ಮುಂಬೈ (ಸೆ.27): ಬಾಲಿ​ವು​ಡ್‌​ನಲ್ಲಿ ಖಾನ್ ತ್ರಯರನ್ನು ಹಿಂದಿಕ್ಕಿ ಮುಂಚೂಣಿಯಲ್ಲಿರುವ ನಟ ಅಕ್ಷಯ್‌ ಕುಮಾರ್‌. ಇವರು ಮಾಡಿದ ಸಾಲು ಸಾಲು ಸಿನಿಮಾಗಳು ಬಾಕ್ಸಾಫಿಸ್ ನಲ್ಲಿ ಸದ್ದು ಮಾಡಿದೆ.

ಇದೀಗ ಅಂತದ್ದೇ ಸೂಪರ್ ಹಿಟ್ ಸಿನಿಮಾ ಮಾಡಬೇಕಂತ ಪ್ಲಾನ್ ಮಾಡ್ತಾ ಇದ್ದಾರಂತೆ ಅಕ್ಕಿ. ಯಾವಾಗಲೂ ಹೊಸ ಹೊಸ ಕಥಾ ಹಂದರ ಇಟ್ಟುಕೊಂಡು ಸಿನಿಮಾ ಮಾಡುವ ಇವರು ಇದೀಗ ಯಾವ ವಿಷಯ ಇಟ್ಟುಕೊಂಡು ಮಾಡುತ್ತಿದ್ದಾರೆ ಗೊತ್ತಾ?

ಅಕ್ಕಿಗೆ ಕ್ರೀಡೆ​ಯೆಂದರೆ ಪಂಚ​ಪ್ರಾಣ. ಖುದ್ದು ಮಾರ್ಷಿ​ಯಲ್‌ ಆರ್ಟ್ ಪ್ರವೀ​ಣ​ರಾ​ಗಿ​ರುವ ಅವರು, ಕಬಡ್ಡಿ ಕುರಿ​ತಂತೆ ಸಿನಿ​ಮಾ​ವೊಂದನ್ನು ಮಾಡುವ ಅಭಿ​ಲಾಷೆ ವ್ಯಕ್ತ​ಪ​ಡಿ​ಸಿ​ದ್ದಾರೆ. ಇದ​ಕ್ಕಾಗಿ ಸೂಕ್ತ ಕಥೆ​ಯೊಂದರ ಹುಡು​ಕಾಟ ನಡೆ​ಸಿ​ರು​ವು​ದಾಗಿ ಹೇಳಿ​ರುವ ಅವರು, ಉತ್ತಮ ಕಥೆ ಸಿಕ್ಕ ಕೂಡಲೇ ಸಂಬಂಧ​ಪಟ್ಟಎಲ್ಲಾ ಪೂರ್ವ ತಯಾ​ರಿ​ಗ​ಳೊಂದಿಗೆ ಸಿನಿಮಾ ಶುರು ಮಾಡು​ವು​ದಾಗಿ ಅವರು ಹೇಳಿ​ದ್ದಾರೆ. ಆ ಸಿನಿಮಾ ಬಾಕ್ಸಾಫಿಸ್ ನಲ್ಲಿ ಕಬಡ್ಡಿ...ಕಬಡ್ಡಿ ಅನ್ನುತ್ತಾ ಅನ್ನೋದು ಅಭಿಮಾನಿಗಳ ಕಾತರ.