ಟ್ರೈಲರ್ ನೊಡಿದರೇನೇ ಸಿನಿಮಾದಿಂದ ಏನೆಲ್ಲಾ ಎಕ್ಸ್ ಪೆಕ್ಟ್ ಮಾಡಬಹುದು ಎಂದು ಸುಲಭವಾಗಿ ಹೇಳಬಹುದು. ಸದ್ಯದ ಸ್ಯಾಂಡಲ್ ವುಡ್ ಭರ್ಜರಿ ನ್ಯೂಸ್ ಅಂದ್ರೆ ಯಜಮಾನ ಚಿತ್ರದ ಟ್ರೈಲರ್ ಟ್ರೆಂಡ್ ಆಗುತ್ತಿದೆ.

‘ಆಕಾಶಕ್ಕೆ ತಲೆಕೊಟ್ಟು ಭೂಮಿಗೆ ಬೆವರು ಸುರಿಸಿ ನಿಯತ್ತಿಂದ ಕಟ್ಟಿರುವ ಸ್ವಂತ ಬ್ರಾಂಡ್’ ಎಂದು ಹೇಳಿಕೊಂಡು ಕೈಯಲ್ಲೊಂದು ಗಂಟೆ ಹಿಡಿದು ಖದರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ದಾಸ.

ಆ್ಯಕ್ಷನ್, ಮಾಸ್ ಲುಕ್ ಹಾಗೂ ಹೋಮ್ಲಿ ಬಾಯ್ ರೀತಿಯಲ್ಲಿ ಕಾಣಿಸಿಕೊಂಡಿರುವ ದರ್ಶನ್ ಮತ್ತೊಂದು ಸಿನಿ ಜರ್ನಿಯ ಇತಿಹಾಸ ಸೃಷ್ಠಿ ಮಾಡುತ್ತಾರೆ ಎನ್ನೋದು ಗ್ಯಾರಂಟಿಯಾಗಿದೆ.