ದೊಡ್ಡ ಹೆಸರು ಮಾಡುತ್ತಿರುವ ಕಾರಣ ಟ್ರೆಂಡ್ ಆಗುತ್ತಿವೆ ಸ್ಯಾಂಡಲ್‌ವುಡ್ ಸಿನಿಮಾಗಳು ಹಾಗೂ ಹಾಡುಗಳು. ಯೂಟ್ಯೂಬ್ ತನ್ನ ಟ್ಟಿಟ್ಟರ್ ಖಾತೆಯಲ್ಲಿ ಇದೇ ಮೊದಲು ಕನ್ನಡ ಸಿನಿಮಾವೊಂದರ ಬಗ್ಗೆ ಪೋಸ್ಟ್ ಮಾಡಿದೆ.
ಅದೊಂದು ಕಾಲವಿತ್ತು ಕನ್ನಡಿಗರು ಬಿಟ್ಟು ಬೇರೆ ಯಾರೂ ಕನ್ನಡ ಚಿತ್ರಗಳನ್ನು ನೋಡುತ್ತಿರಲಿಲ್ಲ. ಆದರೀಗ ಕಾಲ ಬದಲಾಗಿದೆ. KGF ಪಂಚ ಭಾಷೆಗಳಲ್ಲಿ ರಿಲೀಸ್ ಮಾಡಿದ್ದು, ಎಲ್ಲರೂ ಭೇಷ್ ಎಂದಿದ್ದಾರೆ. ಅಲ್ಲದೇ 'ನಟಸಾರ್ವಭೌಮ', 'ಕುರುಕ್ಷೇತ್ರ', 'ಭರಾಟೆ' , 'ಸೀತರಾಮ ಕಲ್ಯಾಣ' ಹಾಗೂ 'ಯಜಮಾನ' ಚಿತ್ರಗಳ ಟ್ರೈಲರ್, ಹಾಡುಗಳು... ಹೀಗೆ ಒಂದಲ್ಲ ಒಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.
ಬಾಕ್ಸ್ ಆಫಿಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ದಿ ಮೋಸ್ಟ್ ಅವೈಟೆಡ್ ಸಿನಿಮಾ 'ಯಜಮಾನ.' ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಭರ್ಜರಿ ಸದ್ದು ಮಾಡುತ್ತಿದೆ.
ಯಜಮಾನ ಟ್ರೈಲರ್ ರಿಲೀಸ್! ನೋಡ್ರಪ್ಪ ಡಿ ಬಾಸ್ ಖದರ್
'ಯಜಮಾನ' ಟ್ರೈಲರ್ ರಿಲೀಸ್ ಆದ 24 ಗಂಟೆಗಳಲ್ಲಿಯೇ ಕೋಟಿ ಮಂದಿ ವೀಕ್ಷಿಸಿದ್ದಾರೆ. ಈ ಪರಿ ರೆಸ್ಪಾನ್ಸ್‌ಗೆ YouTube ಸಂಸ್ಥೆಯೇ ಮಾರು ಹೋಗಿದೆ. 'ಈ ಅತಿಥಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ನೀವು ನೋಡಿದರೆ ತಿಳಿಯುತ್ತದೆ' ಎಂದು ಯೂಟ್ಯೂಬ್ ಟ್ಟೀಟ್ ಮಾಡಿತ್ತು.
ಇದನ್ನು ನವರಸ ನಾಯಕ ಜಗ್ಗೇಶ್ ರೀ-ಟ್ಟೀಟ್ ಮಾಡಿ, ಸಂತೋಷ ವ್ಯಕ್ತ ಪಡಿಸಿದ್ದಾರೆ. 'ಹೃದಯ ತುಂಬಿ ಬಂತು ಕನ್ನಡ ಚಿತ್ರರಂಗದ ರಹದಾರಿ ಕಂಡು. ಹಾರಲಿ ಏರಲಿ ಕನ್ನಡದ ಭಾವುಟ. ನಾನ ಚಿತ್ರಮಂದಿರದಲ್ಲಿಯೇ ನೋಡಿ ಬೆಂಬಲಿಸುವೆ. ಯಜಮಾನ ತಂಡಕ್ಕೆ ಬೆಸ್ಟ್ ಆಫ್ ಲಕ್,' ಎಂದಿದ್ದಾರೆ.
