ಅಂತೂ ಇಂತೂ ವಿವಾದಗಳಿಂದ ಹೊರಬಂದು ಒಮಂಗ್ ಕುಮಾರ್ ಅವರ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಮೇ 24 ರಂದು ರಿಲೀಸ್ ಆಗಿದೆ. 

ಬಿಡುಗಡೆಯಾದ ಎರಡು ದಿನದಲ್ಲಿ ’ಪಿಎಂ ಮೋದಿ’ ಮಾಡಿದ ಗಳಿಕೆ ಬರೋಬ್ಬರಿ 6.64 ಕೋಟಿ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅಭೂತಪೂರ್ವ ಗೆಲುವು ಸಾಧಿಸಿದ್ದರಿಂದ ಈ ಸಿನಿಮಾ ಕಡೆ ಜನರಿಗೆ ಕುತೂಹಲ ಹೆಚ್ಚಾಗಿದೆ. ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 

ರಶ್ಮಿಕಾ ಮಂದಣ್ಣ ಸಕ್ಸಸ್ ಏರುತ್ತಿದ್ದಂತೆ ಸಂಭಾವನೆಯೂ ಏರುತ್ತಿದೆ!

ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಅಮಿತ್ ಶಾ ಪಾತ್ರದಲ್ಲಿ ಮನೋಜ್ ಜೋಷಿ, ಮೋದಿ ತಂದೆಯಾಗಿ ರಾಜೇಂದ್ರ ಗುಪ್ತಾ, ಝರೀನಾ ವಾಹಬ್ ಮೋದಿ ತಾಯಿಯಾಗಿ, ಬಿಷತ್ ಸೇನ್ ಗುಪ್ತಾ ಮೋದಿ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಮೋದಿ ಬಾಲ್ಯದಿಂದ ಹಿಡಿದು ಪ್ರಧಾನಿಯಾದವರೆಗಿನ ಜೀವನವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದೆ ಈ ಸಿನಿಮಾ.