ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾವನ್ನು ಮೊದಲು ಕಾಲಿವುಡ್ ನಟ ಸೂರ್ಯ ಅವರು ರಿಜೆಕ್ಟ್ ಮಾಡಿದ್ದರು ಎಂಬ ಸುದ್ದಿ ವೈರಲ್ ಆಗಿದೆ. ಸೂರ್ಯ ಅವರು ಚಿತ್ರವನ್ನು ನಿರಾಕರಿಸಲು ಬಲವಾದ ಕಾರಣ ಕೂಡ ಇದೆ.
ಕೆಜಿಎಫ್ ಸಿನಿಮಾ ಮೂಲಕ ಇಡೀ ವಿಶ್ವವೇ ಸ್ಯಾಂಡಲ್‌ವುಡ್ ಕಡೆಗೆ ತಿರುಗಿ ನೋಡುವಂತೆ ಮಾಡಿದವರು ರಾಕಿಂಗ್ ಸ್ಟಾರ್ ಯಶ್. ಇದೀಗ ಅವರ 'ಟಾಕ್ಸಿಕ್' (Toxic) ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಆದರೆ, ಈಗ ಈ ಚಿತ್ರಕ್ಕೆ ಸಂಬಂಧಿಸಿದ ಒಂದು ಅಚ್ಚರಿಯ ಸುದ್ದಿ ಗಾಂಧಿನಗರದಿಂದ ಹಿಡಿದು ಟಾಲಿವುಡ್, ಕಾಲಿವುಡ್ ವರೆಗೆ ಭಾರೀ ಚರ್ಚೆಗೆ ಕಾರಣವಾಗಿದೆ.
ಅದೇನಂದರೆ..'ಟಾಕ್ಸಿಕ್' ಸಿನಿಮಾದ ಕಥೆಯನ್ನು ಯಶ್ ಅವರಿಗಿಂತ ಮುಂಚಿತವಾಗಿ ಒಬ್ಬ ದಕ್ಷಿಣ ಭಾರತದ ಖ್ಯಾತ ಸೂಪರ್ ಸ್ಟಾರ್‌ಗೆ ಆಫರ್ ಮಾಡಲಾಗಿತ್ತಂತೆ. ಆದರೆ ಅವರು ಅದನ್ನು ರಿಜೆಕ್ಟ್ ಮಾಡಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.
ಯಶ್‌ಗಿಂತ ಮೊದಲು ಕಥೆ ಕೇಳಿದ್ದು ಯಾರು?
ನಿರ್ದೇಶಕಿ ಗೀತು ಮೋಹನ್ ದಾಸ್ ಅವರು 'ಟಾಕ್ಸಿಕ್' ಸಿನಿಮಾ ಕಥೆಯನ್ನು ಮೊದಲು ತಮಿಳಿನ ಖ್ಯಾತ ನಟ ಸೂರ್ಯ (Suriya) ಅವರಿಗೆ ಹೇಳಿದ್ದರಂತೆ. ಸೂರ್ಯ ಅವರಿಗೆ ಕಥೆ ಇಷ್ಟವಾಗಿತ್ತು. ಆದರೆ ಅವರು ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, 'ಟಾಕ್ಸಿಕ್' ಸಿನಿಮಾದಲ್ಲಿ ಅತ್ಯಂತ ಭೀಕರವಾದ ಆಕ್ಷನ್ ದೃಶ್ಯಗಳು ಮತ್ತು ಮಿತಿ ಮೀರಿದ ಬೋಲ್ಡ್ ಸೀನ್‌ಗಳು (Bold Scenes) ಇವೆಯಂತೆ. ಸೂರ್ಯ ಅವರು ಹೆಚ್ಚಾಗಿ ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿನ ಅತಿಯಾದ ಬೋಲ್ಡ್ ಕಂಟೆಂಟ್ ಮತ್ತು ರಕ್ತಸಿಕ್ತ ಆಕ್ಷನ್ ಸೀಕ್ವೆನ್ಸ್‌ಗಳು ಅವರ ಇಮೇಜ್‌ಗೆ ಧಕ್ಕೆ ತರಬಹುದು ಎಂಬ ಆತಂಕದಿಂದ ಅವರು ಈ ಚಿತ್ರವನ್ನು ನಿರಾಕರಿಸಿದರು ಎನ್ನಲಾಗುತ್ತಿದೆ.
ಸೂರ್ಯಗೆ ಗೋಲ್ಡನ್ ಚಾನ್ಸ್ ಮಿಸ್?
ಸೂರ್ಯ ಅವರು ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ಮೇಲೆ ಆ ಕಥೆ ಯಶ್ ಅವರ ಕೈ ಸೇರಿತು. ಯಶ್ ಅವರು ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಸಿ ಈಗ ಅದನ್ನು Pan-World ಮಟ್ಟದಲ್ಲಿ ಸಿದ್ಧಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ಐವರು ಸ್ಟಾರ್ ನಾಯಕಿಯರು ನಟಿಸುತ್ತಿದ್ದಾರೆ. ಇಂತಹ ದೊಡ್ಡ ಚಿತ್ರವನ್ನು ನಿರಾಕರಿಸುವ ಮೂಲಕ ಸೂರ್ಯ ಅವರು ಒಂದು 'ಗೋಲ್ಡನ್ ಚಾನ್ಸ್' ಮಿಸ್ ಮಾಡಿಕೊಂಡರಾ? ಎಂಬ ಚರ್ಚೆ ಈಗ ಶುರುವಾಗಿದೆ.
ಯಶ್ ಅವರು ಟಾಕ್ಸಿಕ್‌ನಲ್ಲಿ ತಂದೆ-ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಭಾರೀ ಹೈಪ್ ಕ್ರಿಯೇಟ್ ಆಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು Monster Mind Creations ಅತ್ಯಂತ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರವು ಸೂರ್ಯ ಅವರಿಗೆ 'ಮಿಸ್' ಆಗಿದ್ದರೂ ಯಶ್ ಅವರಿಗೆ ಹೊಸ ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ ಎಂಬುದು ಅಭಿಮಾನಿಗಳ ಮಾತು.


