ಫೈಟರ್ ಚಿತ್ರದ ನಂತರ ರಗಡಾಗಿ ತೆರೆ ಮೇಲೆ ಬರಲಿದ್ದಾರೆ ವಿನೋದ್
ವಿನೋದ್ ಪ್ರಭಾಕರ್ ‘ರಗಡ್’,‘ಶ್ಯಾಡೋ’ ಹಾಗೂ ಫೈಟರ್ ಚಿತ್ರಗಳ ನಂತರ ಮತ್ತೆ ಎರಡು ಚಿತ್ರಗಳಿಗೆ ಆಯ್ಕೆಯಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಪೈಕಿ ಒಂದು ಸಿನಿಮಾಕ್ಕೆ ಗಿರಿಗಿಟ್ಲೆ ರವಿಕಿರಣ್ ನಿರ್ದೇಶನ. ಮತ್ತೊಂದು ಸಿನಿಮಾ ಕೂಡ ಡಿಸೆಂಬರ್‌ನಲ್ಲಿ ಫೈನಲ್ ಆಗಿ, ಜನವರಿಗೆ ಸೆಟ್ಟೇರಲಿದೆ. ‘ಸಾಕಷ್ಟು ಕಾಲ ಕಷ್ಟಪಟ್ಟ ಫಲವೋ ಏನೋ ಒಂದಾದ ಮೇಲೊಂದು ಅವಕಾಶಗಳು ಬರುತ್ತಿವೆ. ಮೂರು ಚಿತ್ರಗಳ ಚಿತ್ರೀಕರಣ ಮುಗಿದಿದೆ. ಬಿಡುಗಡೆ ಎದುರು ನೋಡುತ್ತಿದ್ದೇನೆ. ಹೊಸ ಸಿನಿಮಾಗಳ ಕತೆ ಕೇಳುತ್ತಿದ್ದೇನೆ. ಈ ಪೈಕಿ ೨ ಕತೆಗಳು ಫೈನಲ್ ಆಗಿವೆ’ ಎನ್ನುತ್ತಾರೆ ವಿನೋದ್ ಪ್ರಭಾಕರ್.
