ಸಿನಿಮಾಗಳಿಂದ ದೂರ ಸರಿದಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್  ಈಗ ಕಿರುತೆರೆ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 

ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ 'ಜೊತೆ ಜೊತೆಯಲಿ' ಎಂಬ ಧಾರಾವಾಹಿ ಮೂಡಿ ಬರುತ್ತಿದೆ. ಈ ಸೀರಿಯಲ್ ನಲ್ಲಿ ಅನಿರುದ್ಧ್ ನಾಯಕರಾಗಿದ್ದಾರೆ. 

ಸೀರಿಯಲ್ ನಾಯಕಿ ಅನುಗೆ 20 ವರ್ಷ. ನಾಯಕ  ಆರ್ಯವರ್ಧನ್ ಗೆ 45 ವರ್ಷ. ಇಬ್ಬರೂ ಬೇರೆ ಬೇರೆ ಮನಸ್ಥಿತಿಯವರು. ಅನುಗೆ ಮದುವೆ ಮಾಡಲು ತಾಯಿ ಒತ್ತಾಯಿಸಿದರೆ ಆರ್ಯವರ್ಧನ್ ಗೂ ವಯಸ್ಸಾಯಿತು ಎಂಬ ಚಿಂತೆ. ಇವರಿಬ್ಬರೂ ಮದುವೆಯಾಗ್ತಾರಾ? ಜನರೇಶನ್ ಗ್ಯಾಪ್ ಬರುತ್ತಾ? ಕಾದು ನೋಡಬೇಕಿದೆ. 

 

ಅನಿರುದ್ಧ್ ಚಿಟ್ಟೆ, ತುಂಟಾಟ, ರಾಜಾ ಸಿಂಹ, ಶಬರಿಮಲೆ ಯಾತ್ರೆ, ಪಾಂಚಾಲಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವುದೂ ಅಷ್ಟೊಂದು ಯಶಸ್ವಿಯಾಗಲಿಲ್ಲ. ಹಾಗಾಗಿ ಸಿನಿಮಾಗಳಿಂದ ದೂರವೇ ಉಳಿದಿದ್ದರು.