ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷ ಆಂದರೆ ಮುಂಗಡ ಬುಕಿಂಗ್ ಮೂಲಕ ಟಾಕ್ಸಿಕ್ ದಾಖಲೆ ಬರೆದಿದೆ. ಅಡ್ವಾನ್ಸ್ ಬುಕಿಂಗ್ ಮೂಲಕ ಟಾಕ್ಸಿಕ್ ಗಳಿಸಿದ್ದೆಷ್ಟು? ಇಲ್ಲಿದೆ ಸಂಪೂರ್ಣ ಡೀಟೇಲ್ಸ್

ಬೆಂಗಳೂರು (ಆ.22) ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ತೀವ್ರ ಕುತೂಹಲ ಕೆರಳಿಸುತ್ತಿದೆ. ಆಗಸ್ಟ್ 26ರಂದು ಟಾಕ್ಸಿಕ್ ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಸೇರಿದಂತೆ ಭಾರತೀಯ ಭಾಷೆ, ಹಾಲಿವುಡ್‌ನಲ್ಲೂ ಟ್ರೇಲರ್ ಬಿಡುಗಡೆಯಾಗಿದೆ. ಟಾಕ್ಸಿಕ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬಿಡುಗಡೆಗೂ ಮೊದಲೇ ಯಶ್ ಟಾಕ್ಸಿಕ್ ಸಿನಿಮಾ ದಾಖಲೆ ಬರೆದಿದೆ. 2.6 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಅಡ್ವಾನ್ಸ್ ಬುಕಿಂಗ್ ಮೂಲಕ ಭರ್ಜರಿ ಆದಾಯಗಳಿಸಿದೆ.

ಮೊದಲ ಸ್ಥಾನದಲ್ಲಿ ಕರ್ನಾಟಕ

ಸ್ಯಾಕ್‌ನಿಲ್ಕ್ ವರದಿ ಪ್ರಕಾರ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಮುಂಗಡ ಬುಕಿಂಗ್ ಮೂಲಕ 19.44 ಕೋಟಿ ರೂಪಾಯಿ ಗಳಿಸಿದೆ. ಭಾಷೆಗಳ ಪೈಕಿ ಕರ್ನಾಟಕವೇ ಮುಂಗಡ ಬುಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಕನ್ನಡ ಆವೃತ್ತಿಯಿಂದ ಮುಂಗಡ ಬುಕಿಂಗ್ ಮೂಲಕ 7.22 ಕೋಟಿ ರೂಪಾಯಿ ಗಳಿಸಿದೆ.ಇನ್ನು ಹಿಂದಿಯಲ್ಲಿ 3.86 ಕೋಟಿ ರೂಪಾಯಿ ಗಳಿಸಿದೆ. ತಮಿಳು, ತೆಲೆಗು, ಮಲೆಯಾಳಂ ಸೇರಿದಂತೆ ಇತರ ಭಾಷೆಗಳಿಂದಲೂ ಕೋಟಿ ರೂಪಾಯಿ ಗಳಿಸಿದೆ. ಒಟ್ಟು 2.6 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಯಶ್ ಟಾಕ್ಸಿಕ್ ನೋಡಲು ಕನ್ನಡಿಗರು ತುದಿಗಾಲಲ್ಲಿ ನಿಂತಿದ್ದಾರೆ. ಗ್ಲೋಬಲ್ ಸಿನಿಮಾ ಮೂಲಕ ದಾಖಲೆ ಬರೆಯಲು ಸಜ್ಜಾಗಿರುವ ಯಶ್ ಈಗಾಗಲೇ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ.

ಸಿನಿಮಾ ಬಿಡುಗಡೆಗೆ ಕೆಲ ದಿನಗಳು ಮಾತ್ರ. ಕರ್ನಾಟಕದಲ್ಲಿ 1.6 ಲಕ್ಷ ಟಿಕೆಟ್ ಮಾರಾಟವಾಗಿದೆ. ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ ಮಟ್ಟದಲ್ಲಿ ಟಿಕೆಟ್ ಮಾರಾಟವಾಗುತ್ತಿದೆ. ಇನ್ನು ಮಹಾರಾಷ್ಟ್ರದಿಂದ ಬ್ಲಾಕ್ ಮಾಡಲಾದ ಸೀಟುಗಳ ಮೊತ್ತ 1.81 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದೆಹಲಿಯಲ್ಲಿ 1.19 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಟಾಕ್ಸಿಕ್ ಕುತೂಹಲ, ಎ ಪ್ರಮಾಣಪತ್ರ

ಈ ಸಿನಿಮಾದ ಆರಂಭದಲ್ಲೇ ಇದು ವಯಸ್ಕರಿಗಾಗಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇತ್ತೀಚೆಗೆ ಯಶ್ ಕೂಡ ಮಕ್ಕಳು ಸಿನಿಮಾ ನೋಡಬೇಡಿ, ಇದು ವಯಸ್ಕರಿಗಾಗಿ ಮಾಡಿದ ಸಿನಿಮಾ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಚಲನಚಿತ್ರ ಮಂಡಳಿ ಟಾಕ್ಸಿಕ್ ಸಿನಿಮಾಗೆ ಎ ಸರ್ಟಿಫಿಕೇಟ್ ನೀಡಿದೆ. ಇಂಗ್ಲೆಂಡ್‌ನಲ್ಲಿ BBFC ಟಾಕ್ಸಿಕ್ ಸಿನಿಮಾಗೆ 18 ರೇಟಿಂಗ್ ನೀಡಿದೆ. ಬ್ರಿಟಿಷ್ ಸಿನಿಮಾ ನಿಯಮಗಳಿಗೆ ಅನಗುಣವಾಗಿ ಈ ರೇಟಿಂಗ್ ನೀಡಲಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಅತೀ ದೊಡ್ಡ ತಾರಾಬಳಗವಿಗೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಶಿ,ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಸೇರಿದಂತೆ ಹಲವರಿದ್ದಾರೆ.