ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ 19 ವರ್ಷದ ದಲಿತ ಯುವತಿಯ ಪ್ರಕರಣದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದರೊಂದಿಗೆ ಆ ಯುವತಿಯ ಚಿತ್ರ ಎಂದು ಹುಡುಗಿಯೊಬ್ಬಳ ಫೋಟೋವನ್ನು ಪೋಸ್ಟ್‌ ಮಾಡಲಾಗುತ್ತಿದೆ.

 

 

ಕೆಲ ಸುದ್ದಿವಾಹಿನಿಗಳೂ ಇದೇ ಫೋಟೋ ಪ್ರಕಟಿಸಿವೆ. ಆದರೆ ವೈರಲ್‌ ಫೋಟೋ ನಿಜಕ್ಕೂ ಹಥ್ರಾಸ್‌ ಸಂತ್ರಸ್ತೆಯ ಫೋಟೋವೇ ಎಂದು  ಪರಿಶೀಲಿಸಿದಾಗ ವೈರಲ್‌ ಫೋಟೋದಲ್ಲಿರುವ ಹುಡುಗಿಗೂ, ಈ ಅತ್ಯಾಚಾರ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದುಬಂದಿದೆ.

Fact Check: ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ! ಉನ್ನತ ವ್ಯಾಸಂಗಕ್ಕೆ 1 ಲಕ್ಷ ಸ್ಕಾಲರ್ಶಿಪ್?

ಸುದ್ದಿವಾಹಿನಿಗೆ ಹಥ್ರಾಸ್‌ ಸಂತ್ರಸ್ತೆಯ ಸೋದರನೇ ಈ ಬಗ್ಗೆ ಸ್ಪಷ್ಟನೀಡಿದ್ದು, ‘ಫೋಟೋದಲ್ಲಿರುವ ಹುಡುಗಿ ತಮ್ಮ ಸೋದರಿ ಅಲ್ಲ’ ಎಂದು ತಿಳಿಸಿದ್ದಾರೆ. ಸ್ಥಳೀಯರೂ ಸಹ ಫೋಟೋದಲ್ಲಿರುವ ಹುಡುಗಿ ಸಂತ್ರಸ್ತೆ ಅಲ್ಲ ಎಂದಿದ್ದಾರೆ. ಅಂದಹಾಗೆ ವೈರಲ್‌ ಚಿತ್ರದಲ್ಲಿರುವ ಹುಡುಗಿ ಹೆಸರು ಮನೀಷಾ ಯಾದವ್‌. ಉತ್ತರ ಪ್ರದೇಶದ ಅಯೋಧ್ಯೆ ಮೂಲದ ಮನೀಷಾ ಸರಿಯಾದ ವೈದ್ಯಕೀಯ ಸೌಲಭ್ಯ ಲಭ್ಯವಾಗದೆ 2018ರ ಜುಲೈ 22ರಂದು ಚಂಡೀಗಢದಲ್ಲಿ ಮೃತಪಟ್ಟಿದ್ದಳು. ವೈದ್ಯರ ನಿರ್ಲಕ್ಷ್ಯದ ವಿರುದ್ಧ ಆಗ ಆಕೆಯ ಕುಟುಂಬದವರು ‘ಜಸ್ಟೀಸ್‌ ಫಾರ್‌ ಮನೀಷಾ’ ಎಂಬ ಆಂದೋಲ ಆರಂಭಿಸಿದ್ದರು. ಸದ್ಯ ಅದೇ ಫೋಟೋವನ್ನು ಹಥ್ರಾಸ್‌ ಸಂತ್ರಸ್ತೆ ಎಂದು ಪೋಸ್ಟ್‌ ಮಾಡಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್