ವಾಸು ನಾನ್ ಪಕ್ಕಾ ಕರ್ಮಷಿಯಲ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 3, Aug 2018, 11:16 AM IST
Vasu nan pakka comercial sandalwood film is already to set a name in industry
Highlights

ಅನೀಶ್ ತೇಜೇಶ್ವರ್ ಮತ್ತು ನಿಶ್ವಿಕಾ ಅಭಿನಯದ ವಾಸು ನಾನ್ ಪಕ್ಕಾ ಕರ್ಮಷಿಯಲ್ ಇಂದಿನಿಂದ ಚಿತ್ರಮಂದಿರದಲ್ಲಿ

ನಿಮಗೆ ಈ ಸಿನಿಮಾ ಯಾಕೆ ಮಹತ್ವ?

ನಾನು ಈ ಚಿತ್ರದ ನಾಯಕ ನಟ ಮಾತ್ರವಲ್ಲ. ನಿರ್ಮಾಪಕ ಕೂಡ. ಏಳು ಚಿತ್ರಗಳ ನಂತರ ಒಂದು ಸಿನಿಮಾ ನಿರ್ಮಾಣ ಮಾಡಿದ್ದೇನೆ. ಆದರೂ ನನಗೆ ಕಮರ್ಷಿಯಲ್ಲಾಗಿ ಲಾಂಚ್ ಆಗುತ್ತಿರುವ ಸಿನಿಮಾ ಇದು. ಹೀಗಾಗಿ ಈ ಚಿತ್ರದ ಮೇಲೆ ದೊಡ್ಡ ನಂಬಿಕೆ ಇದೆ.

ಇಲ್ಲಿ ನೀವು ಹೇಳುವುದಕ್ಕೆ ಹೊರಟಿರುವ ಕತೆ ಏನು?

ಒಬ್ಬ ಮಧ್ಯಮ ವರ್ಗದ ಕುಟುಂಬದ ಹುಡುಗನ ಹೈ ಕ್ಲಾಸ್ ಕಮರ್ಷಿಯಲ್ ಲವ್ ಸ್ಟೋರಿ. ಒಂದು ಪ್ರೇಮ ಕತೆಯ ಸುತ್ತ ಹುಟ್ಟಿಕೊಳ್ಳುವ ತಿರುವುಗಳು. ಆ ತಿರುವುಗಳಲ್ಲಿ ಕಾಣಿಸಿಕೊಳ್ಳುವ ಎರಡು ಮನಸ್ಸುಗಳು. ಪ್ರೀತಿಯೇ ಪ್ರಧಾನ. ಸಾಹಸವೇ ಪ್ರಮುಖ ಆಕರ್ಷಿಯಂತಿರುವ ಕತೆ ಇಲ್ಲಿದೆ.

ಪಾತ್ರಧಾರಿಗಳ ಕುರಿತು ಹೇಳುವುದಾದರೆ?

ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು. ಅವರು ಒಪ್ಪಿಕೊಂಡ ಮೊದಲ ಸಿನಿಮಾ ಇದು. ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅವಿನಾಶ್, ಮಂಜುನಾಥ ಹೆಗಡೆ, ಅರುಣ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರು ತಮ್ಮ ಪಾತ್ರಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಯಾವ ಪಾತ್ರವೂ ಅನಗತ್ಯವಾಗಿ ನುಸುಳುವುದಿಲ್ಲ.

ನಿಮ್ಮ ಚಿತ್ರಕ್ಕೆ ನೀವೇ ನಿರ್ಮಾಪಕ ರಾಗಿದ್ದರ ಹಿಂದಿನ ಗುಟ್ಟೇನು?

ಈ ಚಿತ್ರದ ಕತೆ. ಅಜಿತ್‌ವಾಸನ್ ಉಗ್ಗಿನ ಅವರು ಬರೆದುಕೊಂಡು ಬಂದಿದ್ದ ಈ ಕತೆ ನನಗೆ ಸೂಕ್ತ ಎಂಬುದು ಗೊತ್ತಿತ್ತು. ಆದರೆ, ಈ ಕತೆಯನ್ನು ಹಿಡಿದು ನಿರ್ಮಾಪಕರನ್ನು ಹುಡುಕುವುದು ಯಾಕೆ? ಕತೆ ಚೆನ್ನಾಗಿದೆ, ನನ್ನ ಮೇಲೆ ನನಗೆ ವಿಶ್ವಾಸ ಇದೆ. ಹಾಗಿದ್ದ ಮೇಲೆ ನಾನೇ ನಿರ್ಮಾಪಕ ಆದರೆ ಹೇಗೆ ಎನ್ನುವ ಯೋಚನೆ ಬಂದಿದ್ದರ ಫಲವಿದು. ಜತೆಗೆ ಈ ಚಿತ್ರವನ್ನು ಜನ ಗೆಲ್ಲಿಸುತ್ತಾರೆಂಬ ಭರವಸೆಯಲ್ಲೇ ಹಣ ಹೂಡಿದ್ದೇನೆ.

ಈ ಚಿತ್ರವನ್ನು ನೋಡುವುದಕ್ಕೆ ನೀವು ಕೊಡುವ ಕಾರಣಗಳೇನು?

ಇದು ಪಕ್ಕಾ ಕನ್ನಡಿಗರಿಂದ ಕನ್ನಡ ಪ್ರೇಕ್ಷಕರಿಗಾಗಿ ಮಾಡಿರುವ ಸಿನಿಮಾ. ಮನ ರಂಜನೆಯ ಜತೆಗೆ ಕನ್ನಡದವರು ಮನಸ್ಸು ಮಾಡಿದರೆ ಯಾವ ಮಟ್ಟದ ಕಮ ರ್ಷಿಯಲ್ ಸಿನಿಮಾ ಮಾಡುತ್ತಾರೆಂಬುದನ್ನು ತೋರಿಸುವ ಸಿನಿಮಾ. ಜತೆಗೆ ಒಂದು ಒಳ್ಳೆಯ ಎಮೋಷನಲ್ ಕತೆ ಇದೆ.

loader