ಡಾ. ರಾಜ್ ಕುಮಾರ್ , ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್​ಕುಮಾರ್, ಸುದೀಪ್,ದರ್ಶನ್ ಹೀಗೆ  ಹಲವು ನಟರೊಂದಿಗೆ ಸುಮಾರು 150 ಚಿತ್ರಗಳಲ್ಲಿ ಬ್ರಹ್ಮಾವರ್ ನಟಿಸಿದ್ದರು. 

ಬೆಂಗಳೂರು[ಸೆ.20]: ಕನ್ನಡದ ಹಲವು ನಾಯಕರೊಂದಿಗೆ ಪೋಷಕ ಪಾತ್ರದಲ್ಲಿ ನಟಿಸಿದ್ದ ಹಿರಿಯ ನಟ ಸದಾಶಿವ ಬ್ರಹ್ಮಾವರ್[90] ನಿಧನರಾಗಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬ್ರಹ್ಮಾವರ್ ಅವರು ನಿನ್ನೆ[ಸೆಪ್ಟೆಂಬರ್ 19] ಮಧ್ಯಾಹ್ನ ನಿಧನರಾಗಿದ್ದು ತಮ್ಮ ಸಾವಿನ ಸುದ್ದಿಯನ್ನು ಕುಟುಂಬದವರಿಗೆ ಹೊರತುಪಡಿಸಿ ಬೇರೆ ಯಾರಿಗೂ ತಿಳಿಸಬಾರದೆಂದು ಹೇಳಿದ ಹಿನ್ನೆಲೆಯಲ್ಲಿ ಇಂದು ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆಯ ನಂತರ ನಿಧನ ಸುದ್ದಿ ಎಲ್ಲರಿಗೂ ಗೊತ್ತಾಗಿದೆ. 

ಡಾ. ರಾಜ್ ಕುಮಾರ್ , ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್​ಕುಮಾರ್, ಸುದೀಪ್, ದರ್ಶನ್ ಹೀಗೆ ಹಲವು ನಟರೊಂದಿಗೆ ಸುಮಾರು 150 ಚಿತ್ರಗಳಲ್ಲಿ ಬ್ರಹ್ಮಾವರ್ ನಟಿಸಿದ್ದರು. ಸಿನಿಮಾಗಳಲ್ಲದೆ ಹಲವು ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ತಮ್ಮ ಮನೋಜ್ಞ ನಟನೆಯಿಂದ ಚಿತ್ರರಸಿಕರಲ್ಲಿ ಮನೆ ಮಾತಾಗಿದ್ದರು. 

ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಬ್ರಹ್ಮಾವರ್ ಕಳೆದ ವರ್ಷವಷ್ಟೇ ಕುಮಟಾದಿಂದ ತಪ್ಪಿಸಿಕೊಂಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ನಟ ಶಿವರಾಜ್ ಕುಮಾರ್, ಸುದೀಪ್ ಮುಂತಾದವರು ಬ್ರಹ್ಮಾವರ್ ಅವರಿಗೆ ಸಹಾಯ ಮಾಡಲು ಮುಂದಾಗಿದ್ದರೂ ಸ್ವಾಭಿಮಾನಿಯಾಗಿದ್ದ ಬ್ರಹ್ಮಾವರ್ ನಿರಾಕರಿಸಿದ್ದರು.

ಈ ಸುದ್ದಿಯನ್ನು ಓದಿ: ಬೀದಿಗೆ ಬಿದ್ದ ನಟ ಸದಾಶಿವ ಬ್ರಹ್ಮಾವರ್: ಬೆಳ್ಳಿತೆರೆ ಮೇಲೆ ಮಿಂಚಿದ ಕಲಾವಿದನ ಬದುಕು ಕತ್ತಲು!