ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಯಶ್ ದಂಪತಿ | ಬೇಬಿ ಮೂನ್‌ಗೆಂದು ಮಾಲ್ಡೀವ್ಸ್‌ಗೆ ತೆರಳಿದ ರಾಧಿಕಾ ದಂಪತಿ | ಸಮುದ್ರ ತೀರದಲ್ಲಿ ಕೈ ಕೈ ಹಿಡಿದು ನಡೆದಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 

ಬೆಂಗಳೂರು (ಸೆ. 20): ಇತ್ತೀಚಿಗೆ ಬೇಬಿ ಮೂನ್ ಕಾನ್ಸೆಪ್ಟ್ ಟ್ರೆಂಡ್ ಆಗುತ್ತಿದೆ. ಗರ್ಭಿಣಿ ಮಹಿಳೆಯರು ತಮ್ಮ ಪತಿಯೊಂದಿಗೆ ತಮಗಿಷ್ಟವಾದ ಜಾಗಕ್ಕೆ ತೆರಳಿ ಎಂಜಾಯ್ ಮಾಡಿ ಬರುತ್ತಾರೆ. ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಈ ಕಾನ್ಸೆಪ್ಟ್ ಹೆಚ್ಚಾಗುತ್ತಿದೆ. 

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಾಧಿಕಾ ಪಂಡಿತ್ ದಂಪತಿ ಬೇಬಿ ಮೂನ್ ಗೆಂದು ಮಾಲ್ಡೀವ್ಸ್ ಗೆ ತೆರಳಿದೆ. ಪತಿ ಯಶ್ ಕೈ ಹಿಡಿದು ಸಮುದ್ರ ತೀರದಲ್ಲಿ ಹೆಜ್ಜೆ ಹಾಕುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವನು, ನಾನು, ಸಮುದ್ರ ಮತ್ತು ನಾವು ಮೂವರು ಎಂದು ಬರೆದುಕೊಂಡಿದ್ದಾರೆ. 

View post on Instagram