ಆ.15 ರಂದು ವಿದ್ಯಾಬಾಲನ್‌ ಸೇರಿ ಬಹುತಾರಾಗಣದ ನಿರೀಕ್ಷೆಯ ಚಿತ್ರ ‘ಮಿಷನ್‌ ಮಂಗಲ್‌’ ಬಿಡುಗಡೆಗೆ ಸಿದ್ಧವಾಗಿದೆ. ಇಂತ ಹೊತ್ತಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ವಿದ್ಯಾಬಾಲನ್‌ ಕಣ್ಣೀರಿನ ಕತೆಯೊಂದನ್ನು ಹೇಳಿದ್ದಾರೆ. ಇದು ಅವರದ್ದೇ ಬದುಕಿನ ಮೂರು ವರ್ಷಗಳ ಕಣ್ಣೀರಿನ ಕತೆ. ಕೇಳಿ ಅವರ ಮಾತಲ್ಲಿಯೇ.

ತಂದೆ ತೀರಿಕೊಂಡಿದ್ದು ತಿಳಿದರೂ ಗಿಮಿಕ್‌ ಶೂಟಿಂಗ್‌ ಮುಗಿಸಿಕೊಟ್ಟ ಗಣೇಶ್‌

‘ನಾನು ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವಳಲ್ಲ. ನನಗೆ ಸಿನಿಮಾ ಎಂದರೆ ಏನು? ನಟಿಸಲು ಅವಕಾಶ ಪಡೆಯುವುದು ಹೇಗೆ? ಯಾರನ್ನು ಸಂಪರ್ಕಿಸಬೇಕು? ಎಲ್ಲಿಗೆ ಹೋಗಬೇಕು? ಎನ್ನುವ ಸಾಮಾನ್ಯ ಸಂಗತಿಗಳೂ ತಿಳಿದಿರಲಿಲ್ಲ.

ಒಂದು ಕಡೆ ಮನೆಯ ಜವಾಬ್ದಾರಿ, ಮತ್ತೊಂದು ಕಡೆ ಸಿನಿಮಾ ಪ್ರೀತಿ. ಇವೆರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತೇನೆ ಎನ್ನುವ ಧೈರ್ಯದೊಂದಿಗೆ ಬಣ್ಣದ ಲೋಕಕ್ಕೆ ಬಂದೆ. ಆದರೆ ನನ್ನ ಮೊದಲ ಮೂರು ವರ್ಷದ ಹಾದಿ ಕಣ್ಣೀರು ಮತ್ತು ಹೋರಾಟದ್ದೇ ಆಗಿತ್ತು. ಇಡೀ ದಿನ ಅವಕಾಶಕ್ಕಾಗಿ ಹುಡುಕಾಡುತ್ತಿದ್ದೆ.

‘ಪ್ರೇಮಲೋಕ’ ಕ್ಕೆ ಮಲ್ಲಿಕಾ ಎಂಬ ಮೋಹಕ ಚೆಲುವೆ ಎಂಟ್ರಿ!

ರಾತ್ರಿ ಮನೆಗೆ ಬಂದು ಕಣ್ಣೀರು ಹಾಕುತ್ತಾ ಮಲಗುತ್ತಿದ್ದೆ. ಮತ್ತೆ ಬೆಳಿಗ್ಗೆ ಕೆನ್ನೆಯ ಮೇಲಿದ್ದ ಕಣ್ಣೀರಿನ ಗೆರೆಗಳನ್ನು ಒರೆಸಿಕೊಂಡು ಹೊಸ ಉತ್ಸಾಹದೊಂದಿಗೆ ಮತ್ತೆ ಅವಕಾಶಗಳ ಬೇಟೆ ಶುರುವಾಗುತ್ತಿತ್ತು. ಬಹುಶಃ ಈ ಉತ್ಸಾಹವೇ ನನ್ನನ್ನು ಈ ಹಂತಕ್ಕೆ ತಂದಿದೆ ಎಂದರೆ ಸುಳ್ಳಲ್ಲ’. ವಿದ್ಯಾಬಾಲನ್‌ ಈ ಮಾತುಗಳು ಅವರ ಹೋರಾಟದ ಹಾದಿಯ ಸಣ್ಣ ಝಲಕ್‌ ಅಷ್ಟೆ.