Asianet Suvarna News Asianet Suvarna News

ವಾಕಾ ವಾಕಾ ವೋ ವೋ ಶಕೀರಾಗೆ ಸಂಕಷ್ಟ: 8 ವರ್ಷ ಜೈಲು ಶಿಕ್ಷೆ ಭೀತಿ

ವಾಕಾ ವಾಕಾ ವೋ ವೋ ಖ್ಯಾತಿಯ ಗಾಯಕಿ ಶಕೀರಾಗೆ ಸಂಕಷ್ಟ ಎದುರಾಗಿದೆ. ತೆರಿಗೆ ವಂಚನೆ ಪ್ರಕರಣದಲ್ಲಿ ಸ್ಪಾನಿಷ್ ಕೋರ್ಟ್‌ ಒಂದು ಖ್ಯಾತ ಗಾಯಕಿ ಶಕೀರಾಗೆ ಎಂಟು ವರ್ಷ ಜೈಲು ಸಜೆ ವಿಧಿಸಿದೆ.

global music superstar Shakira will face jail in tax fraud case akb
Author
Barcelona, First Published Jul 30, 2022, 3:52 PM IST

ಬರ್ಸಿಲೋನಾ: ವಾಕಾ ವಾಕಾ ವೋ ವೋ ಖ್ಯಾತಿಯ ಗಾಯಕಿ ಶಕೀರಾಗೆ ಸಂಕಷ್ಟ ಎದುರಾಗಿದೆ. ತೆರಿಗೆ ವಂಚನೆ ಪ್ರಕರಣದಲ್ಲಿ ಸ್ಪಾನಿಷ್ ಕೋರ್ಟ್‌ ಒಂದು ಖ್ಯಾತ ಗಾಯಕಿ ಶಕೀರಾಗೆ ಎಂಟು ವರ್ಷ ಜೈಲು ಸಜೆ ವಿಧಿಸಿದೆ. ಜಾಗತಿಕ ಮಟ್ಟದ ಸಂಗೀತಾ ಸೂಪರ್ ಸ್ಟಾರ್ ಎನಿಸಿರುವ ಶಕೀರಾ ತೆರಿಗೆ ವಂಚನೆಯ ಆರೋಪದ ಮೇಲಿನ ಅರ್ಜಿಯಲ್ಲಿನ  ಒಪ್ಪಂದವನ್ನು ತಿರಸ್ಕರಿಸಿದ ನಂತರ ಸ್ಪಾನಿಷ್ ಕೋರ್ಟ್‌ ಈ ಆದೇಶ ನೀಡಿದೆ.

ಇದರೊಂದಿಗೆ ಬರ್ಸಿಲೋನಾದ ನ್ಯಾಯಾಧೀಶಕರು ಆಕೆಗೆ ಬರೋಬರಿ 24  ಮಿಲಿಯನ್ ಯುರೋ ಅಂದರೆ 1,94,37,68,415 ರೂ ದಂಡ ವಿಧಿಸಲು ಆಗ್ರಹಿಸಿದ್ದಾರೆ. 45 ವರ್ಷದ ಶಕೀರಾ ಅವರು ಸ್ಪಾನಿಷ್‌ನ ತೆರಿಗೆ ಇಲಾಖೆಗೆ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. 2012 ಹಾಗೂ 2014 ರ ಅವಧಿಯಲ್ಲಿ ಅವರು ಗಳಿಸಿದ ಸುಮಾರು 14.5 ಮಿಲಿಯನ್ ಯುರೋ ಸಂಪಾದನೆಗೆ ಸಂಬಂಧಿಸಿದಂತೆ ಅವರು ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಇದೆ. 

ಶಕೀರಾ ತಮ್ಮ ಸುಮಾರು 60 ಸಂಗೀತಾದ ಆಲ್ಬಂಗಳನ್ನು ಮಾರಾಟ ಮಾಡಿದ್ದು, ಮಂಗಳವಾರ ನಡೆದ ವಿಚಾರಣೆ ವೇಳೆಯ ಅರ್ಜಿಯ ಒಪ್ಪಂದವನ್ನು ಅವರು ತಿರಸ್ಕರಿಸಿದ್ದಾರೆ. ಹೇಳಿಕೆಯೊಂದರಲ್ಲಿ ಶಕೀರಾ ಪರ ವಕೀಲರು, ಶಕೀರಾ ಪ್ರಾಮಾಣಿಕಳು ಎಂಬ ಬಗ್ಗೆ ಸಂಪೂರ್ಣವಾಗಿ ಖಚಿತತೆ ಇದೆ. ಹಾಗಾಗಿ ಆಕೆ ಪ್ರಕರಣ ಕೋರ್ಟ್‌ನಲ್ಲಿ ತೀರ್ಮಾನವಾಗಲು ನಿರ್ಧರಿಸಿದ್ದಾಳೆ. ಅವಳ ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿಕೊಂಡಿದ್ದರು.

12 ವರ್ಷಗಳ ಬಳಿಕ ಬೇರ್ಪಟ್ಟ ಪಾಪ್ ಗಾಯಕಿ ಶಕಿರಾ - ಫುಟ್ ಬಾಲ್ ಸ್ಟಾರ್ ಜೆರಾರ್ಡ್ ಪಿಕ್!

ಮಾಧ್ಯಮ ವರದಿಗಳ ಪ್ರಕಾರ, ಸ್ಪ್ಯಾನಿಷ್ ಸರ್ಕಾರಿ ಪ್ರಾಸಿಕ್ಯೂಟರ್ ಒಬ್ಬರು ಈ ತೆರಿಗೆ ವಂಚನೆ ಪ್ರಕರಣವನ್ನು ಮಾತುಕತೆಯಲ್ಲಿ ಮುಗಿಸಲು ನಿರ್ಧರಿಸಿದ್ದರು. ಆದರೆ ಗಾಯಕಿ ಶಕೀರಾ, ಕಾನೂನಿನ ಮೇಲೆ ನನಗೆ ಬಲವಾಗಿ ನಂಬಿಕೆ ಇದ್ದು, ಈ ಪ್ರಕರಣದ ವಿರುದ್ಧ ತನಿಖೆಯಾಗಲಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದಾಗ್ಯೂ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಆದರೆ ಸ್ಪಾನಿಷ್ ಪ್ರಾಸಿಕ್ಯೂಟರ್ ಈ ಗಾಯಕಿಗೆ ಎಂಟು ವರ್ಷ ಜೈಲು ಶಿಕ್ಷೆಗೆ ಆಗ್ರಹಿಸುವುದಾಗಿ ಹೇಳಿದ್ದಾರೆ. ಏಕೆಂದರೆ ಶಕೀರಾ ತೆರಿಗೆ ವಂಚನೆಯ ಪ್ರಕರಣದ ಅರ್ಜಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 

 

ಇತ್ತ ಶಕೀರಾ ಈವರೆಗೆ ತಮ್ಮ 60 ಮಿಲಿಯನ್ ಮ್ಯೂಸಿಕ್ ಅಲ್ಬಂ ಗಳನ್ನು ಮಾರಾಟ ಮಾಡಿದ್ದು, ತಾನು ಯಾವುದೇ ತೆರಿಗೆ ವಂಚನೆ ಮಾಡಿಲ್ಲವೆಂಬುದು ಹೇಳಿಕೊಂಡಿದ್ದು, ಅದನ್ನೇ ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಮುಂದಾಗಿದ್ದಾರೆ. 2012 ಮತ್ತು 2014 ರ ನಡುವೆ ಶಕೀರಾ ಸಾಕಷ್ಟು ಮ್ಯೂಸಿಕ್‌  ಶೋಗಳನ್ನು ನಡೆಸಿದ್ದಾರೆ. ಇದರಿಂದ ಸಾಕಷ್ಟು ಸಂಪಾದನೆಯಾಗಿದ್ದು, ಅದರ ತೆರಿಗೆ ಕಟ್ಟಿಲ್ಲ ಎಂಬುದು ಆರೋಪವಾಗಿದೆ. ಆದರೆ 2015 ರಲ್ಲಿ ಅವರು ಎಲ್ಲಾ ತೆರಿಗೆಗಳನ್ನು ಪಾವತಿಸಿದ್ದಾರೆ. ಶಕೀರಾ ಸ್ಪ್ಯಾನಿಷ್ ತೆರಿಗೆ ಅಧಿಕಾರಿಗಳಿಗೆ 17.2 ಮಿಲಿಯನ್ ಯುರೋಗಳನ್ನು ಪಾವತಿಸಿದ್ದು ಎಲ್ಲ ಬಾಕಿಗಳಿಂದ ಮುಕ್ತರಾಗಿದ್ದಾರೆ ಎಂದು ಶಕೀರಾ ವಕೀಲರು ಹೇಳಿದ್ದಾರೆ.

 

ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಶಕೀರಾ, ತಮ್ಮ ವಿಭಿನ್ನ ಹಾಡುಗಾರಿಕೆಯಿಂದಲೇ ಜಗತ್ತನ್ನು ತನ್ನತ್ತ ಸೆಳೆದವರು. ಹೀಗಾಗಿ ಶಕೀರಾಗೆ ಜೈಲು ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಹಲವು ಮೀಮ್ಸ್‌ ಹರಿದಾಡುತ್ತಿವೆ. ಜೈಲಿನಿಂದ ಶಕೀರಾ ಓಡಿ ಹೋಗಲು ತಾವೆಲ್ಲಾ ಏನೇನೂ ಮಾಡುತ್ತೇವೆ ಮಾಡಬಹುದು ಎಂಬುದನ್ನು ಅವರ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ನಗು ಮೂಡಿಸುತ್ತಿದೆ. 

 

Follow Us:
Download App:
  • android
  • ios