ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆ ಧಾರಾವಾಹಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಒಂದೇ ವಾರದಲ್ಲಿ ಟಿಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. 

ಒಳ್ಳೆಯ ಕಥೆ, ಮನಸ್ಸಿಗೆ ಮುದ ಎನಿಸುವ ನಿರೂಪಣೆ, ಅನಿರುದ್ಧ್ ಅವರ ನಟನೆ, ಮೇಘನಾ ಶೆಟ್ಟಿ ತುಂಟ ನಟನೆ, ಸುಬ್ಬುವಿನ ಕಾಮಿಡಿ, ಪುಷ್ಪಾರ ವಾಚಾಳಿತನ ಎಲ್ಲವೂ ಆಪ್ತ ಎನಿಸುವಂತಿದೆ. 

45 ವರ್ಷದ ಅನಿರುದ್ಧ್‌ಗೆ ಒಲಿಯಲಿದ್ದಾಳಾ 20ರ ಹುಡುಗಿ?

ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಖ್ಯಾತ ಉದ್ಯಮಿ ಆರ್ಯವರ್ಧನ್ ಪಾತ್ರ ಗಮನ ಸೆಳೆಯುತ್ತಿದೆ. ಕಥೆಯೂ ಕೂಡಾ ವಿಭಿನ್ನವಾಗಿದೆ. ಅತ್ತೆ-ಸೊಸೆ ಜಗಳ, ಮನೆಯವರ ಮಧ್ಯೆಯೇ ಒಡಕು, ಕುತಂತ್ರಗಳನ್ನು ನೋಡಿ ನೋಡಿ ಸಾಕಾಗಿರುವ ಪ್ರೇಕ್ಷಕನಿಗೆ ಇಂತಹ ನವಿರಾದ ಪ್ರೇಮ ಕಥೆ ಮುದ ನೀಡುವುದು ಸುಳ್ಳಲ್ಲ. ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ ಈ ವಾರದ ಟಿಆರ್ ಪಿಯಲ್ಲಿ ಜೊತೆ ಜೊತೆಯಲಿ ಮೊದಲ ಸ್ಥಾನದಲ್ಲಿದೆ. 

ಮದ್ವೆಯಾಗೋ ಹುಡುಗ ಹುಡುಗಿ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದರೆ ಏನೆಲ್ಲ ಸನ್ನಿವೇಶ ಎದುರಾಗಬಹುದು ಅನ್ನುವ ಕತೆ ಹಿಂದಿನ ‘ಜೊತೆ ಜೊತೆಯಲಿ’ ಸೀರಿಯಲ್‌ಗಿತ್ತು. ಈ ಬಾರಿಯೂ 45 ವರ್ಷದ ಉದ್ಯಮಿ ಹಾಗೂ 20 ವರ್ಷದ ಮಧ್ಯಮವರ್ಗದ ಯುವತಿ ನಡುವೆ ನಡೆಯುವ ಪ್ರೇಮದ ಚಿತ್ರಣವಿದೆ. 

ಶುಭ ವಿವಾಹ, ಜೋಡಿಹಕ್ಕಿಯಂತಹ ಯಶಸ್ವಿ ಧಾರವಾಹಿಗಳನ್ನು ನಿರ್ದೇಶಿಸಿದ್ದ ಆರೂರು ಜಗದೀಶ್ ಈ ಸೀರಿಯಲ್ ಸಾರಥ್ಯ ವಹಿಸಿಕೊಂಡಿದ್ದಾರೆ. ಝೀ ಕನ್ನಡ ತಂಡದ ಕಥೆಯಿದ್ದು, ಸುಧೀಂದ್ರ ಭಾರದ್ವಾಜ್, ಪವನ್ ಶ್ರೀವತ್ಸ ಚಿತ್ರಕಥೆ, ಸತ್ಯ ಕೆ ಸಂಭಾಷಣೆ ರಚಿಸಿದ್ದಾರೆ.

‘ಪೈಲ್ವಾನ್’ ಪೈರಸಿ ಆರೋಪಿ ರಾಕೇಶ್ ಬಂಧನ

‘ಈಗಾಗಲೇ ತನ್ನ ಪ್ರೋಮೋ ಮೂಲಕವೇ ವೀಕ್ಷಕರಲ್ಲಿ ಕುತೂಹಲವನ್ನು ಈ ಧಾರಾವಾಹಿ ಕ್ರಿಯೇಟ್ ಮಾಡಿದ್ದು, ನಿರೀಕ್ಷೆಗಿಂತ ಹೆಚ್ಚಿನದನ್ನು ಪ್ರಯತ್ನಿಸಿದ್ದೇವೆ’ ಎಂದು ನಿರ್ದೇಶಕ ಆರೂರು ಜಗದೀಶ್ ಹೇಳಿದ್ದಾರೆ.