ದಳಪತಿ ವಿಜಯ್.. ಈ ಹೆಸ್ರು ಇವತ್ತು ವಿಶ್ವವ್ಯಾಪಿ ಹಬ್ಬಿದೆ. ಯಶ್ ಮತ್ತು ಅಲ್ಲು ಅರ್ಜುನ್ ಸಿನಿಮಾದಿಂದ ನ್ಯಾಷನಲ್ ಸ್ಟಾರ್ಸ್ ಆದ್ರೆ, ದಳಪತಿ ವಿಜಯ್ ರಾಜಕಾರಣಿ ಆಗಿ ಫೇಮಸ್ ಆಗಿದ್ದಾರೆ. ಅದರ ಹಿಂದಿನ ಶಕ್ತಿ ಯಾರು?
ದಳಪತಿ ವಿಜಯ್.. ಈ ಹೆಸ್ರು ಇವತ್ತು ವಿಶ್ವವ್ಯಾಪಿ ಹಬ್ಬಿದೆ. ಯಶ್ ಮತ್ತು ಅಲ್ಲು ಅರ್ಜುನ್ ಸಿನಿಮಾದಿಂದ ನ್ಯಾಷನಲ್ ಸ್ಟಾರ್ಸ್ ಆದ್ರೆ, ದಳಪತಿ ವಿಜಯ್ ರಾಜಕಾರಣಿ ಆಗಿ ಫೇಮಸ್ ಆಗಿದ್ದಾರೆ. ಅದರ ಹಿಂದಿನ ಶಕ್ತಿ ಯಾರು ಅಂತ ದುರ್ಬಿನ್ ಹಾಕಿ ಹುಡುಕಿದ್ರೆ ಕಣ್ಣಿಗೆ ಕಾಣೋದು ಗೆಳತಿ ನಟಿ ತ್ರಿಷಾ ಕೃಷ್ಣನ್.. ತಮಿಳುನಾಡು ರಾಜಕೀಯದಲ್ಲಿ ವಿಜಯ್ ಗೆಲುವು ದೊಡ್ಡ ಸಂಚನ ಸೃಷ್ಟಿಸಿದೆ. ಆಗ ಎಮ್ಜಿಆರ್ ಹಾಗು ಜಯಲಲಿತಾ.. ಈಗ ವಿಜಯ್ ಹಾಗು ತ್ರಿಷಾ ಅನ್ನೋ ಗಂಟ ಘೋಷ ಕೇಳಿಸುತ್ತಿದೆ. ವಿಜಯ್.. ತಮಿಳು ಚಿತ್ರರಂಗದ ದಳಪತಿ.. ಈಗ ತಮಿಳುನಾಡು ರಾಜಕಾರಣಕ್ಕೆ ಅಧಿಪತಿ.
34 ವರ್ಷದಿಂದ ಬಣ್ಣದ ಜಗತ್ತಿನಲ್ಲಿ ವಿಜೃಂಭಿಸುತ್ತಿರೋ ವಿಜಯ್ ಚಿತ್ರರಂಗದಲ್ಲಿ ಅಕ್ಷರಶ ದಂಡಯಾತ್ರೆಯನ್ನೇ ಮಾಡಿದ್ದಾರೆ. ದಳಪತಿ ವಿಜಯ್ ತಮಿಳು ಚಿತ್ರರಂಗದ ನಂಬರ್ ಒನ್ ಸ್ಟಾರ್ ಅಂತ ದ್ರಾವಿಡ ನಾಡಿನ ಜನ ಯಾಕೆ ಕರೀತಾ ಇದ್ರು ಅನ್ನೋದು ತಮಿಳುನಾಡಿ ಎಲೆಕ್ಷನ್ ರಿಸೆಲ್ಟ್ ಇವತ್ತು ಜಗತ್ ಜಾಹೀರಾತು ಮಾಡಿದೆ. ನಟ ವಿಜಯ್ ಚಿತ್ರರಂಗದಲ್ಲಿ ಬರೆದ ದಾಖಲೆಗಳು ಒಂದೆರಡಲ್ಲ.. ದೊಡ್ಡ ದೊಡ್ಡ ಸೂಪರ್ ಸ್ಟಾರ್ಗಳಿದ್ರೂ ವಿಜಯ್ ದಾಖಲೆಗಳನ್ನ ಅವರಿಂದ ಪುಡಿಗಟ್ಟಲಾಗಲಿಲ್ಲ.
