Asianet Suvarna News Asianet Suvarna News

ವೀಣೆಯಲ್ಲಿ ಮೂಡಿದ ಬಂದ ಶಕೀರಾ ಹಾಡು ವಾಕ ವಾಕ ವೋ ವೋ : ವೀಡಿಯೋ ವೈರಲ್

ಪಾಪ್‌ ಸಿಂಗರ್‌ ಹಾಗೂ ಡಾನ್ಸರ್ ಶಕೀರಾ ಹಾಡಿದ 2010ರಲ್ಲಿ ಬಿಡುಗಡೆಯಾದ ವಾಕ ವಾಕ ದಿಸ್ ಇಸ್  ಟೈಮ್ ಫರ್‌ ಸೌತ್‌ ಆಫ್ರಿಕಾ ಹಾಡು ಕೇಳದವರಿಲ್ಲ,  ಹಾಡು ಕೇಳುತ್ತಿದ್ದಂತೆ ಎಲ್ಲರನ್ನು ಈ ಹಾಡನ್ನು ಮತ್ತೆ ಗುನುಗುವುದಲ್ಲದೇ ಕೈ ಕಾಲು ಕುಣಿಸಲು ಶುರು ಮಾಡುತ್ತಾರೆ. ಇಂತಹ ಹಾಡೊಂದು ವೀಣೆಯಲ್ಲಿ ಕೇಳಿಸಿದರೆ ಹೇಗಿರುತ್ತದೆ. ವೀಣಾ ವಾದಕರೊಬ್ಬರು ಈ ಪ್ರಯೋಗ ಮಾಡಿದ್ದು, ಕೇಳಲು ಸೊಗಸಾಗಿದೆ.

Veena player Mahesh Prasad played Shakira Famous song waka waka in Veena video goes full viral akb
Author
First Published Sep 19, 2023, 4:16 PM IST | Last Updated Sep 19, 2023, 4:16 PM IST

ಪಾಪ್‌ ಸಿಂಗರ್‌ ಹಾಗೂ ಡಾನ್ಸರ್ ಶಕೀರಾ ಯಾರಿಗೆ ತಾನೇ ಗೊತ್ತಿಲ್ಲ, ಆಕೆಯ ಒಂದೊಂದು ಹಾಡುಗಳು ಅದ್ಭುತ ಅದರಲ್ಲೂ ಆಕೆ ಹಾಡಿದ 2010ರಲ್ಲಿ ಬಿಡುಗಡೆಯಾದ ವಾಕಾ ವಾಕಾ ದಿಸ್ ಇಸ್  ಟೈಮ್ ಫರ್‌ ಸೌತ್‌ ಆಫ್ರಿಕಾ ಹಾಡು ಕೇಳದವರಿಲ್ಲ,  ಹಾಡು ಕೇಳುತ್ತಿದ್ದಂತೆ ಎಲ್ಲರನ್ನು ಈ ಹಾಡನ್ನು ಮತ್ತೆ ಗುನುಗುವುದಲ್ಲದೇ ಕೈ ಕಾಲು ಕುಣಿಸಲು ಶುರು ಮಾಡುತ್ತಾರೆ. ಇಂತಹ ಹಾಡೊಂದು ವೀಣೆಯಲ್ಲಿ ಕೇಳಿಸಿದರೆ ಹೇಗಿರುತ್ತದೆ. ಎಲ್ಲಿಯ ವೀಣೆ ಎಲ್ಲಿಯ ವೆಸ್ಟರ್ನ್‌ ಪಾಪ್‌ ಗಾಯನ ಎಲ್ಲಿಗೆಯಲ್ಲಿಯ ಸಂಬಂಧ ಎಂದು ಅಚ್ಚರಿ ಪಡಬೇಡಿ. ಏಕೆಂದರೆ ಇಲ್ಲೊಬ್ಬರು ವೀಣಾಕಾರರು ಇದನ್ನು ಸಾಧ್ಯವಾಗಿಸಿದ್ದು, ವೀಣೆಯಲ್ಲಿ ಮೂಡಿ ಬಂದ ಶಕೀರಾ ವಾಕಾ ಹಾಡು ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗಿದೆ. 

ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸೇರುವ ಸಂಗೀತ ಉಪಕರಣ ವೀಣೆಗೂ ಪಾಶ್ಚಾತ್ಯದ ಈ  ಫೇಮಸ್ ಹಾಡಿಗೂ ಯಾವುದೇ ಸಂಬಂಧವಿಲ್ಲ, ಆದರೂ ಈ ವೀಣೆಯಲ್ಲೂ ಈ ರೀತಿ ಪಾಶ್ಚಾತ್ಯ ಸಂಗೀತಾದ ಹಾಡನ್ನು ಇಷ್ಟೊಂದು ಸೊಗಸಾಗಿ ನುಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಈ ಗಾಯಕ. ವೀಣಾವಾದಕ ಮಹೇಶ್ ಪ್ರಸಾದ್ ಎಂಬುವವರ ಇನ್ಸ್ಟಾಗ್ರಾಮ್‌ನಿಂದ (Instagram) ಈ ವೀಡಿಯೋ ಅಪ್‌ಲೋಡ್ ಆಗಿದ್ದು, ಈ ಪ್ರಯೋಗ ಸಂಗೀತಾ ಲೋಕದಲ್ಲಿ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ ಎಂದರೆ ತಪ್ಪಾಗಲಾರದು. 

