ಉರಿ ಖ್ಯಾತಿಯ ವಿಕ್ಕಿ ಕೌಶಲ್ ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಪ್ರತಿಭಾನ್ವಿತ ನಟ. ಉರಿ ಸಿನಿಮಾದಲ್ಲಿ ಇವರ ನಟನೆ ನೋಡಿದರೆ ಎಂಥವರೂ ಕೂಡಾ ಎದ್ದು ನಿಂತ ಸಲ್ಯೂಟ್ ಹೊಡೆಯಬೇಕು ಎನಿಸುವಷ್ಟು ಆಪ್ತವಾಗಿ ನಟಿಸಿದ್ದಾರೆ. 

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪ್ರಶಸ್ತಿ ವಿವರ

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2019 ಪ್ರಕಟವಾಗಿದ್ದು ಉತ್ತಮ ನಟ ಅವಾರ್ಡನ್ನು ವಿಕ್ಕಿ ಕೌಶಲ್ ಪಡೆದಿದ್ದಾರೆ. ಈ ಖುಷಿಯನ್ನು ವಿಕ್ಕಿ ಕೌಶಲ್ ಹಂಚಿಕೊಂಡಿದ್ದಾರೆ. ಭಾವಪೂರ್ಣ ಪತ್ರವೊಂದನ್ನು ಬರೆದಿದ್ದಾರೆ. 

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡಕ್ಕೆ ಸುಗ್ಗಿ!

‘ನನಗಾಗುತ್ತಿರುವ ಖುಷಿಯನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ನ್ಯಾಷನಲ್ ಅವಾರ್ಡ್ ನಲ್ಲಿ ನನ್ನ ಕೆಲಸವನ್ನು ಗುರುತಿಸಿದ್ದು ಖುಷಿಯಾಗುತ್ತಿದೆ. ಜ್ಯೂರಿ ಸಮಿತಿಯಲ್ಲಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಈ ಪ್ರಶಸ್ತಿಯನ್ನು ನಮ್ಮ ಸೇನೆಗೆ, ಸೈನಿಕರಿಗೆ, ಉರಿ ಚಿತ್ರತಂಡಕ್ಕೆ, ನಮ್ಮ ಕುಟುಂಬಕ್ಕೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.