ಅತಿ ಹೆಚ್ಚು ಸಂಭಾವೆ ಪಡೆ ನಟ ಅನ್ನೋ ಹೆಗ್ಗಳಿಕೆಯಿಂದ ಹಿಡಿದು ಅತಿ ಹೆಚ್ಚು ಕಲೆಕ್ಷನ್ ಮಾಡೋ ಸ್ಟಾರ್, ಅತಿ ಹೆಚ್ಚು ಫ್ಯಾನ್ಸ್ ಹೊಂದಿರೋ ನಟ ಅನ್ನೋ ಎಲ್ಲಾ ಗೌರವಗಳು ದಳಪತಿ ಹೆಸರಲ್ಲಿ ಜಳಪಿಸಿವೆ. ಈಗ ದ್ರಾವಿಡರ ನಾಡಿನಲ್ಲಿ ಇದೇ ಧಳಪತಿ ಮಿರ ಮಿರ ಅಂತ ಹೊಳೆಯುತ್ತಿದ್ದಾರೆ. ವಿಜಯ್ಗೆ ಈ ಭಾರಿಯ ತಮಿಳು ನಾಡು ವಿಧಾಸಭೆ ಎಲೆಕ್ಷನ್ನಲ್ಲಿ ನಿರೀಕ್ಷೆಗೆ ಮೂರಿದ ಗೆಲುವು ದಕ್ಕಿದೆ. ದಳಪತಿ ವಿಜಯ್ ಗೆಲುವು ಇಡೀ ತಮಿಳು ನಾಡು ಸಂಭ್ರಮಿಸುತ್ತಿದೆ. ತಮಿಳುನಾಡಿನಲ್ಲಿ ಭದ್ರ ಕೋಟೆ ಕಟ್ಟಿಕೊಂಡಿದ್ದ ಡಿಎಂಕೆ-ಅಣ್ಣಾ ಡಿಎಂಕೆಯನ್ನ ಧ್ವಂಸ ಮಾಡಿರೋ ದಳಪತಿಗೆ ಶುಭಾಷಯಗಳೇ ಹರಿದು ಬರುತ್ತಿವೆ.
ವಿಜಯ್ ಮನೆಯಲ್ಲಂತೂ ಸಂಭ್ರಮವೋ ಸಂಭ್ರಮ. ದಳಪತತಿ ವಿಜಯ್ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸಣ್ಣ ಸುಳಿವು ಕೂಡ ತಮಿಳು ಮಕ್ಕಳಿಗೆ ಇರಲಿಲ್ಲ. ಆದ್ರೆ ಆ ಆಸೆ ವಿಜಯ್ ಮನದಲ್ಲಿ ಎಂದಿನಿಂದಿತ್ತೋ ಗೊತ್ತಿಲ್ಲ. ಕಳೆದ 2024ರಲ್ಲಿ ತಾನು ರಾಜಕೀಯಕ್ಕೆ ಬರೋದಾಗಿ ಘೋಷಿಸಿದ್ರು. ಟಿವಿಕೆ ಪಕ್ಷ ಕಟ್ಟಿದ್ರು, ಸಿಂಗಲ್ ಶೇರ್ ರೀತಿ ಅಭಿಮಾನಿಗಳನ್ನೇ ಮತದಾರರನ್ನಾಗಿ ಸಂಘಟಿಸಿದ್ರು. ಈ ಸಂಘಟನೆ ಹೇಗಿತ್ತು ಅಂದ್ರೆ 70 ವರ್ಷದಿಂದ ತಮುಳುನಾಡನ್ನ ಆಳುತ್ತಾ ಬಂದಿದ್ದ ಕರುಣಾನಿಧಿಯ ಡಿಎಂಕೆ ಪಕ್ಷ ಹಾಗು ಎಮ್ಜಿಆರ್ ಮತ್ತು ಜಯಲಲಿತಾ ಹೊತ್ತು ಮರೆದಿದ್ದ ಅಣ್ಣಾ ಡಿಎಂಕೆ ಪಕ್ಷಕ್ಕೆ ಮಣ್ಣು ಮುಕ್ಕಿಸಿದ್ರು ವಿಜಯ್.
