ವಿಷ್ಣು ಅಭಿಮಾನಿಗಳು ಸಿಡಿದೆದ್ದಿದ್ದು, ಮೌನ ಮುರಿದಿದ್ದಾರೆ. ಫ್ಯಾನ್ಸ್ ಮಾತ್ರವಲ್ಲ, ನಟರಾದ ಕಿಚ್ಚ ಸುದೀಪ್, ವಿಜಯ ರಾಘವೇಂದ್ರ, ನಟಿಯರಾದ ಸುಧಾರಾಣಿ, ಶ್ರುತಿ ಹಾಗೂ ನಿರ್ದೇಶಕ ರವಿ ಶ್ರೀವತ್ಸ ಸೇರಿದಂತೆ, ಹಲವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡದ ಮೇರು ನಟ ಡಾ ವಿಷ್ಣುವರ್ಧನ್ (Vishnuvardhan) ಅವರ ಸಮಾಧಿ ನೆಲಸಮ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತಿದೆ. ಕೆಂಗೇರಿ ಬಳಿಯ ಅಭಿಮಾನ್ ಸ್ಟೂಡಿಯೋದಲ್ಲಿ ಮಾಡಲಾಗಿದ್ದ ನಟ ವಿಷ್ಣುವರ್ಧನ್ ಸ್ಮಾರಕವನ್ನು ನಿನ್ನೆ ಬೆಳಗಿನ ಜಾವ 3 ಗಂಟೆಗೆ ತೆರವು ಮಾಡಲಾಗಿದೆ. ಈ ಮೂಲಕ, ಕರ್ನಾಟಕದ ರಾಜಧಾನಿಯಲ್ಲಿ ಇರುವ ನಟ ವಿಷ್ಣುವರ್ಧನ್ ಅವರ ಏಕೈಕ ನೆನಪಿನ ಸ್ಥಳವನ್ನೂ ಕೂಡ ಅಭಿಮಾನಿಗಳಿಂದ ಕಿತ್ತುಕೊಳ್ಳಲಾಗಿದೆ. ಇದೀಗ ಅಭಿಮಾನಿಗಳು ಈ ಬಗ್ಗೆ ಬೇಸರಗೊಂಡಿದ್ದು, ವಿಷ್ಣು ಸ್ಮಾರಕವನ್ನು ಮರಳಿ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ.

ಇದೀಗ, ವಿಷ್ಣು ಅಭಿಮಾನಿಗಳು ಸಿಡಿದೆದ್ದಿದ್ದು, ಮೌನ ಮುರಿದಿದ್ದಾರೆ. ಫ್ಯಾನ್ಸ್ ಮಾತ್ರವಲ್ಲ, ನಟರಾದ ಕಿಚ್ಚ ಸುದೀಪ್, ವಿಜಯ ರಾಘವೇಂದ್ರ, ನಟಿಯರಾದ ಸುಧಾರಾಣಿ, ಶ್ರುತಿ ಹಾಗೂ ನಿರ್ದೇಶಕ ರವಿ ಶ್ರೀವತ್ಸ ಸೇರಿದಂತೆ, ಹಲವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಒಬ್ಬರು ಮೇರುನಟರಿಗೆ ರಾಜಧಾನಿ ಬೆಂಗಳೂರನಲ್ಲಿ ಅಭಿಮಾನಿಗಳು ಪೂಜೆ ಮಾಡೋದಕ್ಕೆ ಒಂದು ಜಾಗವಿಲ್ಲ ಎಂಬುದು ನಿಜವಾಗಿಯೂ ನೋವಿನ ಸಂಗತಿ ಎಂದು ಹಲವು ಕಲಾವಿದರೂ ಸೇರಿದಂತೆ, ಬಹಳಷ್ಟು ಸಿನಿಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

ಇದೀಗ ವಿಷ್ಣು ಸೇನಾ ಅಭಿಮಾನಿ ಬಳಗ ಕೂಡ ಈ ಬಗ್ಗೆ ನೋವು ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಈ ಬಗ್ಗೆ ಸ್ಥಳೀಯ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೂಡ ದಾಖಲಿಸಿದ್ದಾರೆ. ವಿಷ್ಣು ಸೇನಾ ಸಮಿತಿಯಿಂದ 'ಕೆಂಗೇರಿ ಸ್ಟೇಶನ್'ಗೆ ದೂರು ನೀಡಲಾಗಿದೆ. ಅಭಿಮಾನ್ ಸ್ಟುಡಿಯೋದಲ್ಲಿನ ಅಸ್ತಿ ನಮಗೆ ನೀಡಿ ಅಂತ ಸ್ಟೇಶನ್ ಗೆ ದೂರು ಕೊಟ್ಟಿದ್ದಾರೆ. ಮುಂದೇನು ಕಾರ್ಯಕ್ರಮಗಳು, ಕಾನೂನು ಪ್ರಕ್ರಿಯೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ.

ವಿಷ್ಣು ಅಭಿಮಾನಿಗಳ ಕನಸು ನನಸಾಗಿಲ್ಲ. ಅಭಿಮಾನ್ ಸ್ಟುಡಿಯೋದಲ್ಲಿ (Abhiman Studio) ಚಿಕ್ಕದಾಗಿ ಕಟ್ಟಿದ್ದ ದಿವಂಗತ ಮೇರನಟ ವಿಷ್ಣುವರ್ಧನ್ ಸಮಾಧಿಯನ್ನು ಇಂದು ಬೆಳಗಿನ ಜಾವ ನೆಲಸಮ ಮಾಡಲಾಗಿದೆ. ಈ ಮೂಲಕ ಅಲ್ಲಿ ವಿಷ್ಣುವರ್ಧನ್ ಸಮಾಧಿಯನ್ನು ಅದ್ದೂರಿಯಾಗಿ ಕಟ್ಟಿ ವೈಭವದಿಂದ ಉದ್ಘಾಟನೆ ಮಾಡುವ ನಟ ವಿಷ್ಣುವರ್ಧನ್ ಅಭಿಮಾನಿಗಳ ಕನಸು ನುಚ್ಚುನೂರಾಗಿದೆ. ಇಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎಂಬ ಚರ್ಚೆ ಇಲ್ಲ, ಬದಲಿಗೆ ಹೀಗೇಕಾಯ್ತು ಎಂಬ ಪ್ರಶ್ನೆ ಅಷ್ಟೇ! ಉತ್ತರ ಸಿಗಬಹುದೇ?

ಹೌದು, ಡಾ ರಾಜ್‌ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಷ್ ಹಾಗೂ ಶಂಕರ್‌ ನಾಗ್ ಅವರನ್ನು ಕನ್ನಡ ಚಿತ್ರರಂಗದ ಮೇರ ನಟರು ಎಂದು ಕರೆಯಲಾಗುತ್ತದೆ. ಕಂಠೀರವ ಸ್ಟುಡಿಯೋ ಬಳಿ ಡಾ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಅಂಬರೀಷ್ ಅವರುಗಳ ಸಮಾಧಿ ಇದೆ. ಆದರೆ, ನಟ ವಿಷ್ಣುವರ್ಧನ್ ಸಮಾಧಿ ಅಲ್ಲಿಲ್ಲ. ಅದಕ್ಕೆ ಕಾರಣ ಏನು? ಯಾರಿಂದ ಅಲ್ಲಿ ಸಮಾಧಿ ನಿರ್ಮಿಸಲು ಸಾಧ್ಯವಾಗಿಲ್ಲ? ಈ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಮತ್ತೆ ಬರೀ ಪ್ರಶ್ನೆಗಳೇ ಏಳುತ್ತವೆ!