ವಿದ್ಯಾ ಬಾಲನ್ ಯಾವಾಗಲೂ ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಳ್ಳುವವರಲ್ಲ. ವಿಭಿನ್ನವಾದ, ಸವಾಲೆನಿಸುವ ಪಾತ್ರಗಳಿಂದ ಪ್ರೇಕ್ಷಕರಿಗೆ ಆಪ್ತ ಎನಿಸುತ್ತಾರೆ. ಶಕುಂತಲಾ ದೇವಿ ಬಯೋಪಿಕ್ ನಲ್ಲಿ ನಟಿಸುತ್ತಿದ್ದು ಫಸ್ಟ್ ಲುಕ್ ರಿಲೀಸ್ ಆಗಿದೆ. 

ಹ್ಯೂಮನ್ ಕಂಪ್ಯೂಟರ್ ಎಂದೇ ಹೆಸರಾಗಿರುವ ಶಕುಂತಲಾ ದೇವಿ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ನಟಿ ವಿದ್ಯಾ ಬಾಲನ್ ಶಕುಂತಲಾ ದೇವಿ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಜೊತೆಗೆ ಟೀಸರನ್ನು ರಿಲೀಸ್ ಮಾಡಲಾಗಿದೆ. ಕೆಂಪು ಬಣ್ಣದ ಸೀರೆ ಉಟ್ಟಿದ್ದು ಬಾಬ್ ಕಟ್ ಮಾಡಿಸಿದ್ದಾರೆ. ಥೇಟ್ ಶಕುಂತಲಾ ದೇವಿಯಂತೆ ಕಾಣಿಸುತ್ತಾರೆ ವಿದ್ಯಾ ಬಾಲನ್. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನು ಮೆನನ್ ನಿರ್ದೇಶನ ಮಾಡುತ್ತಿದ್ದಾರೆ. 2020 ಕ್ಕೆ ತೆರೆ ಕಾಣುವ ಸಾಧ್ಯತೆ ಇದೆ. 

ಗಣಿತ ಶಾಸ್ತ್ರದ ಪರಿಣಿತೆ ಶಕುಂತಲಾ ದೇವಿ ಪಾತ್ರ ಮಾಡುತ್ತಿರುವುದು ಖುಷಿ ವಿಚಾರ. ಅವರ ಜೀವನ ಚರಿತ್ರೆಯನ್ನು ತೆರೆ ಮೇಲೆ ತರುತ್ತಿರುವುದು ಖುಷಿಯ ವಿಚಾರ. ಒಂದು ಪುಟ್ಟ ಹಳ್ಳಿಯಿಂದ ಬಂದ ಹೆಣ್ಣು ಮಗಳೊಬ್ಬಳು ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡಿದಳು ಎಂದು ವಿದ್ಯಾ ಬಾಲನ್ ಹೇಳಿಕೊಂಡಿದ್ದರು. 

Scroll to load tweet…

ಶಕುಂತಲಾ ದೇವಿ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದವರು. ಗಣಿತದಲ್ಲಿ ಅದೆಷ್ಟೇ ಕ್ಲಿಷ್ಟವಾದ ಸಮಸ್ಯೆ ಇರಲಿ ಫಟಾಫಟ್ ಎಂದು ಬಗೆಹರಿಸುತ್ತಿದ್ದರು. ಇವರ ನೆನಪಿನ ಶಕ್ತಿ ಅದ್ಭುತ. ಗಣಿತ ಶಾಸ್ತ್ರಜ್ಞೆ ಜೊತೆಗೆ ಇವರೊಬ್ಬ ಜ್ಯೋತಿಷ್ಯೆ, ಕಾದಂಬರಿಗಾರ್ತಿ, ಲೇಖಕಿ.