ಕೆಲಸಕಾರ‍್ಯಗಳು ಸ್ಥಗಿತಗೊಳ್ಳುವುದು ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಆರ್‌ಬಿಐ ಅಧಿಕಾರಿಗಳೊಂದಿಗೇ ಸ್ಪಷ್ಟನೆ ಪಡೆದಿದ್ದು, ಅವರು ‘ಇದು ಸುಳ್ಳು ಸುದ್ದಿ.ಆರ್‌ಬಿಐ ಇಂಥ ಯಾವುದೇ ನಿಯಮ ಜಾರಿ ಮಾಡಿಲ್ಲ’ ಎಂದಿದ್ದಾರೆ. ಅಲ್ಲದೆ ದೇಶಾದ್ಯಂತ ಎನ್‌ಆರ್‌ಸಿ ಜಾರಿಮಾಡುವ ಬಗ್ಗೆ ಯಾವುದೇ ಯೋಜನೆ ಇನ್ನೂ ಸಿದ್ಧವಾಗಿಲ್ಲ ಎಂದು ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ತಿಳಿಸಿದೆ.

- ವೈರಲ್ ಚೆಕ್ 

Follow Us:
Download App:
  • android
  • ios