Fact Check; ಏ. 19ರವರೆಗೆ ಭಾರತದಲ್ಲಿ ಲಾಕ್‌ಡೌನ್?

ಹೆಚ್ಚುತ್ತಿರುವ ಕೊರೋನಾ ಅಬ್ಬರ/ ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್/ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯ ಅಬ್ಬರ/ ಸತ್ಯ ಪರಿಶೀಲನೆ ಮಾಡಿದಾಗ ಎಲ್ಲವೂ ಬಹಿರಂಗ

Fact Check Another lockdown in India till April 19 truth behind viral message mah

ಬೆಂಗಳೂರು(ಏ. 11)  ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದೆ.  ಕೊರೋನಾ ನಿಯಂತ್ರಣಕ್ಕೆ ಹಲವು ರಾಜ್ಯಗಳು ಕೊರೋನಾ ನಿಷೇಧಾಜ್ಞೆ ಹೇರಿವೆ. ಈ ನಡುವೆ ಭಾರತದಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. 

ಸೋಶಿಯಲ್ ಮೀಡಿಯಾದಲ್ಲಿ ಲಾಕ್ ಡೌನ್ ಕುರಿತ ಸುದ್ದಿಗಳು ಹರಿದಾಡುದ್ದು ಒಂದು ಫೋಟೋ ಭಾರಿ ವೈರಲ್ ಆಗುತ್ತಿದೆ.  ಅದರಲ್ಲಿ ಏಪ್ರಿಲ್ 9 ರಿಂದ 19 ರವರೆಗೆ ಭಾರತದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುತ್ತಿದೆ ಎಂದು  ಹೇಳಲಾಗಿದೆ.

ಕರ್ನಾಟಕದಲ್ಲಿ ಒಂದೇ ದಿನ ಕೊರೋನಾ ಮಹಾಸ್ಫೋಟ

ಆದರೆ ಇದನ್ನು ಪಿಐಬಿ ಫ್ಯಾಕ್ಟ್ ಚೆಕ್ ತನಿಖೆ ಮಾಡಿ ಸುಳ್ಳು.. ಇದೊಂದು ವದಂತಿ ಎಂಬುದನ್ನು ತಿಳಿಸಿದೆ.  ಏಪ್ರಿಲ್ 9 ರಿಂದ 19 ರವರೆಗೆ ಭಾರತ ಸರ್ಕಾರವು ಲಾಕ್‌ಡೌನ್ ಮಾಡಲಾಗುತ್ತಿದೆ ಯಾವ ಕಾರಣಕ್ಕೂ ಇಂಥ ಸುದ್ದಿಗಳಿಗೆ ಕಿವಿಕೊಡಬೇಡಿ. ಅಧಿಕೃತವಾಗಿ ಸರ್ಕಾದಿಂದ ಪ್ರಕಟಣೆ  ಬಂದರೆ ಮಾತ್ರ ನಂಬಿ ಎಂದು ತಿಳಿಸಿದೆ.

ಕರ್ನಾಟಕದಲ್ಲಿಯೂ ಕೊರೋನಾ ಅಬ್ಬರ ಮುಂದುವರಿದಿದೆ. ರಾಜ್ಯದಲ್ಲಿ ಇಂದು (ಭಾನುವಾರ) ಕೋವಿಡ್ ಪ್ರಕರಣಗಳ ಸ್ಫೋಟವಾಗಿದೆ. ಬರೋಬ್ಬರಿ 10,250 ಜನರಿಗೆ ಸೊಂಕು ತಗುಲಿರುವುದು ದೃಢಪಟ್ಟಿದ್ದು, 40 ಜನರು ಮೃತಪಟ್ಟಿದ್ದಾರೆ.

ಇದರೊಂದಿಗೆ ಒಟ್ಟು ಸೊಂಕಿತರ ಸಂಖ್ಯೆ 10,65,290ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 12,889ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 

Latest Videos
Follow Us:
Download App:
  • android
  • ios