ಸ್ಯಾಂಡಲ್ ವುಡ್ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಚಂದ್ರುರವರಿಗೆ ಇಂದು ಜಯದೇವದಲ್ಲಿ ಆಂಜಿಯೋಗ್ರಾಂ ನಡೆಯಲಿದೆ. ಡಾ. ಮಂಜುನಾಥ್ ಇವರಿಗೆ ಶಸ್ತ್ರಚಿಕಿತ್ಸೆ ನೀಡಲಿದ್ದಾರೆ. ಎರಡು ದಿನದ ಬಳಿಕ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಕುಟುಂಬಸ್ಥರು ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.  ಈ ಹಿಂದೆಯೂ ಒಂದು ಬಾರಿ ಆಂಜಿಯೋಗ್ರಾಂ ಮಾಡಿಸಿಕೊಂಡಿದ್ದರು. 

ಚಂದ್ರುರವರಿಗೆ ಭಾರೀ ಹೆಸರನ್ನು ತಂದು ಕೊಟ್ಟ ‘ಮುಖ್ಯಮಂತ್ರಿ’ ನಾಟಕ ಎರಡು ದಿನಗಳ ಹಿಂದೆ ಅಂದರೆ ಜೂ. 22 ರಂದು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ನಾಟಕ ಮುಗಿಯಲು ಇನ್ನೇನು 15 ನಿಮಿಷ ಇದೆ ಎನ್ನುವಾಗ ಚಂದ್ರುರವರು ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ಹೃದಯದಲ್ಲಿ  ಬ್ಲಾಕೆಜ್ ಆಗಿರುವುದಾಗಿ ತಿಳಿದು ಬಂದಿದೆ. ಹಾಗಾಗಿ ಇಂದು ಜಯದೇವ ಆಸ್ಪತ್ರೆಯಲ್ಲಿ ಆ್ಯಂಜಿಯೋಗ್ರಾಮ್ ನಡೆಯಲಿದೆ. 

ಪ್ರಸ್ತುತ ಮುಖ್ಯಮಂತ್ರಿ ಚಂದ್ರು ಅಗ್ನಿಸಾಕ್ಷಿ ಧಾರಾವಾಹಿ  ಹಾಗೂ ಡ್ರಾಮಾ ಜೂನಿಯರ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.