ಸ್ಯಾಂಡಲ್ ವುಡ್ ನಲ್ಲಿ ಪ್ರಿಯಾಂಕ ಉಪೇಂದ್ರ ಅಭಿನಯದ ‘ದೇವಕಿ‘ ಚಿತ್ರದ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪ್ರಿಯಾಂಕ ಉಪೇಂದ್ರ, ಪುತ್ರಿ ಐಶ್ವರ್ಯಾ ಉಪೇಂದ್ರ ಒಟ್ಟಿಗೇ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಬಹಿರಂಗವಾಗಿದೆ. 

ಪ್ರಿಯಾಂಕ ಉಪೇಂದ್ರ ಕೊಳಗೇರಿಯಲ್ಲಿ ಯಾಕಿದ್ದಾರೆ?

ಉಪೇಂದ್ರ ಕೂಡಾ ದೇವಕಿ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಸೀನ್ ವೊಂದಕ್ಕೆ ಧ್ವನಿ ನೀಡಿದ್ದಾರಂತೆ. ಅಮ್ಮನ ಪ್ರೀತಿ, ತ್ಯಾಗದ ಬಗ್ಗೆ ಇರುವ ಸಾಲುಗಳಿಗೆ ಉಪ್ಪಿ ವಾಯ್ಸ್ ನೀಡಿದ್ದಾರೆ. 

 

ದೇವಕಿಯಲ್ಲಿ ಪ್ರಿಯಾಂಕ ಜೊತೆ ಅವರ ತಾಯಿ, ಮಗಳು ಐಶ್ವರ್ಯಾ ನಟಿಸಿದ್ದಾರೆ. ಉಪ್ಪಿ ಸೇರ್ಪಡೆಯಿಂದ ಇಡೀ ಕುಟುಂಬವೇ ಭಾಗಿಯಾದಂತಾಗಿದೆ. ಇದೇ ತಿಂಗಳ 5 ರಂದು ಚಿತ್ರ ರಿಲೀಸ್ ಆಗಲಿದೆ.