ಬಾಲಿವುಡ್ ಬಹುಬೇಡಿಕೆ ನಟಿ ವಿದ್ಯಾ ಬಾಲನ್ ಮಿಷನ್ ಮಂಗಲ್ ಸಕ್ಸಸ್ಸಿನ ಖುಷಿಯಲ್ಲಿದ್ದಾರೆ. ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ನಟಿ ಎಂದು ಹೆಸರು ಮಾಡಿದವರು. ಒಂದೇ ತೆರನಾದ ಇಮೇಜ್ ನಿಂದ ಹೊರಬಂದು ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಗಮನ ಸೆಳೆದ ನಟಿ. 

ಯಶಸ್ಸಿನ ಉತ್ತಂಗದಲ್ಲಿರುವ ಕಹಾನಿ ಗರ್ಲ್ ಮಿಷನ್ ಮಂಗಲ್ ಬಗ್ಗೆ ಖಾಸಗಿ ವಾಹಿನಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. 

ಅವಕಾಶಕ್ಕಾಗಿ ಮೂರು ವರ್ಷ ಅಲೆದಿದ್ದರು ‘ಕಹಾನಿ’ ನಟಿ!

ವಿದ್ಯಾ ಬಾಲನ್ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಾ, ‘ ಒಮ್ಮೆ ನಾನು ಚೆನ್ನೈನಲ್ಲಿ ಇರುವಾಗ ನನ್ನನ್ನು ಭೇಟಿ ಮಾಡಲು ನಿರ್ದೇಶಕರೊಬ್ಬರು ನನ್ನ ಬಳಿ ಬಂದಿದ್ದರು. ನಾನು ಕಾಫಿ ಶಾಪ್ ನಲ್ಲಿ ಕುಳಿತುಕೊಂಡು ಮಾತನಾಡೋಣ ಎಂದೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ರೂಮ್ ಗೆ ಹೋಗಿ ಮಾತನಾಡೋಣ ಎಂದರು. ಈ ಘಟನೆ ಈಗಲೂ ನನಗೆ ಕೊರೆಯುತ್ತದೆ' ಎಂದು ಹೇಳಿದ್ದಾರೆ. 

ಕೂಲ್ ಬೀಚ್‌ನಲ್ಲೂ ಹಾಟ್‌ ಆಗಿ ಕಾಣಿಸ್ತಿದ್ದಾರೆ ವಿದ್ಯಾ ಬಾಲನ್

ಮಿಷನ್ ಮಂಗಲ್ ಸಿನಿಮಾದಲ್ಲಿ ವಿದ್ಯಾ ಬಾಲನ್ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ, ನಿತ್ಯಾ ಮೆನನ್, ಕೀರ್ತಿ ಕುಲ್ಹಾರಿ, ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. 160 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಲಾಗಿದೆ.