Fact Check: ಲಡಾಖ್‌ನಲ್ಲಿ ಹುತಾತ್ಮರಾಗಿದ್ದು 57 ಜನ?
ಪೂರ್ವ ಲಡಾಖ್‌ನಲ್ಲಿ ನಡೆದ ಭಾರತ-ಚೀನಾ ಸೈನಿಕರ ಹಿಂಸಾತ್ಮಕ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದು, ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಚಿಕ್ಕಕೋಣೆಯಲ್ಲಿ 50ಕ್ಕೂ ಹೆಚ್ಚು ಸೈನಿಕರು ಒಬ್ಬರ ಮೇಲೊಬ್ಬರು ಮಲಗಿರುವ ಫೋಟೋವನ್ನು ಪೋಸ್ಟ್ ಮಾಡಿ, ಗಲ್ವಾಣ್ ಕಣಿವೆಯಲ್ಲಿ ಉಂಟಾದ ಚೀನಾ-ಭಾರತ ಸಂಘರ್ಷದಲ್ಲಿ ಈ 57 ಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ?
ಪೂರ್ವ ಲಡಾಖ್‌ನಲ್ಲಿ ನಡೆದ ಭಾರತ-ಚೀನಾ ಸೈನಿಕರ ಹಿಂಸಾತ್ಮಕ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದು, ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಚಿಕ್ಕಕೋಣೆಯಲ್ಲಿ 50 ಕ್ಕೂ ಹೆಚ್ಚು ಸೈನಿಕರು ಒಬ್ಬರ ಮೇಲೊಬ್ಬರು ಮಲಗಿರುವ ಫೋಟೋವನ್ನು ಪೋಸ್ಟ್ ಮಾಡಿ, ಗಲ್ವಾಣ್ ಕಣಿವೆಯಲ್ಲಿ ಉಂಟಾದ ಚೀನಾ-ಭಾರತ ಸಂಘರ್ಷದಲ್ಲಿ ಈ 57 ಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ. ಆಸಿಯಾ ಜರ್ಗಾರ್ ಎಂಬವರು ಮೊದಲಿಗೆ ಇದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಇದು ಲಡಾಖ್ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಮೃತದೇಹಗಳೇ ಎಂದು ಇಂಡಿಯಾ ಟು ಡೇ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಏಕೆಂದರೆ ವೈರಲ್ ಫೋಟೋ ಕಳೆದ ಒಂದು ವರ್ಷ ಹಳೆಯದು.
Fact Check: ಭಾರತ ಸೇನೆಯ 75 ಯೋಧರನ್ನು ಕೊಂದು ಹಾಕಿತಾ ಚೀನಾ?
ಹಾಗಾಗಿ ಈ ಪೋಟೋಗೂ ಲಡಾಖ್ ಸಂಘರ್ಷಕ್ಕೂ ಸಂಬಂಧ ಇಲ್ಲ ಎಂಬುದು ಸ್ಪಷ್ಟ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಒಂದು ವರ್ಷದ ಹಿಂದೆ ಮಧ್ಯಪ್ರದೇಶದ ತೇಕಣಪುರ ಬಿಎಸ್‌ಎಫ್ ಅಕಾಡೆಮಿ ಬಳಿ ಹೊರಾಂಗಣ ತರಬೇತಿ ಮುಗಿಸಿ ಬಂದ ಯೋಧರು ಕೋಣೆಯೊಂದರಲ್ಲಿ ವಿಶ್ರಾಂತಿ ಪಡೆಯುತ್ತಿರುವ ಫೋಟೋ ಇದು ಎಂದು ಖಚಿತವಾಗಿದೆ. ಸ್ವತಃ ಬಿಎಸ್‌ಎಫ್ ಸಹ ಇದೇ ಫೋಟೋವನ್ನು ಕಳೆದ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿತ್ತು. ಹಾಗಾಗಿ ವೈರಲ್ ಸುದ್ದಿ ಸುಳ್ಳು.
- ವೈರಲ್ ಚೆಕ್