ವಾಕಾ ವಾಕಾ ವೋ ವೋ ಶಕೀರಾಗೆ ಸಂಕಷ್ಟ: 8 ವರ್ಷ ಜೈಲು ಶಿಕ್ಷೆ ಭೀತಿ

ತುಂಬಾ ಸೊಗಸಾಗಿ ವೀಣೆಯಲ್ಲಿ ಶಕೀರಾ ಅವರ ವಾಕ ವಾಕ ವೋ ವೋ ಹಾಡು ಮೂಡಿ ಬಂದಿದ್ದು, ವೀಣಾ ವಾದಕನ ಮೋಡಿಗೆ ನೋಡುಗರು ಮರುಳಾಗಿದ್ದಂತು ನಿಜ 2010ರ ಫುಟ್‌ಬಾಲ್ ವರ್ಲ್ಡ್‌ ಕಪ್ ಗೀತೆ ಇದಾಗಿದ್ದು, ವೀಣೆಯಲ್ಲಿ ಹೇಗೆ ಬಂದಿದೆ ನೋಡಿ ಎಂದು ಬರೆದು ಮಹೇಶ್ ಪ್ರಸಾದ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಈ ವೀಣೆಯಲ್ಲಿ ಮೂಡಿ ಬಂದ ಶಕೀರಾ (Shakira) ಹಾಡು ಕೇಳಿದವರೆಲ್ಲಾ ಬೆರಗಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಶಾಸ್ತ್ರೀಯ ವಾಕ ವಾಕ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಇಡೀ ಸಂಗೀತಾ ಇಂಡಸ್ಟ್ರಿಗೆ ಹೊಸ ಸಾಧ್ಯತೆಯ ಬಗ್ಗೆ ಯೋಚಿಸುವಂತೆ ಮಾಡಿದ್ದೀರಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಭಾರತದ ಕ್ಲಾಸಿಕಲ್ ಸಂಗೀತಾ ಏನೂ ಬೇಕಾದರೂ ಮಾಡಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.   ಫೇಸ್‌ಬುಕ್‌ನಲ್ಲಿ ಈ ವೀಡಿಯೋವನ್ನು ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ನಮ್ಮ ಸಂಗೀತಾ ಉಪಕರಣಗಳು ತುಂಬಾ ವೈವಿಧ್ಯತೆಯನ್ನು ಹೊಂದಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ವಾಕಾ ವಾಕಾ ವೋ ವೋ ಶಕೀರಾಗೆ ಸಂಕಷ್ಟ: 8 ವರ್ಷ ಜೈಲು ಶಿಕ್ಷೆ ಭೀತಿ

ಬರೀ ಇದೊಂದೆ ಅಲ್ಲ, ಇವರ ಸಾಮಾಜಿಕ ಜಾಲತಾಣದಲ್ಲಿ ಹಲವು ಸುಪ್ರಸಿದ್ಧ ಹಾಡುಗಳನ್ನು ಅವರು ವೀಣೆಯಲ್ಲಿ ನುಡಿಸಿದ್ದು ಕೇಳಲು ಬಹಳ ಮಧುರವಾಗಿದೆ.  ಇದರ ಜೊತೆಗೆ ಅವರು ಈ ಹಿಂದೆ ಶಕೀರಾ ಹಾಡಿದ ಮತ್ತೊಂದು ಫೇಮಸ್ ಹಾಡು ಬೇಬಿ ಕಾಮ್‌ಡೌನ್ ಬೇಬಿ ಕಾಮ್‌ಡೌನ್ ಹಾಡನ್ನು ಕೂಡ ನುಡಿಸಿದ್ದು, ಅದು ಕೂಡ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಅನೇಕರು ವೀಣೆಯಲಲ್ಲಿ ಮೂಡಿ ಬಂದ ಆ ಹಾಡಿಗೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ರಿಲೀಸ್ ಆದ ಜವಾನ್ ಚಿತ್ರದ ಹಾಡು ಕೂಡ ವೀಣೆಯಲ್ಲಿ ಮೂಡಿ ಬಂದಿದೆ. ನೀವು ಕೂಡ ವೀಣೆಯಲ್ಲಿ ಮೂಡಿ ಬಂದ ಈ ಹಾಡನ್ನು ಕೇಳೀ ನೋಡಿ... 

 

Latest Videos
Follow Us:
Download App:
  • android
  • ios