ಬೆಂಗಳೂರು(ಸೆ.19): ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಗೆ ಹುಟ್ಟುಹಬ್ಬದ ಸಂಭ್ರಮ. 33 ನೇ ವಸಂತಕ್ಕೆ ಕಾಲಿಟ್ಟಿರುವ ಹುಚ್ಚ ವೆಂಕಟ್ ತನ್ನ ಹುಟ್ಟುಹಬ್ಬದಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.

‘ತಿಕ್ಲ ಹುಚ್ಚ ವೆಂಕಟ್ ’ ಅನ್ನೋ ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾದ ನಿರ್ದೇಶನ , ನಿರ್ಮಾಣದ ಜೊತೆಗೆ ಅಭಿನಯ ಕೂಡ ಮಾಡ್ತಿದ್ದಾರೆ. 

ವಿಶೇಷ ಅಂದ್ರೆ ಚಿತ್ರದ ಎರಡು ಹಾಡುಗಳಿಗೆ ಹುಚ್ಚ ವೆಂಕಟ್ ಧ್ವನಿಯಾಗಿದ್ದಾರೆ. ರೊಮ್ಯಾಂಟಿಕ್ ಫೀಲ್ ನೀಡ್ತಿರುವ ಈ ಹಾಡುಗಳು ನೋಡುಗರ ಇಂಪ್ರೆಸ್ ಮಾಡ್ತಿವೆ. 

ಲಕ್ಷ್ಮಿಯೇ ಲಕ್ಷ್ಮಿಯೇ ಅಂಡ್ ಸಹನಾ ನೀನು ಹಾಡು: ತಿಕ್ಲ ಹುಚ್ಚ ವೆಂಕಟ್ ರಿಯಾಲಿಸ್ಟಿಕ್ ಸ್ಟೋರಿಯಾಗಿದ್ದು ಹುಚ್ಚ ವೆಂಕಟ್ ಅವ್ರ ರಿಯಲ್ ಸ್ಟೋರಿಯನ್ನ ಹೊಂದಿದೆ. ಹುಚ್ಚ ವೆಂಕಟ್ ಜೀವನದಲ್ಲಿ ನಡೆದ ಸಿಹಿ- ಕಹಿ ಘಟನೆಗಳನ್ನ ತಿಕ್ಲ ಹುಚ್ಚ ವೆಂಟಕ್ ಚಿತ್ರದಲ್ಲಿ ತೋರಿಸಲಾಗ್ತಿದೆಯಂತೆ.

ಸದ್ಯ ಹಾಡುಗಳ ರೆಕಾರ್ಡಿಂಗ್ ಕಾರ್ಯ ನಡಿತಿದೆ. ಸಂಗೀತ ನಿರ್ದೇಶಕ ಸತೀಶ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಈಗಾಗಲೇ ಎರಡು ಹಾಡುಗಳು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿವೆ. ಇನ್ನೂ 5 ಹಾಡುಗಳ ರೆಕಾರ್ಡಿಂಗ್ ಕೆಲಸ ನಡಿತಿದೆ.