‘ಫಿಲಂ ಚೇಂಬರ್ ಕಡೆಯಿಂದ ನಮಗೆ ಯಾವುದೇ ರೀತಿಯ ಬೆಂಬಲ ಇಲ್ಲ. ನಾವು ತಮಿಳುನಾಡಿನಲ್ಲಿ ಇದ್ದೇವಾ ಅಥವಾ ಕರ್ನಾಟಕದಲ್ಲಿ ಇರೋದಾ ಎಂಬ ಪ್ರಶ್ನೆ ಮನಸ್ಸಿಗೆ ಬರುತ್ತಿದೆ. ಅಭಿಮಾನ್ ಸ್ಟುಡಿಯೋದಲ್ಲಿಯೇ ನಮಗೆ ಸಮಾಧಿ ಬೇಕು’ ಎಂದು ಹೇಳುತ್ತಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರು ನಟ ಡಾ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮ ಮಾಡಿರೋ ವಿಷಯ ಬಹುತೇಕರಿಗೆ ಗೊತ್ತಿದೆ. ಈ ಕೃತ್ಯದ ವಿರುದ್ಧ ವಿಷ್ಣುವರ್ಧನ್ ಅಭಿಮಾನಿಗಳು ಸಾಕಷ್ಟು ನೊಂದಿದ್ದು, ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೆಂಗೇರಿ ಪೊಲೀಸ್ ಸ್ಟೇಷನ್‌ನಲ್ಲಿ 'ವಿಷ್ಣು ಸೇನಾ ಸಮಿತಿ' ದೂರು ಸಹ ದಾಖಲಿಸಿದೆ. ಇದೀಗ 'ಫಿಲಂ ಚೇಂಬರ್'ಗೆ ಆಗಮಿಸಿರುವ ವಿಷ್ಣು ಅಭಿಮಾನಿಗಳು 'ರಾಜ್ಯ ಸರ್ಕಾರ'ಕ್ಕೆ ಧಿಕ್ಕಾರ ಕೂಗುತ್ತಿದ್ದಾರೆ.
ಈ ಬಗ್ಗೆ ಮಾತನ್ನಾಡಿರುವ ನಟ ವಿಷ್ಣುವರ್ಧನ್ ಅಭಿಮಾನಿಗಳು 'ಫಿಲಂ ಚೇಂಬರ್ ಕಡೆಯಿಂದ ನಮಗೆ ಯಾವುದೇ ರೀತಿಯ ಬೆಂಬಲ ಇಲ್ಲ. ನಾವು ತಮಿಳುನಾಡಿನಲ್ಲಿ ಇದ್ದೇವಾ ಅಥವಾ ಕರ್ನಾಟಕದಲ್ಲಿ ಇರೋದಾ ಎಂಬ ಪ್ರಶ್ನೆ ಮನಸ್ಸಿಗೆ ಬರುತ್ತಿದೆ. ಅಭಿಮಾನ್ ಸ್ಟುಡಿಯೋದಲ್ಲಿಯೇ ನಮಗೆ ಸಮಾಧಿ ಬೇಕು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ಫಿಲಂ ಚೇಂಬರ್ ನಮಗೆ ಸಪೋರ್ಟ್ ಮಾಡಬೇಕು' ಎನ್ನುತ್ತಿದ್ದಾರೆ.
ಅಭಿಮಾನ್ ಸ್ಟೂಡಿಯೋ ಜಾಗದಲ್ಲಿ ಇದ್ದ ಕನ್ನಡದ ಮೇರುನಟ ವಿಷ್ಣುವರ್ಧನ್ (Vishnuvardhan) ಅವರ ಸಮಾಧಿಯನ್ನು ನೆಲಸಮ ಮಾಡಿದ್ದು ಬಹುತೇಕರಿಗೆ ಗೊತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್, ವಿಜಯರಾಘವೇಂದ್ರ, ವಸಿಷ್ಠ ಸಿಂಹ ಸೇರಿದಂತೆ ಕೆಲವು ನಟರು ಹಾಗೂ ನಟಿಯರಾದ ಸುಧಾರಾಣಿ, ಶ್ರುತಿ ಬೇಸರ ವ್ಯಕ್ತಪಡಿಸಿದ್ದಾರೆ. ನಟ ವಿಷ್ಣು ಅಭಿಮಾನಿಗಳಂತೂ ಈ ಬಗ್ಗೆ ಸಂಕಟ ಅನುಭವಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದೀಗ ನಟ, ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಕೂಡ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಹಾಗಿದ್ರೆ ಅವರೇನು ಹೇಳಿದ್ದಾರೆ?
ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು, ಸಾಮಾಜಿಕ ಜಾಲತಾಣದಲ್ಲಿ ಬಸವಣ್ಣವರ ವಚನದ ಸಾಲಿನ ಮೂಲಕ 'ವಿಷ್ಣು ಅಮರರು' ಎಂದಿದ್ದಾರೆ. "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ". 'ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ' ಎಂದು ನಟ ಉಪೇಂದ್ರ ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ನಟ ವಿಷ್ಣುವರ್ಧನ್ ಸಮಾಧಿ ತೆರವಿಗೆ ಬೇಸರವನ್ನು ಹೊರಹಾಕಿದ್ದಾರೆ.
ಮೊನ್ನೆ (08 August 2025) ಬೆಳಗಿನ ಜಾವ ಮೂರು ಗಂಟೆಗೆ ಬಾಲಣ್ಣ ಕುಟುಂಬ ಸಮಾಧಿ ತೆರವು ಕಾರ್ಯಾಚರಣೆ ಮಾಡಿದೆ. ಇದನ್ನು ಯಾರಿಗೂ ತಿಳಿಯದ ಹಾಗೆ ಮಾಡಲಾಗಿದೆ. ಕಾರಣ, ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೊತ್ತಾದರೆ ದೊಡ್ಡ ಸಮಸ್ಯೆ ಆಗುತ್ತೆ ಎಂದು ರಾತ್ರೋ ರಾತ್ರಿ ಸಮಾಧಿ ತೆರವು ಮಾಡಲಾಗಿದೆ ಎನ್ನಲಾಗಿದೆ. ಈಗ ಅಲ್ಲಿರುವ ಅಭಿಮಾನಿಗಳಿಗೆ ಪೊಲೀಸರು ಯಾವುದೇ ಗಲಾಟೆ ಮಾಡದಂತೆ ಹೊರಹೋಗಲು ಸೂಚಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ವಿಷ್ಣುವರ್ಧನ್ ಅಭಿಮಾನಿ ಕ್ರಾಂತಿ ರಾಜು ಹೇಳಿಕೆ ನೀಡಿದ್ದಾರೆ. 'ಸಾರಾ ಗೋವಿಂದು ಅವ್ರ ನೇತೃತ್ವದಲ್ಲೇ ವಿಷ್ಣು ಸಮಾಧಿ ಮರು ನಿರ್ಮಾಣ ಆಗಬೇಕು. ರಾಜಕುಮಾರ್ ಹಾಗೆ ವಿಷ್ಣು ವರ್ಧನ್ ಕೂಡ ಕರ್ನಾಟಕ್ಕೆ ಕೊಡುಗೆ ಕೊಟ್ಟಿದ್ದಾರೆ. ಮಾಡಿ ದ್ವಾಂಸ ಮಾಡೋದು ಅಂದ್ರೆ ಅಷ್ಟು ಸುಲಭನಾ..?
ಸಾಹಸ ಸಿಂಹನಿಗಾಗಿ ಅಭಿಮಾನ್ ಸ್ಟುಡಿಯೋ ಜಾಗ ಉಳಿಸಿ ಕೊಡಿ. ಫಿಲ್ಮ್ ಚೇಂಬರ್ ಮೂಲಕ ಸಿಎಂಗೆ ಮನವಿ ಸಲ್ಲಿಸುವಂತೆ ಮನವಿ ಮಾಡುತಿದ್ದೇವೆ. ಸರ್ಕಾರ ಇದನ್ನ ಉಳಿಸಿಕೊಡಬೇಕು. ಒಬ್ಬ ಮೇರು ನಟನಿಗೆ ಅವಮಾನ ಮಾಡಿದ್ದಾರೆ. ಸುದೀಪ್ ಗೆ ಬಿಟ್ರೆ ಯಾರಿಗೂ ಕೃತಜ್ಞತೆ ಇಲ್ಲ. ತಪ್ಪು ಮಾಡಿದವರು ಮಾಡಿರೋ ತಪ್ಪನ್ನ ಸರಿ ಪಡಿಸಿಕೊಂಡು ಕ್ಷಮೆ ಕೇಳಿ. ಒಬ್ಬ ನಟನಿಗಾಗಿ 10 ಗುಂಟೆ ಜಗ ಕೊಡೋದಕ್ಕೆ ಆಗಲ್ವಾ' ಎಂದು ಗರಂ ಆಗಿ ಹೇಳಿಕೆ ನೀಡಿದ್ದಾರೆ.