ಇವತ್ತು ದಳಪತಿ ವಿಜಯ್ ತಮಿಳುನಾಡನ್ನ ಗೆದ್ದಿದ್ದಾರೆ. ಈ ಗೆಲುವು ಹಿಸ್ಟರಿ ರಿಪೀಟ್ ಅನ್ನೋ ಮಾತನ್ನ ಹುಟ್ಟುಹಾಕಿದೆ. ಅದಕ್ಕೆ ಕಾರಣ ನಾಲ್ಕು ದಶಕದ ಹಿಂದೆ ಎಂಜಿಆರ್ ಅನ್ನೋ ದೊಡ್ಡ ನಟ ಮತ್ತು ದೊಡ್ಡ ರಾಜಕಾರಣಿ ಹಿಂದೆ ಸ್ಟಾರ್ ನಟಿ ಜಯಲಲಿತಾ ಹಿಂದೆ ಮುಂದೆ ಸುತ್ತಿದ್ದು, ಮತ್ತು ಇಂದು ತಮಿಳು ನಾಡನ್ನ ಗೆದ್ದಿರೋ ವಿಜಯ್ ಹಿಂದೆ ಮುಂದೆ ನಟಿ ತ್ರಿಷಾ ತಿರುಗಾಡುತ್ತಿರೋದು. ತಮಿಳುನಾಡು ರಾಜಕಾರಣವನ್ನ ಒಮ್ಮೆ ಹಿಂದೆ ತಿರುಗಿ ನೋಡಿದ್ರೆ ಕಣ್ಣಿಗೆ ಬೀಳೋದೇ ತಮಿಳಿಗರ ಅಮ್ಮ ಜಯಲಲಿತಾ.. ದ್ರಾವಿಡರ ನಾಡಿದ ಐರನ್ ಲೇಡಿ ಅಂತ ಕರೆಸಿಕೊಳ್ಳೋ ಜಯಲಲಿತಾ ತಮಿಳುನಾಡನ್ನ ಆಳೋಕೆ ಕಾರಣ ಆಗಿದ್ದು ಎಂಜಿಆರ್.
1977ನಲ್ಲಿ ಎಂಜಿಆರ್ ಮುಖ್ಯಮಂತ್ರಿ ಆಗಿದ್ರು.. ಮೂರು ಭಾರಿ ಸಿಎಂ ಆಗಿದ್ದ ಎಂಜಿಆರ್ ಆಪ್ತ ವಲಯದಲ್ಲಿ ಕಾಣಿಸಿಕೊಳ್ತಾ ಇದ್ರು ಜಯಲಲಿತಾ. 1982ರಲ್ಲಿ ಎಂಜಿಆರ್ ಸಿಎಂ ಆಗಿದ್ದಾಗ್ಲೆ ನಟಿ ಜಯಲಲಿಯಾ ಎಂ್ಜಿಆರ್ ಕಟ್ಟಿದ್ದ ಎಐಡಿಎಂಕೆ ಪಕ್ಷ ಸೇರಿಕೊಳ್ತಾರೆ. ಕೊನೆಗೆ 1984ರಲ್ಲಿ ಜಯಲಲಿತಾರನ್ನ ಎಮ್ಜಿಆರ್ ರಾಜ್ಯಸಭಾ ಸಧಸ್ಯೆಯನ್ನಾಗಿ ಮಾಡುತ್ತಾರೆ. 10 ವರ್ಷಗಳ ಕಾಲ ಅಂದ್ರೆ ತಮ್ಮ ನಿಧನದವರೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಎಂಜಿಆರ್ ಜೊತೆಗೆ ಏಕಾಂಗಿಯಾಗಿ ನಿಂತಿದ್ದು ಇದೇ ಜಯಲಲಿತಾ. ಎಂಜಿಆರ್ ನಿಧನ ಬಳಿಕ ಎಂಜಿಆರ್ ಕಟ್ಟಿದ್ದ ಎಐಡಿಎಂಕೆ ಪಕ್ಷದ ಸಾರಥಿ ಆಗಿದ್ದು ಪುದುಚ್ಚಿ ಜಯಲಲಿತಾ.
ಈಗ ನಟ ದಳಪತಿ ವಿಜಯ್ ಗೆದ್ದಿದ್ದಾರೆ. ವಿಜಯ್ ಜೊತೆ ಕಳೆದ ಎರಡು ವರ್ಷದಿಂದ ಹೆಚ್ಚು ಏಕಾಂಗಿಯಾಗಿ ಕಾಣಿಸಿಕೊಂಡಿದ್ದು ಇದೇ ನಟಿ ತ್ರಿಷಾ.. ಜಯಲಲಿತಾರ ಹಾಗೆ ಮುಂದೆ ತ್ರಿಷಾ ರಾಜ್ಯಸಭೆ ಸದಸ್ಯೆ ಆದ್ರೂ ಆಶ್ಚರ್ಯವಿಲ್ಲ. ವಿಜಯ್ ಕಟ್ಟಿರೋ ಕೆವಿಟಿ ಪಕ್ಷದಲ್ಲಿ ಒಂದು ಗಟ್ಟಿ ಸ್ಥಾನಮಾನ ತ್ರಿಷಾಗೆ ಬರೆದಿಟ್ಟಿದ್ರು ಇರಬಹದು. ನಟಿ ತ್ರಿಷಾ ಇವತ್ತು ವಿಜಯ್ ಗೆಲುವಿನ ಹಿಂದೆ ಇದ್ದಾರೆ ಅನ್ನೋ ಮಾತುಗಳು ತಮಿಳು ನಾಡಿನಲ್ಲಿ ಓಡಾಡುತ್ತಿವೆ. ಅದೇ ರೀತಿ ಎಮ್ಜಿಆರ್ ಹಿಂದೆಯೂ ಜಯಲಲಿತಾ ಇದ್ರು ಅನ್ನೋದು ಜಗತ್ತಿಗೇ ಗೊತ್ತು. ಆದ್ರೆ ಈಗ ಇಂಟ್ರೆಸ್ಟಿಂಗ್ ಅಂದ್ರೆ ಜಯಲಲಿತಾ ಹಾಗು ನಟಿ ತ್ರಿಷಾ ಮಧ್ಯೆ ಹಲವು ಸಾಮ್ಯತೆಗಳನ್ನ ಡಿಕೋಡ್ ಮಾಡಲಾಗ್ತಿದೆ.
ತಮಿಳು ಸ್ಟಾರ್ ನಟಿ
ನಟಿ ರಾಜಕಾರಣಿ ಜಯಲಲಿತಾ ಹಾಗು ತ್ರಿಷಾ ಮಧ್ಯೆ ಇರೋ ಸಾಮ್ಯತೆ ನೋಡೋದಾದ್ರೆ. ಜಯಲಲಿತಾ ಅಯ್ಯಂಗಾರಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ತ್ರಿಶಾ ಕೂಡ ಬ್ರಾಹ್ಮಣ ಕುಟುಂಬ.. ಜಯಲಲಿತಾ ಪ್ರಾಥಮಿಕ ಶಾಲೆ ಓದಿದ್ದು ಮದ್ರಾಸ್ನ ಚರ್ಚ್ ಪಾರ್ಕ್ ಸ್ಕೂಲ್ ನಲ್ಲಿ - ಅದೇ ಶಾಲೆಯಲ್ಲೇ ತ್ರಿಶಾ ಕೂಡ ವ್ಯಾಸಾಂಗ ಮಾಡಿದ್ದಾರೆ. ಜಯಲಲಿತಾ ಸ್ಟಾರ್ ನಟಿ ಆಗಿದ್ದವರು,, ತ್ರಿಷಾ ಕೂಡ ತಮಿಳು ಸ್ಟಾರ್ ನಟಿ ಆಗಿ ಮಿಂಚಿದ್ದಾರೆ. ಜಯಲಲಿತಾ ಕುಮಾರಿಯಾಗೇ ಹೋದ್ರು.. ತ್ರಿಷಾ ಕೂಡ ಇನ್ನೂ ಮದುವೆ ಆಗಿಲ್ಲ ಕುಮಾರಿ ಆಗೇ ಇದ್ದಾರೆ. ಜಯಲಲಿತಾಗೆ ಮಕ್ಕಳಿಲ್ಲ. ತ್ರಿಷಾಗೂ ಮಕ್ಕಳಿಲ್ಲ. ಜಯಲಲಿತಾ ಎಮ್ಜಿಆರ್ ಜೊತೆ ಸುತ್ತಾಡಿದ್ದಾರೆ. ತ್ರಿಷಾ ಈಗ ವಿಜಯ್ ಹಿಂದೆ ಓಡಾಡುತ್ತಿದ್ದಾರೆ. ಜಯಲಲಿತಾರನ್ನ ತಮಿಳು ಮಂದಿ ಅಮ್ಮ ಅಂತ ಕರೆಯುತ್ತಾರೆ. ಹಾಗೆ ನಟಿ ತ್ರಿಷಾಗೆ ಮಾಮಿ ಅಂತಾರೆ.


