ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸುಪ್ರಿಂ ಕೋರ್ಟ್ ಸಿಬಿಐಗೆ ವಹಿಸಿದೆ. ಗುರುವಾರ ಮುಂಬೈಗೆ ಬಂದಿಳಿದ ಸಿಬಿಐ ತಂಡ ತನಿಖೆಯ ವೇಗ ಹೆಚ್ಚಿಸಲು 5 ವಿಶೇಷ ತಂಡ ರಚಿಸಿದೆ.

ಸಿಬಿಐ ಅಧಿಕಾರಿಗಳಿಗೆ ಕ್ವಾರೆಂಟೈನ್ ವಿನಾಯಿತಿ ನೀಡಲಾಗಿದೆ. ಈ ಹಿಂದೆ ಬಿಹಾರದಿಂದ ಸುಶಾಂತ್ ಸಾವಿನ ಪ್ರಕರಣ ತನಿಖೆಗೆ ಬಂದ ಐಪಿಎಸ್ ಅಧಿಕಾರಿಯನ್ನು ಮುಂಬೈ ಮಹಾನಗರ ಪಾಲಿಕೆ ಕ್ವಾರೆಂಟೈನ್ ಮಾಡಿದ್ದು ವಿವಾದ ಸೃಷ್ಟಿಯಾಗಿತ್ತು.

ಸುಶಾಂತ್ ಕೇಸ್ ಸಿಬಿಐಗೆ: ನಟಿ ರಿಯಾಳನ್ನು ಫಿಲ್ಮ್‌ನಿಂದ ಕೈಬಿಟ್ಟ ನಿರ್ದೇಶಕ

ಇದೀಗ ಸಿಬಿಐ ಅಧಿಕಾರಿಗಳಿಗೆ ಕ್ವಾರೆಂಟೈನ್ ವಿನಾಯಿತಿ ನೀಡಲಾಗಿದೆ. ಸಿಬಿಐ ಅಧಿಕಾರಿಗಳ ತಂಡ ರಚಿಸಿ, ಅವುಗಳಲ್ಲಿಯೂ ಉಪ ವಿಭಾಗ ಮಾಡಲಾಗಿದೆ. ಈ ಮೂಲಕ ಕೆಲಸವನ್ನು ಹಂಚಿ, ತನಿಖೆಯ ವೇಹ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಮೊದಲ ತಂಡ ಸಂಶಯಾಸ್ಪದರನ್ನು ವಿಚಾರಣೆ ನಡೆಸಲಿದ್ದು, ಎರಡನೇ ತಂಡ ಕೇಸ್‌ ಫೈಲ್‌ಗಳನ್ನು ಪರಿಶೀಲಿಸಲಿದೆ. ಮೂರನೇ ಹಾಗೂ ನಾಲ್ಕನೇ ತಂಡ ಎಲ್ಲ ಸಾಧ್ಯತೆಗಳನ್ನು ತನಿಖೆ ಮಾಡಿ ಪ್ರಕರಣವನ್ನು ರಿ ಕ್ರಿಯೇಟ್ ಮಾಡಿ ಫೊರೆನ್ಸಿಕ್‌ ಸುಳಿವುಗಳನ್ನು ತನಿಖೆ ಮಾಡಲಿದ್ದಾರೆ.