ಕಿಚ್ಚ ಸುದೀಪ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್. ಸತತ ನಾಲ್ಕು ಸೀಸನ್’ಗಳಲ್ಲಿ ಸ್ಟೈಲಿಷ್ ಜೊತೆಗೆ ಜವಬ್ದಾರಿಯುತ ನಿರೂಪಣೆ ಮಾಡರೋ ಕಿಚ್ಚ, ಬಿಗ್ ಬಾಸ್ ಶೋಗೆ ಎಷ್ಟು ರೆಮ್ಯೂನಿರೇಷನ್ ಪಡೆಯುತ್ತಿದ್ದಾರೆ ಅನ್ನೋದು ಅವರ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಬೆಂಗಳೂರು (ಸೆ.27): ಕಿಚ್ಚ ಸುದೀಪ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್. ಸತತ ನಾಲ್ಕು ಸೀಸನ್’ಗಳಲ್ಲಿ ಸ್ಟೈಲಿಷ್ ಜೊತೆಗೆ ಜವಬ್ದಾರಿಯುತ ನಿರೂಪಣೆ ಮಾಡರೋ ಕಿಚ್ಚ, ಬಿಗ್ ಬಾಸ್ ಶೋಗೆ ಎಷ್ಟು ರೆಮ್ಯೂನಿರೇಷನ್ ಪಡೆಯುತ್ತಿದ್ದಾರೆ ಅನ್ನೋದು ಅವರ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಕಿಚ್ಚನಿಂದ ಬಿಗ್​ಬಾಸ್​ಗೆ ಬಂತು ಭಾರೀ ಬೇಡಿಕೆ!

ಕಿಚ್ಚ ಸುದೀಪ್ ನೇರ ನುಡಿ ಹಾಗು ಮ್ಯಾನರಿಸಂ ನೋಡಿದ್ದಾಗ, ಸಲ್ಮಾನ್ ಖಾನ್ ತರ ಸುದೀಪ್ ನಿರೂಪಣೆ ಮಾಡೋಲ್ಲ ಅಂತ ಸಿನಿಮಾ ಇಂಡಸ್ಟ್ರಿಯಲ್ಲಿ ಕೇಳಿ ಬಂದಿತ್ತು. ಆದ್ರೆ ಕಿಚ್ಚನ ಸ್ಟೈಲಿಷ್ ನಿರೂಪಣೆ, ಸ್ಪರ್ಧಿಗಳ ಜೊತೆ ಮಾಡುವ ತರ್ಲೆ ತಮಾಷೆ ಹಾಗೂ ವಾರ್ನಿಂಗ್ , ಸಮಯೋಚಿತ ಮಾತು ಎಮೋಷನಲ್ ಆಗೋದು ಎಲ್ಲವೂ ಕನ್ನಡದ ಬಿಗ್​ಬಾಸ್​ನ ಬಿಗ್ ಸಕ್ಸಸ್​ಗೆ ಕಾರಣ. ಕಿಚ್ಚನ ಈ ಬಿಗ್ ಬಾ್ಸ ನಿರೂಪಣೆಗೆ ಒಟ್ಟು ಎಷ್ಟು ಸಂಭಾವನೆ ಗೊತ್ತಾ? ಮಾರ್ಕೆಟಿಂಗ್ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 20 ಕೋಟಿ ಸಂಭಾವನೆ ಪಡೆದಿದ್ದಾರೆ. ಮುಂದಿನ ಐದೂ ಸೀಸನ್‌ಗಳನ್ನೂ ಸುದೀಪ್ ನಡೆಸಿಕೊಡುವ ಹಿನ್ನಲೆಯಲ್ಲಿ ಕಿಚ್ಚ 20 ಕೋಟಿ ರೂಪಾಯಿ ರೆಮ್ಯೂನರೇಷನ್ ಪಡೆದಿದ್ದಾರೆ. ಐದು ಸೀಸನ್ ಮುಗಿದ ಮೇಲೆ ಕಿಚ್ಚನ ಸಂಭಾವನೆ ಕೂಡ ಹೆಚ್ಚಾಗೋದು ಗ್ಯಾರಂಟಿ!