ಮುಂಬೈ(ಸೆ.17): ಡೆಂಗ್ಯೂ ಕಾಯಿಲೆ ಜನಸಾಮಾನ್ಯರನ್ನು ಮಾತ್ರವಲ್ಲ ಹೀರೋಯಿನ್‌'ಗಳನ್ನು ಬಿಟ್ಟಿಲ್ಲ, ಡರ್ಟಿ ಪಿಕ್ಚರ್‌ ಖ್ಯಾತಿಯ ಬಾಲಿವುಡ್‌ ಸ್ಟಾರ್‌ ವಿದ್ಯಾಬಾಲನ್‌ ಕೂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಜೊತೆಗೆ ಅವರ ನೆರೆ ಮನೆಯವರು ಆಗಿರುವ ನಟ ಶಾಹೀದ್‌ ಕಪೂರ್‌ಗೆ ಮುಂಬೈ ಮಹಾನಗರ ಪಾಲಿಕೆ ನೋಟಿಸ್‌ ಜಾರಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಹೀದ್ ಜುಹುನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌'ನಲ್ಲಿ ಡೆಂಗ್ಯೂ ಹರಡುವ ಸೊಳ್ಳೆಯ ಬೆಳವಣಿಗೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಬಿಎಂಸಿ ನೋಟಿಸ್‌ ನೀಡಿದೆ. ಬಿಎಂಸಿ ಆರೋಗ್ಯ ಘಟಕದ ಪರಿಶೀಲನೆ ವೇಳೆ, ಶಾಹೀದ್‌ ಅವರ ಅಪಾರ್ಟ್‌ಮೆಂಟ್‌ನಲ್ಲಿ ಬಳಸದೇ ಇರುವ ಸ್ವಿಮ್ಮಿಂಗ್‌'ಫೂಲ್‌'ನಲ್ಲಿ ಸೊಳ್ಳೆಗಳು ಸಂತಾನೋತ್ಪತಿ ಹೆಚ್ಚಿಸಿಕೊಳ್ಳುತ್ತಿರುವುದು ಕಂಡು ಬಂದಿತ್ತು ಎನ್ನಲಾಗಿದೆ.

ಇನ್ನು ಮುಂಬೈನಲ್ಲಿ ಸೆಪ್ಟೆಂಬರ್‌ 11ರವರೆಗೆ 1500ಕ್ಕೂ ಹೆಚ್ಚು ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.