ಸ್ಯಾಂಡಲ್’ವುಡ್’ಗೆ ಬರುತ್ತಿದ್ದಾರೆ ವಿವೇಕ್ ಒಬೆರಾಯ್

Vivek Oberoi to make Kannada debut with Shivarajkumar’s Rustum
Highlights

ಬಾಲಿವುಡ್ ನಟ ವಿವೇಕ್ ಒಬೆರಾಯ್ ಕನ್ನಡಕ್ಕೆ ಬರುತ್ತಿದ್ದಾರೆ. ಶಿವಣ್ಣ ಅಭಿನಯದ ರುಸ್ತುಮ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ಧಾರೆ. ಯಾವ ಪಾತ್ರ ಮಾಡ್ತಾ ಇದ್ದಾರೆ? ಏನ್ ವಿಶೇಷ ಎಂಬುದೆಲ್ಲಾ ಇನ್ನೂ ರಿವೀಲಾಗಿಲ್ಲ. 

ಬೆಂಗಳೂರು (ಜು. 14): ಖ್ಯಾತ ಸ್ಟಂಟ್ ಮಾಸ್ಟರ್ ರವಿ ವರ್ಮ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಸದ್ಯ ರುಸ್ತುಮ್ ಚಿತ್ರ ಶೂಟಿಂಗ್’ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಲೀಡಿಂಗ್ ರೋಲ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ರವಿ ವರ್ಮ ಸರ್’ಪ್ರೈಸ್’ವೊಂದನ್ನು ಹೊರಹಾಕಿದ್ದಾರೆ. 

ಬಾಲಿವುಡ್ ಸ್ಟಾರ್ ವಿವೇಕ್ ಓಬೆರಾಯ್ ಸ್ಯಾಂಡಲ್’ವುಡ್’ಗೆ ಬರುತ್ತಿದ್ದಾರೆ. ಈಗಾಗಲೇ ಸೌತ್ ಇಂಡಿಯನ್ ಭಾಷೆಯಲ್ಲಿ ವಿವೇಕ್ ಒಬೆರಾಯ್ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ತಮಿಳಿನಲ್ಲಿ ಕಾಣಿಸಿಕೊಂಡಿದ್ದರು. ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ರವಿವರ್ಮ. 

ರುಸ್ತುಮ್ ಚಿತ್ರದಲ್ಲಿ ವಿವೇಕ್ ಓಬೆರಾಯ್ ಪಾತ್ರದ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಶಿವಣ್ಣ-ವಿವೇಕ್ ಕಾಂಬಿನೇಶನ್ ಕುತೂಹಲ ಮೂಡಿಸಿದೆ.  

loader